ಪ್ರೇಯಸಿ ಸುಶ್ಮಿತಾ ಸೇನ್ ಅವರ ಹೆಸರು ತೆಗೆದು ಹಾಕಿದ ಲಲೀತ್ ಮೋದಿ ಅವರು

ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್ ಜೊತೆ ಲವ್ವಿ ಡವ್ವಿ ಅಂತ ಡೇಟಿಂಗ್ ಮಾಡುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಸ್ಥಾಪಕ ಮತ್ತು ಉದ್ಯಮಿ ಆಗಿರೋ ಲಲಿತ್ ಮೋದಿ ಅವರು ಇದೀಗ ತಮ್ಮ ಲವ್ವಿ ಡವ್ವಿಗೆ ತೆರೆ ಎಳೆದಿದ್ದಾರೆ. ಹೌದು ಕೆಲವು ತಿಂಗಳುಗಳ ಹಿಂದೆಯಷ್ಟೇ ಲಲಿತ್ ಮೋದಿ ಅವರು ಸುಷ್ಮಿತಾ ಸೇನ್ ಅವರೊಟ್ಟಿಗೆ ರೊಮ್ಯಾಂಟಿಕ್ ಆಗಿ ಇದ್ದಂತಹ ಫೋಟೋಗಳನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಯಾವಾಗ ಮಾಜಿ ವಿಶ್ವ ಸುಂದರಿ ನಟಿ ಸುಶ್ಮಿತಾ ಸೇನ್ ಅವರು ಲಲಿತ್ ಮೋದಿ ಅವರನ್ನ ಆಲಂಗಿಸಿಕೊಂಡಿರೋ ಫೊಟೋ ವೈರಲ್ ಆಯ್ತೋ ಸಾರ್ವಜನಿಕವಾಗಿ ಭಾರಿ ಚರ್ಚೆಗೆ ಬಂತು.

ಇದರಿಂದಾಗಿ ಸುಷ್ಮಿತಾ ಸೇನ್ ಅವರ ಚಾರಿತ್ರ್ಯಕ್ಕೆ ಭಾರಿ ತೊಂದರೆ ಆಯ್ತು ಅಂತೇಳಿ ಸುಷ್ಮಿತಾ ಸೇನ್ ಹೊರ ದೇಶಕ್ಕೆ ಹೊರಟರು. ಅಲ್ಲಿ ತಮ್ಮ ಒಂದಷ್ಟು ಫೋಟೋ ಹಾಕಿ ತಾವು ಯಾವುದೇ ತಪ್ಪು ಮಾಡಿಲ್ಲ. ನಾನು ಮದುವೆ ಆಗಿಲ್ಲ. ನನ್ನ ಬಳಿ ಯಾವುದೇ ರಿಂಗ್ ಇಲ್ಲ. ನನ್ನ ಕೆಲಸ ಮತ್ತು ನನ್ನ ಬದುಕಿನಲ್ಲಿ ಭಾಗಿಯಾದವರಿಗೆ ಧನ್ಯವಾದಗಳು. ಥ್ಯಾಂಕ್ಯೂ ಗಾಯ್ಸ್ ಎಂದು ಬರೆದುಕೊಂಡು ಪೋಸ್ಟ್ ವೊಂದನ್ನ ಹಾಕಿದ್ದರು. ಅದರೀಗ ಇತ್ತೀಚೆಗೆ ಮತ್ತೊಂದು ಅಚ್ಚರಿ ಏನಪ್ಪಾ ಅಂದರೆ ಸುಷ್ಮಿತಾ ಸೇನ್ ಅವರು ತಮ್ಮ ಮಾಜಿ ಪ್ರಿಯಕರ ರೋಹ್ಮನ್ ಶಾಲ್ ಅವರೊಟ್ಟಿಗೆ ಇರೋ ಫೋಟೋವೊಂದನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಟೋ ನೋಡಿದ ಕೂಡಲೇ ಲಲಿತ್ ಮೋದಿ ಅವರು ಸುಷ್ಮಿತಾ ಸೇನ್ ಅವರನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅನ್ ಫ್ರೆಂಡ್ ಮಾಡಿದ್ದಾರೆ.

ಅದಲ್ಲದೇ ಈ ಲಲಿತ್ ಮೋದಿ ತಮ್ಮ ಹೆಸರಿನ ಮುಂದೆ ಸುಷ್ಮಿತಾ ಎಂದು ಸೇರಿಸಿಕೊಂಡಿದ್ದರು. ಅದನ್ನೂ ಕೂಡ ಇದೀಗ ರಿಮೂವ್ ಮಾಡಿದ್ದಾರೆ. ಹೀಗಾಗಿ ನಟಿ ಸುಶ್ಮಿತಾ ಸೇನ್ ಮತ್ತು ಉದ್ಯಮಿ ಲಲಿತ್ ಮೋದಿ ಅವರ ಸಂಬಂಧ ಇದೀಗ ಮುರಿದು ಬಿದ್ದಿದೆ. ಇತ್ತ ನಟಿ ಸುಶ್ಮಿತಾ ಸೇನ್ ಮಾಜಿ ಬಾಯ್ ಫ್ರೆಂಡ್ ಜೊತೆಗೆ ಹೊರ ದೇಶದಲ್ಲಿ ಸುತ್ತಾಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಸುಷ್ಮಿತಾ ಸೇನ್ ಅವರೊಟ್ಟಿಗೆ ಇದ್ದ ಲಲಿತ್ ಮೋದಿ ಅವರ ಫೋಟೋ ಬಗ್ಗೆ ಸ್ವತಃ ಲಲಿತ್ ಮೋದಿ ಅವರ ಮಗ ರುಚೀರ್ ಮೋದಿ ಅವರು ತಮ್ಮ ತಂದೆಯ ಜೊತೆ ಸುಷ್ಮಿತಾ ಸೇನ್ ಅವರು ಡೇಟಿಂಗ್ ನಡೆಸುತ್ತಿರುವ ಬಗ್ಗೆ ಮೊದಲೇ ತಿಳಿದಿತ್ತು ಎಂದು ತಿಳಿಸಿದ್ದರು.

Leave a Reply

%d bloggers like this: