ಪ್ರೇಕ್ಷಕರ ಭಾರಿ ಮೆಚ್ಚುಗೆ ಇಂದ ಗೆದ್ದು ಬೀಗಿದ ಕಾಂತಾರ ಚಿತ್ರ, ಮೊದಲ ದಿನ ಗಳಿಸಿದ್ದೆಷ್ಟು

ರಿಷಭ್ ಶೆಟ್ಟಿ ಅವರ ಸಾರಥ್ಯದಲ್ಲಿ ಮೂಡಿಬಂದ ಕಾಂತಾರ ಸಿನಿಮಾ ಎಲ್ಲೆಡೆ ಭರ್ಜರಿ ಸದ್ದು ಮಾಡುತ್ತಿದೆ. ಕಾಂತಾರ ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ಅವರ ಅಮೋಘ ನಟನೆಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಅಷ್ಟೇ ಅಲ್ಲ ರಿಷಬ್ ಶೆಟ್ಟಿ ಒಬ್ಬ ಸೃಜನಾತ್ಮಕ ನಿರ್ದೇಶಕರಾಗಿ ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆ ಸಿನಿಮಾದ ಮೂಲಕ ಗುರುತಿಸಿಕೊಂಡಿದ್ದರು. ಇದೀಗ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಬರುವ ದೈವ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ ಸಿನಿಪ್ರೇಕ್ಷಕರಿಗೆ ಒಂದು ಹೊಸ ಅನುಭವ ನೀಡಿದ್ದಾರೆ. ರಿಷಬ್ ಶೆಟ್ಟಿ ಅವರ ಅಮೋಘ ನಟನೆಗೆ ಕಂಡು ನಿಜಕ್ಕೂ ಕೂಡ ಪ್ರೇಕ್ಷಕರು ನಿಬ್ಬೆರಗಾಗಿದ್ದಾರೆ‌. ರಿಷಬ್ ಶೆಟ್ಟಿ ಅವರ ನಟನೆ ಕಂಡು ಇತ್ತೀಚೆಗೆ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಅದೇ ರೀತಿಯಾಗಿ ಸೆಲೆಬ್ರಿಟಿ ಪ್ರೀಮಿಯರ್ ಶೋನಲ್ಲಿ ಕಾಂತಾರ ಸಿನಿಮಾ ನೋಡಿದ ಬ್ಯೂಟಿಕ್ವೀನ್ ರಮ್ಯಾ ಅವರು ಕೂಡ ರಿಷಬ್ ಶೆಟ್ಟಿ ಅವರ ನಟನೆ, ನಿರ್ದೇಶನಕ್ಕೆ ಫುಲ್ ಫಿಧಾ ಆಗಿದ್ರು. ಕಾಂತಾರ ಸಿನಿಮಾ ರಿಲೀಸ್ ನಿನ್ನೆ ಅಂದರೆ ಸೆಪ್ಟೆಂಬರ್ 30ರಂದು ವರ್ಲ್ಢ್ ವೈಡ್ ರಿಲೀಸ್ ಆಗಿತ್ತು. ಬಿಡುಗಡೆ ಆದ ಎಲ್ಲಾ ಕಡೆ ಕಾಂತಾರ ಸಿನಿಮಾ ಅಪಾರ ಪ್ರಶಂಸೆ ಪಡೆದುಕೊಂಡಿದೆ. ಅದರಂತೆ ಬಾಕ್ಸ್ ಆಫೀಸ್ ನಲ್ಲಿಯೂ ಕೂಡ ಕಾಂತಾರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಪ್ರೀಮಿಯರ್ ಶೋ ನಲ್ಲಿ ಕಾಂತಾರ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ಅದರ ಜೊತೆಗೆ ಟ್ರೇಲರ್ ಮತ್ತು ಹಾಡಿನ ಮೂಲಕ ಕಾಂತಾರ ಸಿನಿಮಾ ಭಾರಿ ನಿರೀಕ್ಷೆ ಹುಟ್ಟಿಸಿತ್ತು. ಹಾಗಾಗಿ ನಿರೀಕ್ಷೆಯಂತೆಯೇ ಕಾಂತಾರ ಸಿನಿಮಾ ನೋಡಲು ಪ್ರೇಕ್ಷಕರು ಥಿಯೇಟರ್ ಗಳತ್ತ ಮುಗಿ ಬಿದ್ದರು.

ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರೋ ಕಾಂತಾರ ಸಿನಿಮಾ ಮೂಲಗಳ ಪ್ರಕಾರ ಮೊದಲ ದಿನವೇ ಬರೋಬ್ಬರಿ 5.2 ಕೋಟಿಗೂ ಅಧಿಕ ಗಳಿಕೆ ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದೆಯಂತೆ. ವಾರಾಂತ್ಯದ ವೇಳೆಗೆ ಕಾಂತಾರ ಸಿನಿಮಾ 15 ರಿಂದ 20 ಕೋಟಿಯಷ್ಟು ಕಲೆಕ್ಷನ್ ಮಾಡಲಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಕಾಂತಾರ ಸಿನಿಮಾವನ್ನ ಹೊಂಬಾಳೆ ಫಿಲಂಸ್ ಬ್ಯಾನರಡಿಯಲ್ಲಿ ವಿಜಯ್ ಕಿರಗಂದೂರ್ ಅವರು ಬಂಡವಾಳ ಹೂಡಿದ್ದು, ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ರಿಷಬ್ ಶೆಟ್ಟಿಗೆ ಜೋಡಿಯಾಗಿ ಸಪ್ತಮಿಗೌಡ ನಟಿಸಿದ್ದು, ತಾರಾಗಣದಲ್ಲಿ ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕಿಶೋರ್ ಸೇರಿದಂತೆ ಒಂದಷ್ಟು ಅನುಭವಿ ಕಲಾವಿದರು ತಮ್ಮ ಪಾತ್ರಕ್ಕೆ ಜೀವತುಂಬಿ ನಟಿಸಿದ್ದಾರೆ‌.

Leave a Reply

%d bloggers like this: