ಪ್ರತಿಯೊಂದು ಗ್ರಾಮ ಪಂಚಾಯತಿಗಳಿಗೆ ಈ ಮೂಲಗಳಿಂದ ದುಡ್ಡು ಬರುತ್ತದೆ 99%ಜನರಿಗೆ ಈಗಲೂ ತಿಳಿದಿಲ್ಲ

ಜನರಿಗೆ ಗ್ರಾಮ ಪಂಚಾಯತಿಯಿಂದ ಸಿಗುವ ಸೌಲಭ್ಯಗಳು ಏನೇನು ಅಂತ ನಿಮಗೆ ಗೊತ್ತು.ಗ್ರಾಮ ಪಂಚಾಯತಿಗಳು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತವೆ.ಆ ಅಭಿವೃದ್ಧಿ ಯೋಜನೆಗಳಿಗೆ ಹಣ ಬೇಕಾಗುತ್ತದೆ.ಪ್ರತಿ ಗ್ರಾಮ ಪಂಚಾಯತಿಗೆ ಎಷ್ಟು ದುಡ್ಡು ಬರುತ್ತದೆ,ಎಲ್ಲಿಂದ,ಯಾವಾಗ,ಹೇಗೆ ಬರುತ್ತೆ ಹಾಗೂ ಗ್ರಾಮ ಪಂಚಾಯತಿಯ ಪ್ರಮುಖ ಆದಾಯ ಮೂಲ ಯಾವುದು ಖರ್ಚೆಷ್ಟು ನೋಡಿ.ಗ್ರಾಮ ಪಂಚಾಯತಿಗೆ ನಾಲ್ಕು ಮೂಲಗಳಿಂದ ಆದಾಯ ಬರುತ್ತದೆ.ರಾಜ್ಯದ ಶಾಸನಬದ್ಧ ಅನುದಾನ,ಕೇಂದ್ರ ಹಣಕಾಸು ಆಯೋಗದ ಅನುದಾನ,ಗ್ರಾಮ ಪಂಚಾಯಿತಿಯ ಸ್ವಂತ ಆದಾಯ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಪ್ರಾಯೋಜಿತ ಯೋಜನೆಗಳ ಅನುದಾನ.
ಇವೆಲ್ಲದರ ಆಧಾರದ ಮೇಲೆ ಗ್ರಾಮ ಪಂಚಾಯತಿಗಳು ಕಾರ್ಯ ನಿರ್ವಹಿಸುತ್ತವೆ.ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸಿನ ಮೇರೆಗೆ ವಾರ್ಷಿಕವಾಗಿ ಗ್ರಾಮ ಪಂಚಾಯತಿಗೆ ಹತ್ತು ಲಕ್ಷ ಮಂಜೂರಾಗುತ್ತದೆ.ಇದರಲ್ಲಿ ಶೇ.40 ರಷ್ಟು ಹಣವನ್ನು ಗ್ರಾಮ ಪಂಚಾಯತಿಯ ನೌಕರರಿಗೆ ವೇತನ ಕೊಡಲು ವಿನಿಯೋಗಿಸಬೇಕು ಹಾಗೂ ಶೇ.60ರಷ್ಟನ್ನು ವಿದ್ಯುತ್ ಬಿಲ್ ಪಾವತಿಗೆ ಉಪಯೋಗಿಸಬೇಕು.ಕೇಂದ್ರ ಹಣಕಾಸು ಆಯೋಗ ಕೊಡುವ ಅನುದಾನ 30-40 ಲಕ್ಷ.ಅದರ 25% ರಷ್ಟು ಹಣವನ್ನು ಸ್ವಚ್ಛತಾ ಕಾರ್ಯಗಳಿಗೆ,25% ರಷ್ಟನ್ನು ಕುಡಿಯುವ ನೀರು ಉತ್ಪಾದನೆಗೆ ಹಾಗೂ 50% ರಷ್ಟನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬೇಕು.

ಮೂರನೇ ಆದಾಯ ಮೂಲವಾದ ಗ್ರಾಮ ಪಂಚಾಯತಿಯ ಸ್ವಂತ ಆದಾಯ.ಗ್ರಾಮ ಪಂಚಾಯತಿಯ ಆಸ್ತಿಯ ಮೇಲೆ ತೆರಿಗೆ ವಿಧಿಸುವ ಅಧಿಕಾರವಿರುತ್ತದೆ.ತೆರಿಗೆಯಿಂದ ಸಂಗ್ರಹವಾಗುವ ಹಣವು ಅದರ ಸ್ವಂತ ಆದಾಯ.ಗ್ರಾಮ ಪಂಚಾಯತಿ ತನ್ನ ಸ್ವಂತ ಮಳಿಗೆಗಳು,ಸಮುದಾಯ ಭವನ,ಕಟ್ಟಡಗಳ ಬಾಡಿಗೆ ಹಣ,ಫೋನ್ ಟವರ್ ಬಾಡಿಗೆ,ಜಾಹೀರಾತು ಫಲಕಗಳ ಮೇಲಿನ ತೆರಿಗೆ ಇವುಗಳು ಗ್ರಾಮ ಪಂಚಾಯತಿಯ ಪ್ರಮುಖ ಆದಾಯ.
ನಾಲ್ಕನೆಯ ಮೂಲದ ಆದಾಯ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗ್ರಾಮೀಣ ಮಟ್ಟದಲ್ಲಿ ವಸತಿ ಯೋಜನೆ,ಸ್ವಚ್ಛ ಭಾರತ ಅಭಿಯಾನ,ಉದ್ಯೋಗ ಖಾತರಿ ಯೋಜನೆ ಮುಂತಾದ ಅನೇಕ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಾರ್ಷಿಕವಾಗಿ ಒಟ್ಟಾರೆ 5-7 ಕೋಟಿಯಷ್ಟು ಹಣ ನೀಡುತ್ತದೆ.ಇಷ್ಟರಿಂದಲೇ ಗ್ರಾಮ ಪಂಚಾಯತಿ ತನ್ನ ಗ್ರಾಮವನ್ನು ಅಭಿವೃದ್ಧಿ ಮಾಡಿಕೊಳ್ಳಬೇಕು.ಈ ಹಣ ಅಭಿವೃದ್ಧಿಗೆ ವಿನಿಯೋಗ ಆಗಲೇಬೇಕು.