ಪ್ರತಿಷ್ಠಿತ ಏರಿಯಾದಲ್ಲಿ 8 ಎಕರೆ ಫಾರ್ಮ್ ಹೌಸ್ ಖರೀದಿಸಿದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ, ಬೆಲೆ ಎಷ್ಟು ಗೊತ್ತಾ

ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಅವರು ಫಾರ್ಮ್ ಕಳೆದುಕೊಳ್ಳುತ್ತಿದ್ದಾರೆ ಅನ್ನೋ ಮಾತಿನ ನಡುವೆ ಇತ್ತೀಚೆಗೆ ನಡೆಯುತ್ತಿರುವ ಏಷ್ಯಾ ಕಪ್ ನಲ್ಲಿ ಪಾಕಿಸ್ತಾನ ಮತ್ತು ಭಾರತ ಪಂದ್ಯಗಳ ನಡುವೆ ವಿರಾಟ್ ಕೊಹ್ಲಿ ಅವರು ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಮತ್ತೆ ತಮ್ಮ ಫಾರ್ಮ್ ಗೆ ಮರಳಿದ್ದಾರೆ. ಇದು ವಿರಾಟ್ ಕೊಹ್ಲಿ ಅವರ ಅಭಿಮಾನಿಗಳಿಗೆ ಸಖತ್ ಖುಷಿ ಆಗಿತ್ತು. ಇನ್ನು ಇದೀಗ ವಿರಾಟ್ ಕೊಹ್ಲಿ ಅವರ ಬಗ್ಗೆ ಕೇಳಿ ಬರುತ್ತಿರೋ ಹೊಸದೊಂದು ಸುದ್ದಿ ಏನಪ್ಪಾ ಅಂದ್ರೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗಳು ಫಾರ್ಮ್ ಹೌಸ್ ವೊಂದನ್ನ ಖರೀದಿ ಮಾಡಿದ್ದಾರಂತೆ. ಲವ್ ಕಮ್ ಅರೆಂಜ್ ಮ್ಯಾರೇಜ್ ಆದ ವಿರುಷ್ಕಾ ದಂಪತಿಗಳು ಬ್ಯೂಟಿಫಲ್ ಕಪಲ್ ಗಳಲ್ಲಿ ಒಬ್ಬರು. ಸದ್ಯಕ್ಕೆ ಮುದ್ದಾದ ಹೆಣ್ಣು ಮಗುವಿನ ಪೋಷಕರಾಗಿರೋ ಈ ಲವ್ಲೀ ಕಪಲ್ ಮುಂಬೈನಲ್ಲಿರೋ ಅಲಿಬಾಗ್ ಪ್ರದೇಶದಲ್ಲಿ ಸರಿ ಸುಮಾರು ಎಂಟು ಎಕರೆಯ ಫಾರ್ಮ್ ಹೌಸ್ ಖರೀದಿ ಮಾಡಿದ್ದಾರೆ.

ಇತ್ತೀಚೆಗೆ ತಾನೇ ವಿರಾಟ್ ಕೊಹ್ಲಿ ಅವರ ಸೋದರ ವಿಕಾಸ್ ಕೊಹ್ಲಿ ಈ ಜಮೀನಿನ ವಹಿವಾಟು ನಡೆಸಿಕೊಂಡು ಬಂದಿದ್ದಾರೆ ಎನ್ನಲಾಗ್ತಿದೆ. ವಿರುಷ್ಕಾ ದಂಪತಿಗಳು ಈ ಫಾರ್ಮ್ ಹೌಸ್ ಗಾಗಿ ಈಗಾಗಲೇ ಮುಂಗಡವಾಗಿ ಸಮೀರಾ ಹ್ಯಾಬಿಟಾಟ್ಸ್ ರಿಯಲ್ ಎಸ್ಟೇಟ್ ಸಂಸ್ಥೆಗೆ 1.15 ಕೋಟಿ ನೀಡಿದ್ದಾರಂತೆ. ಒಟ್ಟಾರೆಯಾಗಿ ಅಲಿಬಾಗ್ ನಲ್ಲಿರೋ ಈ ಫಾರ್ಮ್ ಹೌಸ್ ಗಾಗಿ ವಿರುಷ್ಕಾ ದಂಪತಿಗಳು ಬರೋಬ್ಬರಿ 19.24 ಕೋಟಿ.ರೂ ವೆಚ್ಚ ಮಾಡಿದ್ದಾರಂತೆ. ಈ ಹಿಂದೆ ಮಾಜಿ ಕ್ರಿಕೆಟಿಗ ರಾಷ್ಟ್ರೀಯ ಕೋಚ್ ರವಿಶಾಸ್ತ್ರಿ ಅವರು ಕೂಡ ಇದೇ ಅಲಿಬಾಗ್ ನಲ್ಲಿ ಅದ್ಧೂರಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ಮುಂಬೈನ ಪ್ರತಿಷ್ಟಿತ ಪ್ರದೇಶಗಳಲ್ಲಿ ಒಂದಾಗಿರೋ ಅಲಿಬಾಗ್ ನಲ್ಲಿ ವಿರುಷ್ಕಾ ದಂಪತಿಗಳು ದೊಡ್ಡದಾದ ಫಾರ್ಮ್ ಹೌಸ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಇನ್ನು ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಅವರನ್ನ ಪ್ರೀತಿಸಿ ಮದುವೆಯಾದ ನಂತರ ಬಣ್ಣದ ಲೋಕ ತೊರೆದು ಕುಟುಂಬ ಮತ್ತು ತಮ್ಮ ಮುದ್ದಿನ ಮಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Leave a Reply

%d bloggers like this: