ಪ್ರತಿನಿತ್ಯ ಮೊಳಕೆ ಕಾಲು ತಿನ್ನೋದ್ರಿಂದ ಈ ರೋಗಗಳು ದೂರವಾಗತ್ತೆ, ಎಂದಿಗೂ ನಿಮ್ಮ ಹತ್ರ ಬರಲ್ಲ

ಆರೋಗ್ಯವೇ ಭಾಗ್ಯ. ಆದರೆ ಆರೋಗ್ಯ ಎಂಬುದನ್ನ ನಾವು ಇಂದು ಕೇವಲ ಹೆಸರಿನಲ್ಲಿ ಮಾತ್ರ ಕೇಳಬೇಕಾಗಿದೆ. ಏಕೆಂದರೆ ಇಂದಿನ ಆಧುನಿಕ ಜೀವನ ಶೈಲಿ, ಆಹಾರ ಪದ್ದತಿ ಮತ್ತ ಆಹಾರದಲ್ಲಿ ಗುಣಮಟ್ಟ ಎಂಬುದನ್ನ ಎಷ್ಟರ ಮಟ್ಟಿಗೆ ಕಾಣುತ್ತಿದ್ದೇವೆ. ಮನುಷ್ಯರು ಮಾನಸಿಕವಾಗಿ, ಬೌದ್ದಿಕವಾಗಿ ,ವ್ಯಾವಹಾರಿಕವಾಗಿ ಕಲುಷಿತಗೊಂಡ ಮೇಲೆ ಆಹಾರ ಕಲುಷಿತವಾಗಿರುವುದಿಲ್ಲವೇ. ಏನೇ ಆದರು ನಾವು ಆಹಾರವಿಲ್ಲದೆ ಬದುಕಲು ಸಾಧ್ಯವಿಲ್ಲ. ಇರುವಂತಹ, ದೊರೆಯುವಂತಹ ಉತ್ತಮ ಆಹಾರವನ್ನು ಸೇವಿಸಿ ಬದುಕು ಸಾಗಿಸಬೇಕು. ಅಂತೆಯೇ ನಮ್ಮ ಸಧೃಡ ಆರೋಗ್ಯಕ್ಕಾಗಿ ನಾವು ಯಾವ ರೀತಿಯ ಪೋಷಕಾಂಶಗಳಿರುವ ಆಹಾರವನ್ನು ಸೇವಿಸಬೇಕು ಎಂಬುದನ್ನ ಕೂಡ ಅರಿತಿರಬೇಕು. ನಾವು ಉತ್ತಮ ಆರೋಗ್ಯಕ್ಕಾಗಿ ಕೆಲವು ಸಾವಯುವ ತರಕಾರಿ, ಕಾಳುಗಳನ್ನ ಸೇವಿಸಬೇಕು.

ಹಾಗಾದರೆ ಯಾವುದು ಅಂತೀರಾ. ವೈದ್ಯರು ಹೇಳುವಂತೆ ಕಾಳುಗಳಲ್ಲಿ ಉತ್ತಮವಾದ ಪೋಷಕಾಂಶಗಳು ಇರುತ್ತವೆ. ಅದರಲ್ಲಿಯೂ ಈ ಮೊಳಕೆಯೊಡೆದ ಕಾಳುಗಳಲ್ಲಿ ಅತ್ಯಧಿಕ ಪ್ರೋಟಿನ್ ಇರುತ್ತವೆ. ಕಪ್ಪು ಕಡ್ಲೆಕಾಳು, ಹುರುಳಿ ಕಾಳು, ಹೆಸರು ಕಾಳುಗಳನ್ನ ರಾತ್ರಿಯಿಡಿ ನೆನೆಸಿಟ್ಟು ಮಾರನೇ ದಿನ ಮೊಳಕೆಯೊಡೆದ ಈ ಕಾಳುಗಳನ್ನ ಸೇವಿಸಿದರೆ ದೇಹಕ್ಕೆ ಪೋಷಕಾಂಶಗಳು ದೊರೆತು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೆ ದೈಹಿಕವಾಗಿಯೂ ಕೂಡ ಸಧೃಢವಾಗಿರಬಹುದಾಗಿರುತ್ತದೆ. ಇನ್ನು ಈ ಮೊಳಕೆಯೊಡೆದ ಕಾಳುಗಳನ್ನ ತಿನ್ನುವುದರಿಂದ ಜೀರ್ಣಕ್ರಿಯೆ ಅಂತಹ ಸಮಸ್ಯೆಗಳು ನಿವಾರಣೆ ಆಗುತ್ತವೆ. ರೋಗ ನಿರೋಧಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತವೆ. ಇನ್ನು ಈ ಮೊಳಕೆ ಕಾಳುಗಳನ್ನ ಸೇವನೆ ಮಾಡುವುದರಿಂದ ದೇಹದ ತೂಕವನ್ನ ನಿಯಮಿತವಾಗಿ ಇಳಿಸಬಹುದಾಗಿರುತ್ತದೆ.

ಇನ್ನು ಮೊಳಕೆಯೊಡೆದ ಕಾಳುಗಳಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ದೇಹದಲ್ಲಿ ಬಿಳಿ ರಕ್ತ ಕಣಗಳು ಮತ್ತು ಕೆಂಪು ರಕ್ತ ಕಣಗಳನ್ನು ಹೆಚ್ಚು ಮಾಡಲು ಪೂರಕವಾಗಿ ಕೆಲಸ ಮಾಡುತ್ತವೆ. ದೇಹದಲ್ಲಿ ಆಮ್ಲಜನಕವನ್ನು ಹೆಚ್ಚು ಮಾಡಿ ದಿನಪೂರ್ತಿ ಉತ್ಸಾಹದಿಂದ ಇರುವಂತೆ ಮಾಡುತ್ತದೆ. ನವ ದಂಪತಿಗಳು ಈ ಮೊಳಕೆ ಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು ಎಂದು ಹಿರಿಯರು ಹೇಳುತ್ತಲೇ ಇರುತ್ತಾರೆ. ಅದಕ್ಕೆ ಮುಖ್ಯ ಕಾರಣ ಅಂದರೆ ಈ ಮೊಳಕೆ ಕಾಳುಗಳು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆಯಂತೆ.ಒಟ್ಟಾರೆಯಾಗಿ ಆಧುನಿಕ ಜೀವನ ಶೈಲಿಯಿಂದ ಕುಂದುತ್ತಿರುವ ದೈಹಿಕ ಆರೋಗ್ಯ ಬಲಪಡಿಸುವುದಕ್ಕಾಗಿ ಈ ಮೊಳಕೆ ಕಾಳುಗಳು ಉತ್ತಮವಾಗಿ ಸಹಾಯಕವಾಗಿರುತ್ತವೆ ಎಂದು ವೈದ್ಯರು ತಿಳಿಸುತ್ತಾರೆ‌.

Leave a Reply

%d bloggers like this: