ಪ್ರತಿನಿತ್ಯ 35 ಕೆಜಿ ತಿನ್ನೋ ಆಹಾರದ ಜೊತೆ ವಿಷ ಸೇವಿಸುತ್ತಿದ್ದ ಈ ರಾಜ! ಆತನ ಬಟ್ಟೆ ಮುಟ್ಟಿದರೆ ಸಾವು ಖಚಿತ, ಇತಿಹಾಸದಲ್ಲೇ ಮರೆಯಾದ ರಾಜನ ರೋಚಕ ಕಥೆ

ತಾನು ಧರಿಸುತ್ತಿದ್ದ ಉಡುಗೆ-ತೊಡಗೆಗಳಲ್ಲೂ ವಿಷ ತುಂಬಿಕೊಂಡಿದ್ದ ಈ ರಾಜ ದಿನವೊಂದಕ್ಕೆ ಬರೋಬ್ಬರಿ 35 ಕೆ.ಜಿ.ಗೂ ಅಧಿಕ ಆಹಾರ ಸೇವಿಸುತ್ತಿದ್ದ..! ಶತ -ಶತಮಾನಗಳ ಹಿಂದೆ ರಾಜ್ಯ ಸಾಮ್ರಾಜ್ಯ,ವಿವಿಧ ಪ್ರಾಂತ್ಯಗಳನ್ನು ರಾಜ ಮಹಾರಾಜರು ಆಳ್ವಿಕೆ ಮಾಡುತ್ತಿದ್ದರು.ರಾಜರು ತಮ್ಮ ಪ್ರಜೆಗಳ ಸಮಸ್ಯೆ ತಿಳಿದುಕೊಳ್ಳಲು ಆಗಾಗ ಅವರಿರುವ ಸ್ಥಳಕ್ಕೇನೇ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಕೇಳಿ ಪರಿಹಾರ ನೀಡುತ್ತಿದ್ದರು‌.ರಾಜ ಅಂದರೆ ಅಂದಿನ ಕಾಲದಲ್ಲಿ ದೈವಾಂಶ ಸಂಭೂತ ಎಂದೇ ಪ್ರಜೆಗಳು ನಂಬಿದ್ದರು,ಅಂತೆಯೆ ಅವರನ್ನು ಭಯ-ಭಕ್ತಿಯಿಂದ ಕಾಣುತ್ತಿದ್ದರು. ಅಂದಿನ ದಿನಮಾನದ ರಾಜರುಗಳು ತಮ್ಮ ಉಡುಪು-ಆಭರಣಗಳು,ವೈಭವೋಪೇತ ಆಡಳಿತ,ಭಕ್ಷ ಭೋಜನ ಪ್ರಿಯರು.ಗರಡಿ ಮನೆಗಳಲ್ಲಿ ತಮ್ಮ ದೇಹವನ್ನು ದಂಡಿಸುತ್ತಿದ್ದರು. ಅಂತೆಯೇ ಅವರ ದೇಹಧಾರ್ಢ್ಯ ಕೂಡ ಅಜಾನುಬಾಹುವಾಗಿರುತಿತ್ತು.ಅದೇ ರೀತಿಯಾಗಿ ಇಲ್ಲೊಬ್ಬ ರಾಜ ಊಟದ ವಿಚಾರದಲ್ಲಿ ಅಪಾರ ಅತೀವ ರುಚಿ ಕಂಡಿದವನಾಗಿದ್ದನು.ತಾನು ಇಚ್ಚೆಪಟ್ಟ ಊಟವನ್ನೇ ಆತ ಸವಿಯುತ್ತಿದ್ದ.ಈ ರಾಜ ಯಾವ ಮಟ್ಟಿಗೆ ಆಹಾರ ಪ್ರಿಯ ಅಂದರೆ ದಿನವೊಂದಕ್ಕೆ ಸರಿ ಸುಮಾರು ಮೂವತ್ತೈದು ಕೆಜಿಯಷ್ಟು ಆಹಾರವನ್ನು ಸೇವಿಸುತ್ತಿದ್ದನು.

ಈ ರಾಜ ಸೇವಿಸುತ್ತಿದ್ದ ಆಹಾರದಲ್ಲಿ ವಿವಿಧ ರೀತಿಯ ಹಣ್ಣು-ಹಂಪಲು ತರಕಾರಿಗಳು ಜೊತೆಗೆ ಅಚ್ಚರಿ ಎಂಬಂತೆ ವಿಷವೂ ಕೂಡ ಇರುತಿತ್ತು.ಅಂದರೆ ವಿಷಕಾರಿ ಪಧಾರ್ಥಗಳನ್ನು ಕೂಡ ತಿನ್ನುತ್ತಿದ್ದರು.ಈ ವಿಷ ಪಧಾರ್ಥಗಳನ್ನು ತಿನ್ನುವುದು ಈ ರಾಜನಿಗೆ ಬಾಲ್ಯದಿಂದಲೂ ಹವ್ಯಾಸವಾಗಿ ಬಿಟ್ಟಿತ್ತು.ಇಂತಹ ವಿಚಿತ್ರ ಹವ್ಯಾಸ ಬೆಳೆಸಿಕೊಂಡಿದ್ದ ರಾಜನ ಹೆಸರು ಮಹಮೂದ್ ಬೆಗಾಡಾ.ಈ ರಾಜ ಗುಜರಾತ್ ಸುಲ್ತಾನರ ಪ್ರಬಲ ಆಡಳಿತಗಾರರಲ್ಲಿ ಪ್ರಮುಖ ರಾಜನಾಗಿದ್ದನು. ಈ ಮಹಮೂದ್ ರಾಜನ ಆಹಾರದ ಪದ್ದತಿಯನ್ನ ಇತಿಹಾಸದ ಪುಟಗಳಲ್ಲಿ ದಾಖಲು ಮಾಡಿರುವುದು ಅಂದು ಭಾರತಕ್ಕೆ ಪ್ರವಾಸಿಗರಾಗಿ ಬಂದಿದ್ದಂತಹ ಇಟಲಿ,ಪೋರ್ಚುಗಲ್ ದೇಶದ ಪ್ರವಾಸಿಗರು ತಮಗಾದ ಅನುಭವ,ತಮಗೆ ಕಂಡಂತಹ ದರ್ಶನಗಳನ್ನ ತಮ್ಮ ಪುಟದಲ್ಲಿ ದಾ‌ಖಲು ಮಾಡಿದ್ದಾರೆ.

ಇವರು ದಾಖಲು ಮಾಡಿದ ಪ್ರತಿಗಳು ಜಗತ್ತಿನಾದ್ಯಂತ ಈ ಮಹಮೂದ್ ಬೆಗಾಡಾ ರಾಜನ ಆಹಾರ ಕ್ರಮ ತಿಳಿದು ಅಚ್ಚರಿ ವ್ಯಕ್ತಪಡಿಸಿತು.ಅಷ್ಟಕ್ಕೂ ಈ ಮಹಮೂದ್ ಬೆಗಾಡಾ ರಾಜನ ಆಹಾರ ಕ್ರಮ ತಿಳಿಯುವುದಾದರೆ ಬೆಳಿಗ್ಗೆಯ ಉಪಹಾರವಾಗಿ ಒಂದು ಬಟ್ಟಲಷ್ಟು ಜೇನು ತುಪ್ಪ,ಬೆಣ್ಣೆ,ಕನಿಷ್ಟ ಅಂದರೆ ನೂರು ಬಾಳೆ ಹಣ್ಣು ಸೇವಿಸುತ್ತಿದ್ದರು. ಇನ್ನು ರಾತ್ರಿಯ ಊಟಕ್ಕಂತೂ ಅವರಿಗೆ ಮನಸ್ಪೂರ್ತಿರ‌ಯಾಗಿ ಸಾಕು ಅನ್ನುವಷ್ಟು ಊಟ ಇರಬೇಕಾಗಿತ್ತು.ಅದು ಕೂಡ ತನ್ನಿಚ್ಚೆಯ ಊಟವಾಗಿರಬೇಕಿತ್ತು.ಜೊತೆಗೆ ವಿಷವನ್ನು ಬಾಲ್ಯದಿಂದಲೇ ಸೇವಿಸುತ್ತಿದ್ದ ಈ ರಾಜನ ದೇಹ ಸಂಪೂರ್ಣ ವಿಷಕಾರಿಯಾಗಿ ಬದಲಾವಣೆಯಾಗಿ ಪರಿವರ್ತನೆಯಾಗಿತ್ತು. ತನ್ನ ತಾನು ಮಲಗುವ ಕೋಣೆಯ ಹಾಸಿಗೆಯ ಎರಡು ಬದಿಯಲ್ಲಿಯೂ ಹಣ್ಣು ಹಂಪಲು ಕಡ್ಡಾಯವಾಗಿ ಇರಲೇಬೇಕಿತ್ತು.ಈ ಮಹಮೂದ್ ಬೆಗಾಡಾ ರಾಜ ತನ್ನ ಹದಿಮೂರನೇ ವಯಸ್ಸಿನಲ್ಲಿಯೇ ಪಟ್ಟಾಭಿಷೇಕ ಪಡೆಯುತ್ತಾನೆ.

ಬಹಳ ಚಿಕ್ಕ ‌ವಯಸ್ಸಿಗೆ ಅಧಿಕಾರ ಪಡೆದ ಈತ ತನ್ನ ರಾಜ್ಯದ ಪ್ರತಿಯೊಂದು ವ್ಯವಹಾರ ಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ. ಬರೋಬ್ಬರಿ ಐದು ದಶಕಗಳ ಕಾಲ ಯಶಸ್ವಿಯಾಗಿ ರಾಜ್ಯವನ್ನಾಳಿದ ಮಹಮೂದ್ ಅದ್ಬುತ ಸಾಹಸಿ ಆಡಳಿತಗಾರ ಎಂದು ಹೆಸರು ಪಡೆದಿದ್ದನು. ಇನ್ನು ಈ ಮಹಮೂದ್ ರಾಜ ತುಂಬಾ ಉದ್ದವಾಗಿ ಮೀಸೆ ಬಿಟ್ಟಿದ್ದ.ಅದನ್ನ ಆರೈಕೆ ಮಾಡುವುದಕ್ಕೆ ಅಂತಾನೇ ಸೇವಕರನ್ನ ನೇಮಕ ಮಾಡಿಕೊಂಡಿದ್ದನಂತೆ.ನೀಳವಾಗಿ ಧೀರ್ಘವಾದ ಸೊಂಪು ಸೊಂಪಾದ ತನ್ನ ಮೀಸೆಯನ್ನ ತನ್ನ ತಲೆಯ ಸುತ್ತಾ ಸುತ್ತಿಕೊಂಡಿರುತ್ತಿರುತ್ತಾನೆ.ಈತ ತನ್ನ ಆಡಳಿತದಲ್ಲಿ ಗಿರ್ನಾರ್ ಮತ್ತು ಜುನಾಗಡ್,ಚಂಪೇನರ್ ಕೋಟೆ ಪ್ರಾಂತ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡಾಗ ಮಹಮೂದ್ ರಾಜನಿಗೆ ಬೇಡದ ಎಂಬ ಬಿರುದನ್ನ ನೀಡಲಾಯಿತು.

ಇದಾದ ಬಳಿಕ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ಮಹಮೂದ್ ರಾಜ ತದ ನಂತರ ತನ್ನ ಸೈನ್ಯವನ್ನಃ ಸುಲ್ತಾನರ ಸೈನ್ಯಕ್ಕೆ ಕೂಡಿಸಲಾಯಿತು. ಇನ್ನು ಈ ಗುಜರಾತ್ ಸುಲ್ತಾನರ ಪ್ರಮುಖ ಆಡಳಿತಗಾರ ಮಹಮೂದ್ ಬೆಗಾಡಾ ರಾಜನ ದೇಹ ಸಂಪೂರ್ಣ ವಿಷಕಾರಿಯಾದ್ದರಿಂದ ಇವನ ಸತ್ತ ನಂತರ ಇವನ ದೇಹದ ಮೇಲೆ ನೊಣ ಕೂತರೂ ಸಹ ಸಾವನ್ನಪ್ಪುತ್ತಿತ್ತು.ಆದ್ದರಿಂದ ಇವನ ದೇಹವನ್ನು ಇದ್ದಲ್ಲೇ ಬೆಂಕಿ ಇಟ್ಟು ಸುಟ್ಟರು ಎಂದು ಇಟಲಿ ಮತ್ತು ಪೋರ್ಚುಗೀಸರ ಪ್ರವಾಸಿಗರು ತಮ್ಮ ಪ್ರವಾಸ ಪುಸ್ತಕಗಳಲ್ಲಿ ದಾಖಲು ಮಾಡಿದ್ದಾರೆ.

Leave a Reply

%d bloggers like this: