ಪ್ರಶಾಂತ್ ನೀಲ್ ಇನ್ಮುಂದೆ ಕನ್ನಡ ಸಿನಿಮಾ ಮಾಡಲ್ಲ ಎಂಬ ಪ್ರಶ್ನೆಗೆ ಈಗ ಅವರೇ ಉತ್ತರ ನೀಡಿದ್ದಾರೆ. ಹೀರೋ ಯಾರು ಗೊತ್ತಾ?

ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಇನ್ಮುಂದೆ ಕನ್ನಡ ಸಿನಿಮಾ ಮಾಡಲ್ಲ ಎಂಬ ಪ್ರಶ್ನೆಗೆ ಇದೀಗ ಅವರೇ ಉತ್ತರ ನೀಡಿದ್ದಾರೆ.
ಉಗ್ರಂ ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಶಾಂತ್ ನೀಲ್ ಇಂದು ರಾಷ್ಟ್ರ ಮಾತ್ರ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಹೌದು ಹಣ ಇದೆ ಅಂತ ಒಂದೆರಡ್ ಸಿನಿಮಾ ಮಾಡಿ ಹೊರಟ್ಬಿಡ್ತಾನೆ ಅಂತ ಮಾತನಾಡಿದ ಗಾಂಧಿನಗರದ ಕೆಲವು ಮಂದಿ ಇದೀಗ ಪ್ರಶಾಂತ್ ನೀಲ್ ಅವರ ಸಾಮರ್ಥ್ಯ ಕಂಡು ಬಾಯ್ಮೇಲೆ ಬೆರಳಿಟ್ಟುಕೊಂಡು ನೋಡುತ್ತಿದ್ದಾರೆ. ಕೆಜಿಎಫ್ ಎಂಬ ಮಾಸ್ ಮಹಾಕಾವ್ಯವನ್ನು ತೆರೆ ಮೇಲೆ ತರುವ ಮೂಲಕ ಪ್ರಶಾಂತ್ ನೀಲ್ ಅವರು ಕನ್ನಡ ಚಿತ್ರರಂಗದತ್ತ ಇಡೀ ವಿಶ್ವದ ಚಿತ್ರರಂಗವೇ ನಿಬ್ಬೆರಗಣ್ಣಿನಿಂದ ತಿರುಗಿ ನೋಡುವಂತೆ ಮಾಡಿದ್ದಾರೆ. ಪ್ರಶಾಂತ್ ನೀಲ್ ಅವರಿಗೆ ಸಿನಿಮಾದ ಬಗ್ಗೆ ಅಷ್ಟಾಗಿ ಅಸಕ್ತಿ ಇರಲಿಲ್ಲ. ಆದರೆ ಹಣ ಮಾಡಬೇಕು ಎಂಬುದು ಮಾತ್ರ ಇತ್ತು.

ಪ್ರಶಾಂತ್ ನೀಲ್ ಅವರ ಸಹೋದರಿಯಾದ ವಿದ್ಯಾ ಅವರನ್ನ ನಟ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರು ಪ್ರೀತಿಸಿ ಮದುವೆಯಾಗುತ್ತಾರೆ. ಇದಾದ ನಂತರ ಪ್ರಶಾಂತ್ ನೀಲ್ ಅವರಿಗೆ ಸಿನೆಮಾ ಒಡನಾಟ ಹೆಚ್ಚಾಗುತ್ತದೆ. ಇದರಿಂದ ತಾನು ಕೂಡ ಸಿನಿಮಾ ಮಾಡಡೇಕು ಎಂಬ ಕನಸು ಚಿಗುರೊಡೆಯುತ್ತದೆ. ಹಾಗಾಗಿ ಸಿನೆಮಾ ನಿರ್ದೇಶನದ ತರಬೇತಿ ಪಡೆಯುತ್ತಾರೆ. ನಂತರ ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದ ಶ್ರೀ ಮುರುಳಿ ಅವರಿಗೆ ಪ್ರಶಾಂತ್ ನೀಲ್ ಅವರು ನಾನು ನಿಮಗೊಂದು ಸಿನಿಮಾ ಮಾಡುತ್ತೇನೆ ಎಂದು ಹೇಳುತ್ತಾರೆ. ಆದರೆ ಶ್ರೀ ಮುರುಳಿ ಅವರು ನೀನು ನನ್ನನ್ನ ಹಾಕಿಕೊಂಡು ಸಿನಿಮಾ ಮಾಡ್ಬೇಡ. ಬೇರೇ ಯಾರಿಗಾದ್ರೂ ಸಿನಿಮಾ ಮಾಡು ಅಂತ ಹೇಳುತ್ತಾರೆ. ಆದ್ರೆ ಪ್ರಶಾಂತ್ ನೀಲ್ ಅವರು ನಾನು ಸಿನಿಮಾ ಮಾಡುತ್ತಿರುವುದೇ ನಿಮಗಾಗಿ. ನೀವು ಒಪ್ಪಿ ನಾನು ನಿಮ್ಮನ್ನ ಮತ್ತೆ ಸ್ಟಾರ್ ನಟನಾಗಿ ಮಾಡುತ್ತೇನೆ ಎಂದು ಉಗ್ರಂ ಚಿತ್ರವನ್ನ ಶ್ರೀ ಮುರುಳಿ ಅವರಿಗೆ ಮಾಡುತ್ತಾರೆ.

ಕಮರ್ಷಿಯಲ್ ಹಿಟ್ ಆದ್ರೂ ಕೂಡ ಚಿತ್ರ ಅಂದುಕೊಂಡ ಹಾಗೇ ಲಾಭ ಮಾಡಲಿಲ್ಲ. ಉಗ್ರಂ ಸಿನಿಮಾ
ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆದುಕೊಳ್ಳುತ್ತದೆ. ಉಗ್ರಂ ಚಿತ್ರದ ನಂತರ ಪ್ರಶಾಂತ್ ನೀಲ್ ಅವರ ಕಣ್ಣಿಗೆ ಕಾಣಿಸೋದು ರಾಕಿಂಗ್ ಸ್ಟಾರ್ ಯಶ್. ಗೂಗ್ಲಿ ಚಿತ್ರದಲ್ಲಿ ಯಶ್ ಅವರ ನಟನೆಗೆ ಫಿಧಾ ಆಗಿದ್ದ ಪ್ರಶಾಂತ್ ನೀಲ್ ಅವರು ಯಶಸ್ಸಿನ ಉತ್ತುಂಗದಲ್ಲಿ ಯಶ್ ಅವರನ್ನ ಭೇಟಿ ಮಾಡಿ ಕೆಜಿಎಫ್ ಚಿತ್ರದ ಕಥೆ ಹೇಳುತ್ತಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರಡಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಪ್ರಶಾಂತ್ ನೀಲ್ ಅವರ ಕಲ್ಪನೆಗೆ ಬಂಡವಾಳ ಹೂಡಲು ಮುಂದೆ ಬರುತ್ತಾರೆ. ಪ್ರಶಾಂತ್ ನೀಲ್ ಅವರ ಕಲ್ಪನೆಯ ಕಥೆಗೆ ನಟ ಯಶ್ ಕೂಡ ಒಮ್ಮೆಲೆ ದಿಗ್ಬ್ರಮೆ ಆಗಿದ್ದು ಕೂಡ ಇದೆಯಂತೆ. ಸತತ ಎರಡು ವರ್ಷಗಳ ಕೋಲಾರದ ಕೆಜಿಎಫ್ ನೆಲೆದ ಬಿಸಿ ಗಾಳಿ, ಧೂಳನ್ನ ಲೆಕ್ಕಿಸದೇ ಇಡೀ ಚಿತ್ರತಂಡ ಪರಿಶ್ರಮ ಹಾಕಿ ಕೆಜಿಎಫ್ ಚಿತ್ರ ಮಾಡುತ್ತಾರೆ. ಈ ಕೆಜಿಎಫ್ ಚಿತ್ರದ ಮೇಕಿಂಗ್ ಕಂಡು ಇಡೀ ಭಾರತೀಯ ಚಿತ್ರರಂಗವೇ ಅಚ್ಚರಿಯಿಂದ ನೋಡುತ್ತದೆ.

ಪಂಚಭಾಷೆಗಳಲ್ಲಿ ರಿಲೀಸ್ ಮಾಡಿದ ಕೆಜಿಎಫ್ ಸಿನಿಮಾ ಭಾರತ ಮಾತ್ರ ಅಲ್ಲದೆ ಹೊರ ದೇಶಗಳಲ್ಲಿ ಕೂಡ ಭಾರಿ ಮೆಚ್ಚುಗೆ ಪಡೆಯುತ್ತದೆ. ಕೆಜಿಎಫ್ ಚಿತ್ರ ಮೊದಲ ದಿನ ಇಪ್ಪತ್ತೈದು ಕೋಟಿ ಕಲೆಕ್ಷನ್ ಮಾಡಿ , ಒಟ್ಟಾರೆಯಾಗಿ ಮುನ್ನೂರು ಕೋಟಿ ಕಲೆಕ್ಷನ್ ಮಾಡಿದ ಕೆಜಿಎಫ್ ಚಿತ್ರ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರ ಹೊಮ್ಮಿದೆ. ಇದೀಗ ಇದರ ಮುಂದುವರೆದ ಸರಣಿಯಾಗಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಿದೆ. ಬಿಡುಗಡೆಯಾದ ಆರೇ ದಿನಕ್ಕೆ ಕೆಜಿಎಫ್ ಚಾಪ್ಟರ್ 2.ಸಿನಿಮಾ ಬರೋಬ್ಬರಿ ಆರು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಸಂಚಲನ ಸೃಷ್ಟಿಸಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ಪ್ರತಿಭೆಗೆ ತಕ್ಕ ಹಾಗೇ ಉಗ್ರಂ ಚಿತ್ರದ ನಿರ್ದೇಶನಕ್ಕೆ ಸೈಮಾ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಅವಾರ್ಡ್, ಫಿಲ್ಮ್ ಬಿಟ್ ಅವಾರ್ಡ್, ಜೀ ಕನ್ನಡ ಹೆಮ್ಮೆಯ ಕನ್ನಡಿಗ ಪ್ರಶಸ್ತಿ, ಸೈಮಾ ಬೆಸ್ಟ್ ಡೈರೆಕ್ಟರ್ ಅವಾರ್ಡ್ ದೊರೆತಿದೆ.

ಇದೀಗ ತೆಲುಗಿನಲ್ಲಿ ಪ್ರಭಾಸ್ ಅವರಿಗೆ ಸಲಾರ್ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇದಾದ ಬಳಿಕ ಜ್ಯೂನಿಯರ್ ಎನ್. ಟಿ .ಆರ್. ಅವರಿಗೆ ಒಂದು ಸಿನಿಮಾ, ರಾಮ್ ಚರಣ್ ತೇಜಾ ಅವರಿಗೆ ಒಂದು ಸಿನಿಮಾ ಅಂದರೆ ಇನ್ನೂ ನಾಲ್ಕೈದು ವರ್ಷ ಪ್ರಶಾಂತ್ ನೀಲ್ ಅವರು ಟಾಲಿವುಡ್ ನಲ್ಲೇ ಉಳಿಯಲಿದ್ದಾರೆ. ಅಂದ್ರೆ ಇನ್ಮುಂದೆ ಪ್ರಶಾಂತ್ ನೀಲ್ ಅವರು ಕನ್ನಡ ಸಿನಿಮಾ ಮಾಡಲ್ಲ ಅಂತಲ್ಲ. ಖಾಸಗಿ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಅವರೇ ಹೇಳಿರುವ ಪ್ರಕಾರ ಟಾಲಿವುಡ್ ಕಮಿಟ್ ಮುಗಿಸಿದ ನಂತರ ಶ್ರೀ ಮುರುಳಿ ಅವರಿಗೆ ಒಂದು ಕಥೆ ಇದೆಯಂತೆ. ಅದಾದ ನಂತರ ಮತ್ತೆ ಯಶ್ ಅವರೊಟ್ಟಿಗೆ ಸಿನಿಮಾ ಮಾಡೋ ಪ್ಲ್ಯಾನ್ ಇದೆಯಂತೆ. ಪ್ರಶಾಂತ್ ನೀಲ್ ಅವರು ಇದೇ ರೀತಿ ಕನ್ನಡ ಚಿತ್ರರಂಗವನ್ನ ಮತ್ತಷ್ಟು ಉತ್ತುಂಗಕ್ಕೆ ಕರೆದೊಯ್ಯುವಂತಹ ಅದ್ಭುತ ಚಿತ್ರಗಳನ್ನು ನೀಡಲಿ ಎಂಬುದು ಕನ್ನಡ ಸಿನಿ ಪ್ರೇಕ್ಷಕರ ಅಭಿಮತವಾಗಿದೆ.

Leave a Reply

%d bloggers like this: