ಪ್ರಪಂಚದಲ್ಲೇ ಯಾರಿಗೂ ಸಿಗದ ಗೌರವವನ್ನು ಪುನೀತ್ ಅವರಿಗೆ ನೀಡಲು ಒಂದಾಗಿ ದಕ್ಷಿಣ ಭಾರತ ಚಿತ್ರರಂಗ ಮಾಡುತ್ತಿರುವಾದರೂ ಏನು ಗೊತ್ತಾ

ಕನ್ನಡ ಚಿತ್ರರಂಗದ ಭಾಗ್ಯವಂತ ಚಂದನವನದ ಧೃವತಾರೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಈಗಾಗಲೇ ಎಂಟು ದಿನಗಳು ಕಳೆದಿವೆ.ಆದರೂ ಕೂಡ ಅಪ್ಪು ನಮ್ಮಿಂದ ದೂರವಾಗಿದ್ದಾರೆ ಎಂಬುದನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ನಾಡಿನಾದ್ಯಂತ ಆ ಶೋಕ ಇನ್ನೂ ಹಸಿರಾಗಿಯೇ ಉಳಿದಿದೆ.ಪುನೀತ್ ಅವರನ್ನ ಕಳೆದುಕೊಂಡ ಚಿತ್ರರಂಗ ಬಡವಾಗಿದೆ.ಇಡೀ ಕನ್ನಡನಾಡಿನ ಮನೆ ಮನೆಗಳಲ್ಲಿ ತಮ್ಮ ಮಗನನ್ನೇ ಕಳೆದುಕೊಂಡಂತಹ ಭಾವ ಆವರಿಸಿದೆ.ನಟ ಪುನೀತ್ ರಾಜ್ ಕುಮಾರ್ ಅವರು ಕೇವಲ ನಟನಾಗಿರದೇ ಒಬ್ಬ ಉತ್ತಮ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗದ್ದರು.ಅನೇಕ ಮಾನವೀಯ ಕಾರ್ಯ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.ಅವರು ಮಾಡುತ್ತಿದ್ದ ಸಾಮಾಜಿಕ ಸೇವೆಗಳನ್ನು ಎಲ್ಲಿಯೂ ಕೂಡ ಹೇಳಿಕೊಳ್ಳದೇ ಎಡಗೈಯಲ್ಲಿ ಕೊಟ್ಟಿದ್ದು,ಬಲಗೈಗೆ ಗೊತ್ತಾಗಬಾರದು ಎಂಬಂತೆ ಅಷ್ಟರ ಮಟ್ಟಿಗೆ ತಾವು ತಮ್ಮ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬಂದಿದ್ದಾರೆ.ಈ ವಿಚಾರ ಬಹುತೇಕರಿಗೆ ಅಷ್ಟಾಗಿ ತಿಳಿದಿಲ್ಲ.

ಸ್ವತಃ ಸ್ಯಾಂಡಲ್ ವುಡ್ ಮಂದಿಗೇನೇ ಪುನೀತ್ ಅವರು ಈ ಪ್ರಮಾಣದಲ್ಲಿ ಸಮಾಜ ಸೇವೆ ಸಲ್ಲಿಸಿದ್ದಾರೆ ಎಂಬುದನ್ನ ತಿಳಿದಿಲ್ಲ.ಶರಣರ ಗುಣ ಮರಣದಲ್ಲಿ ಅನ್ನುವ ಹಾಗೇ ನಟ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕ ಮರಣ ಹೊಂದಿದ ನಂತರ ಅವರು ಮಾಡಿದಂತಹ ಮಹಾತ್ಕಾರ್ಯಗಳ ಬಗ್ಗೆ ಗೊತ್ತಾಗುತ್ತಿದೆ.1800 ಮಕ್ಕಳ ವಿಧ್ಯಾಭ್ಯಾಸ,ಗೋಶಾಲೆ,ಶಕ್ತಿಧಾಮ ಹೆಸರಿನಲ್ಲಿ ಆಶ್ರಮ ಹೀಗೆ ಅನೇಕಾನೇಕ ಸೇವೆ ನಡೆಸುಕೊಂಡು ಬಂದಿರುವ ಪುನೀತ್ ಅವರು ನಿಧನದ ನಂತರ ತಮ್ಮ ಕಣ್ಣುಗಳನ್ನು ದಾನಮಾಡಿ ನಾಲ್ಕು ಜನರ ಬದುಕಿಗೆ ಬೆಳಕಾಗಿದ್ದಾರೆ.ಈ ಮೂಲಕ ಪುನೀತ್ ರಾಜ್ ಕುಮಾರ್ ತಮ್ಮ ಸಾವಿನಲ್ಲೂ ಕೂಡ ಸಾರ್ಥಕತೆ ಮೆರೆದಿದ್ದಾರೆ.ಇದೀಗ ಕನ್ನಡ ಚಿತ್ರ ವಾಣಿಜ್ಯ ಮಂಡಳಿ ಪುನೀತ್ ರಾಜ್ ಕುಮಾರ್ ಅವರ ಸ್ಮರಾಣಾರ್ಥ ಅವರ ನೆನಪಿಗಾಗಿ ಪುನೀತ ನಮನ ಕಾರ್ಯಕ್ರಮವನ್ನು ಇದೇ ನವೆಂಬರ್ 16 ರಂದು ಆಯೋಜನೆ ಮಾಡಿದ್ದಾರೆ.

ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು,ತಂತ್ರಜ್ಞರು ಸೇರಿದಂತೆ ಒಟ್ಟಾರೆ ಕನ್ನಡ ಚಿತ್ರರಂಗ ಸೇರಿದಂತೆ ತೆಲುಗು ತಮಿಳು,ಮಲೆಯಾಳಂ ನ ಖ್ಯಾತ ದಿಗ್ಗಜ ನಟರು ಆಗಮಿಸಲಿದ್ದಾರೆ.ಈ ಪುನೀತ ನಮನ ಕಾರ್ಯಕ್ರಮವು ಚಿತ್ರ ಸಾಹಿತಿ.ಡಾ.ವಿ.ನಾಗೇಂದ್ರ ಪ್ರಸಾದ್ ಅವರು ಪುನೀತ್ ಗಾಗಿ ಬರೆದಿರುವ ವಿಶೇಷ ಹಾಡೊಂದರ ಮೂಲಕ ಆರಂಭವಾಗಿ ನಂತರ ಪುನೀತ್ ನಟನೆಯ ಎಲ್ಲಾ ಸಿನಿಮಾ ಹಾಡುಗಳ ಮೂಲಕ ಪುನೀತ್ ರಾಜ್ ಕುಮಾರ್ ಅವರಿಗೆ ನುಡಿ ನಮನ ಸಲ್ಲಿಸಲಾಗುತ್ತದೆ ಎಂದು ಸಾ.ರಾ.ಗೋವಿಂದ್ ತಿಳಿಸಿದ್ದಾರೆ.

Leave a Reply

%d bloggers like this: