ಪೋಷಕರಿಗೆ ಬೇಡವಾಗಿ ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಹೆಣ್ಣು ಮಗು ಈಗ ಖ್ಯಾತ ನಟಿ.. ಯಾರು ಗೊತ್ತಾ?

ಪೋಷಕರಿಗೆ ಬೇಡವಾಗಿ ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಹೆಣ್ಣು ಮಗುವಿಗೆ ಉಜ್ವಲ ಭವಿಷ್ಯ ಕಟ್ಟಿ ಕೊಟ್ಟಿದ್ದಾರೆ ಬಾಲಿವುಡ್ ಈ ಸ್ಟಾರ್ ನಟ..! ಹೌದು ಸಿನಿಮಾ ತಾರೆಯರು ಅಂದಾಕ್ಷಣ ಅವರು ಕೇವಲ ಬೆಳ್ಳಿ ಪರದೆಯಲ್ಲಿ ಮಾತ್ರ ಮಿಂಚುತ್ತಾರೆ. ಸಿನಿಮಾಗಳಲ್ಲಿ ನಟಿಸಿ ಅವರು ಕೋಟ್ಯಾಂತರ ರೂ.ಗಳನ್ನ ಸಂಪಾದನೆ ಮಾಡುತ್ತಾರೆ. ಅವರಿಂದ ಜನರಿಗೆ ಏನು ಪ್ರಯೋಜನ. ಹುಚ್ಚು ಸಿನಿ ಅಭಿಮಾನಿಗಳು ಮಾತ್ರ ಸಿನಿಮಾ ನಟರನ್ನ ದೇವರಂತೆ ಆರಾಧಿಸಿ ಪೂಜಿಸುತ್ತಾರೆ. ಅದರಿಂದ ಯಾವ ಪ್ರಯೋಜನವಿಲ್ಲ. ಹೀಗೆ ಒಂದಷ್ಟು ಮಂದಿ ತಮ್ಮ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಳ್ಳುವುದು ಉಂಟು. ಅದು ಅವರವರ ಅನಿಸಿಕೆ. ಅದನ್ನ ಹೊರತು ಪಡಿಸಿದರೆ. ಸಿನಿಮಾ ಸ್ಟಾರ್ ಗಳು ಕೇವಲ ರೀಲ್ ಲೈಫಲ್ ಮಾತ್ರ ಹೀರೋಗಳಲ್ಲ. ತಮ್ಮ ವೈಯಕ್ತಿಕ ಜೀವನದಲ್ಲಿಯೂ ಕೂಡ ನಾವು ಹೀರೋಗಳೇ ಎಂದು ಅನೇಕ ನಾಯಕ ನಟ-ನಟಿಯರು ಸಾಬೀತು ಮಾಡಿದ್ದಾರೆ.

ಅಂತೆಯೇ ಭಾರತೀಯ ಚಿತ್ರರಂಗದ 90.ರ ದಶಕದ ಸುಪ್ರಸಿದ್ದ ಬಾಲಿವುಡ್ ದಾದಾ ಎಂದೇ ಕರೆಸಿಕೊಳ್ಳುವ ನಟ ಮಿಥುನ್ ಚಕ್ರವರ್ತಿ ಕೂಡ ರಿಯಲ್ ಲೈಫಲ್ ಹೀರೋ ಆಗಿದ್ದಾರೆ. ಮೃಗಯಾ ಎಂಬ ಕಲಾತ್ಮಕ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಮಿಥುನ್ ಚಕ್ರವರ್ತಿ ಬಾಲಿವುಡ್ ನ ಒಬ್ಬ ಅತ್ಯುತ್ತಮ ಡ್ಯಾನ್ಸರ್ ಆಗಿ ಸಿನಿ ಪ್ರೇಕ್ಷಕರಿಗೆ ಹುಚ್ಚೆಬ್ಬಿಸಿದ ನಟ. ಡಿಸ್ಕೋ ಡ್ಯಾನ್ಸರ್ ಎಂಬ ಚಿತ್ರದಲ್ಲಿ ಜಿಮ್ಮಿ ಎಂಬ ರಸ್ತೆ ಬದಿಯ ಡ್ಯಾನ್ಸರ್ ಪಾತ್ರದಲ್ಲಿ ನಟಿಸಿ ಹಿಂದಿ ಚಿತ್ರರಂಗ ಅಪಾರ ಜನಪ್ರಿಯ ಬೇಡಿಕೆಯ ನಟರಾಗಿ ಮಿಂಚಿದ್ದರು ಮಿಥುನ್ ಚಕ್ರವರ್ತಿ.

ಮಿಥುನ್ ಚಕ್ರವರ್ತಿ ಅವರು ಹಿಂದಿ, ಬೆಂಗಾಲಿ, ಒರಿಯಾ, ಭೋಜ್ ಪುರಿ ಸೇರಿದಂತೆ ಬರೋಬ್ಬರಿ ಇನ್ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲಿ ಹೇಗೆ ಹೀರೋ ಆಗಿ ಮಿಂಚಿದರು ಅದೇ ರೀತಿಯಾಗಿ ತನ್ನ ನಿಜ ಜೀವನದಲ್ಲಿಯೂ ಕೂಡ ರಿಯಲ್ ಹೀರೋ ಆಗಿದ್ದಾರೆ ನಟ ಮಿಥುನ್ ಚಕ್ರವರ್ತಿ. ಹಾಗಾದರೆ ನಟ ಮಿಥುನ್ ಚಕ್ರವರ್ತಿ ಅವರು ಮಾಡಿದಂತಹ ಆ ಮಹತ್ಕಾರ್ಯ ಯಾವುದು ಅಂತೀರಾ. ಹೌದು ಮಿಥುನ್ ಚಕ್ರವರ್ತಿ ಅವರಿಗೆ ನಾಲ್ಕು ಜನ ಮಕ್ಕಳು. ಅವರಲ್ಲಿ ಮಹಾಅಕ್ಷಯ್ ಚಕ್ರವರ್ತಿ, ಉಷ್ಮೇ ಚಕ್ರವರ್ತಿ, ನಮಶಿ ಚಕ್ರವರ್ತಿ ಎಂಬ ಮೂವರು ಗಂಡು ಮಕ್ಕಳು ಮತ್ತು ಒಬ್ಬರು ದಿಶಾನಿ ಚಕ್ರವರ್ತಿ ಎಂಬ ಹೆಣ್ಣು ಮಗಳು.

ಇದೀಗ ಅಸಲಿ ಕಥೆಗೆ ಬರುವುದಾದರೆ ಸುಮಾರು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಪತ್ರಿಕೆಯೊಂದರಲ್ಲಿ ಬೀದಿ ಬದಿಯ ತೊಟ್ಟಿಯೊಂದರಲ್ಲಿ ಹೆಣ್ಣು ಮಗುವೊಂದನ್ನ ಯಾರೋ ಪಾಪಿ ಪೋಷಕರು ಬಿಸಾಡಿ ಹೋಗಿರುತ್ತಾರೆ. ಈ ಹೆಣ್ಣು ಮಗು ತುಂಬಾ ಮುದ್ದಾಗಿರುತ್ತದೆ. ಇಷ್ಟು ಸುಂದರವಾದ ಹೆಣ್ಣು ಮಗುವನ್ನು ಯಾರೋ ಈ ಕಸದ ತೊಟ್ಟಿಯಲ್ಲಿ ಬಿಸಾಡಿದ್ದಾರಲ್ಲ ಎಂದು ಸ್ದಳೀಯರೊಬ್ಬರು ಇದನ್ನ ಪತ್ರಿಕೆಯೊಂದಕ್ಕೆ ಮಾಹಿತಿ ನೀಡುತ್ತಾರೆ. ಈ ಮನ ಮಿಡಿಯುವ ಸುದ್ದಿಯನ್ನ ಪತ್ರಿಕೆ ವರದಿ ಮಾಡುತ್ತದೆ. ಈ ವರದಿಯನ್ನ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರು ಓದುತ್ತಾರೆ.

ಇದನ್ನ ಓದಿ ಅವರಿಗೆ ಮನ ಕರಗುತ್ತದೆ. ತಕ್ಷಣ ವರದಿ ಮಾಡಿದ ಪತ್ರಿಕೆಗೆ ಕರೆ ಮಾಡಿ ಆ ಮಗುವಿನ ಬಗ್ಗೆ ಮಾಹಿತಿ ಪಡೆದುಕೊಂಡು ತಕ್ಷಣ ಆ ಹೆಣ್ಣು ಮಗುವನ್ನ ದತ್ತು ತೆಗೆದುಕೊಳ್ಳುತ್ತಾರೆ. ಆ ಹೆಣ್ಣು ಮಗುವನ್ನ ತನ್ನ ಸ್ವಂತ ಮಗಳಂತೆ ಸಾಕಿ ಸಲಹುತ್ತಾರೆ. ಆ ಹೆಣ್ಣು ಮಗು ಬೇರಾರು ಅಲ್ಲ ದಿಶಾನಿ ಚಕ್ರವರ್ತಿ. ತನ್ನ ಸಾಕು ತಂದೆಯಂತೆ ಸಿನಿಮಾ ಕ್ಷೇತ್ರದಲ್ಲಿ ಮಿಂಚಬೇಕು ಎಂದು ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಅಧ್ಯಾಯನ ಮಾಡುತ್ತಿದ್ದಾರೆ ದಿಶಾನಿ ಚಕ್ರವರ್ತಿ. ಒಟ್ಟಾರೆಯಾಗಿ ನಟ ಮಿಥುನ್ ಚಕ್ರವರ್ತಿ ಅವರ ಈ ಮಾನವೀಯ ಉದಾರತೆ ಗುಣ ಎಂತಹವರನ್ನ ಒಮ್ಮೆ ಮಂತ್ರಮುಗ್ದಗೊಳಿಸಿ ಬಿಡುತ್ತದೆ.