ಪೊಲೀಸ್ ಕಾನ್ಸ್ ಟೇಬಲ್ ಆಗಬೇಕು ಎಂಬ ಕನಸು ಹೊತ್ತವಳಿಗೆ ಪೋಲಿ ಚಿತ್ರಗಳಲ್ಲಿ ನಟಿಸುವ ಅನಿವಾರ್ಯತೆ ಸೃಷ್ಟಿಯಾದದ್ದಾದರು ಏಕೆ ಗೊತ್ತಾ..!

ಪೊಲೀಸ್ ಕಾನ್ಸ್ ಟೇಬಲ್ ಆಗಬೇಕು ಎಂಬ ಕನಸು ಹೊತ್ತವಳಿಗೆ ಪೋಲಿ ಚಿತ್ರಗಳಲ್ಲಿ ನಟಿಸುವ ಅನಿವಾರ್ಯತೆ ಸೃಷ್ಟಿಯಾದದ್ದಾದರು ಏಕೆ ಗೊತ್ತಾ..! ಭಾರತೀಯ ಚಿತ್ರರಂಗದ ಮಾದಕ, ಮೋಹಕ ನಟಿ ಅಂದಾಕ್ಷಣ ಎಲ್ಲರಿಗೂ ತಟ್ಟನೆ ನೆನಪಿಗೆ ಬರುವುದು ನಟಿ ಶಕೀಲಾ. ನೋಡಲು ಸ್ಪುರದ್ರೂಪಿಯಾಗಿರುವ ನಟಿ ಶಕೀಲಾ ತನ್ನ ಮೈಮಾಟ ದೇಹದ ಸಿರಿ ಮಾದಕ ನೋಟ ದಿಂದಾಗಿ ಅಪಾರ ಜನಪ್ರಿಯತೆ ಗಳಿಸಿ ಕೋಟ್ಯಾಂತರ ಪಡ್ಡೆ ಹೈಕಳ ಹಾಟ್ ಫೇವ್ ರೇಟ್ ಆಗಿದ್ದರು. ಇವರು ಯಾವುದೇ ಸಿನಿಮಾದಲ್ಲಿ ನಟಿಸಲು ಸೈ ಎನಿಸಿಕೊಳ್ಳುತ್ತಿದ್ದರು. ಚಿತ್ರೀಕರಣದಲ್ಲಿ ಒಂದು ದಿನ ಭಾಗವಹಿಸಬೇಕಾದರೆ ಅಂದಿನ ದಿನಮಾನಗಳಲ್ಲೇ ಲಕ್ಷಾಂತರ ರೂ.ಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದರು. ನಟಿ ಶಕೀಲಾ ಅಂದು ಭಾರತೀಯ ಚಿತ್ರರಂಗದ ಯಾವ ಸ್ಟಾರ್ ನಟರೂ ಕೂಡ ಪಡೆಯದಷ್ಟು ಸಂಭಾವನೆ ಪಡೆಯುತ್ತಿದ್ದರು.

ದಿನವೊಂದಕ್ಕೇನೇ ಲಕ್ಷಾಂತರ ರೂ ಪಡೆಯುತ್ತಿದ್ದ ಶಕೀಲಾ ಅವರಿಗೆ ಕೋಟಿ ಕೋಟಿ ಆದಾಯ ಬರುತ್ತಿತ್ತು. ಆದರೆ ಇಂದು ಅದೇ ನಕ್ಷತ್ರ ತಾರೆಯಾಗಿ ಮಿಂಚಿದ್ದ ನಟಿ ಶಕೀಲಾ ಇದೀಗ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದರೆ ನಿಜಕ್ಕೂ ಕೂಡ ಆಶ್ಚರ್ಯವಾಗುತ್ತದೆ. ಹೌದು ಬಣ್ಣದ ಲೋಕದಲ್ಲಿ ಯಾರೂ ಕೂಡ ಒಂದೇ ಸ್ಥಾನದಲ್ಲಿ ಇರುವುದಿಲ್ಲ. ಒಬ್ಬರೊಬ್ಬರದ್ದು ಒಂದೊಂದು ಜಮಾನ ಇರುತ್ತದೆ. ಆ ಕಾಲಮಾನದಲ್ಲಿ ಯಾರಿಗೆ ಯಾವಾಗ ಅದೃಷ್ಟ ಇರುತ್ತದೋ ಅಂದಿನ ದಿನಮಾನಗಳಲ್ಲಿ ಅವರು ಆದಷ್ಟು ಹಣ ಸಂಪಾದಿಸಿಕೊಳ್ಳಬೇಕಾಗಿರುತ್ತದೆ. ಯೋಗ್ಯವಾದ ವ್ಯಕ್ತಿಗಳ ಜೊತೆ ಸಂಪರ್ಕ ಇಟ್ಟುಕೊಳ್ಳದೇ, ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳದೆ ಪೂರ್ವಪರ ಯೋಚನೆ ಮಾಡದೆ ಎಲ್ಲರನ್ನು ನ‌ಂಬಿದರೆ ಭವಿಷ್ಯ ಬರ್ಬಾದ್ ಆಗುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆ ಆಗಿದ್ದಾರೆ ಮೋಹಕ ನಟಿ ಶಕೀಲಾ.

ಹೌದು ನಟಿ ಶಕೀಲಾ ಅವರದ್ದು ಆರು ಜನ ಹೆಣ್ಣುಮಕ್ಕಳು ಇದ್ದಂತಹ ಬಡ ಕುಟುಂಬವಾಗಿರುತ್ತದೆ‌. ಈ ಆರು ಜನ ಹೆಣ್ಣು ಮಕ್ಕಳಲ್ಲಿ ನಟಿ ಶಕೀಲಾ ಅವರೇ ಮೊದಲನೇಯವರಾಗಿರುತ್ತಾರೆ. ಇವರಿಗೆ ತಾನು ಪೊಲೀಸ್ ಕಾನ್ಸ್ ಟೇಬಲ್ ಆಗಬೇಕು ಎಂಬ ಕನಸು ಇರುತ್ತದೆ. ಆದರೆ ಶಕೀಲಾ ಅವರು ಎಸ್.ಎಸ್.ಎಲ್.ಸಿ. ಅಲ್ಲಿ ಫೇಲಾಗುತ್ತಾರೆ‌. ಇವರು ಫೇಲ್ ಆಗಿದ್ದಕ್ಕೆ ಇವರ ತಂದೆ ನಡು ರಸ್ತೆಯಲ್ಲೇ ದನಕ್ಕೆ ಬಡಿಯುವಂತೆ ಹೊಡೆಯುತ್ತಾರೆ. ಇದಾದ ಕೆಲವು ತಿಂಗಳ ನಂತರ ಇವರ ತಂದೆ ಸಾವನ್ನಪ್ಪುತ್ತಾರೆ. ಇವರ ತಂದೆಯ ಸಾವಿನ ನಂತರ ಶಕೀಲಾ ಅವರಿಗೆ ಮನೆಯ ಸಂಪೂರ್ಣ ಜವಾಬ್ದಾರಿ ಬೀಳುತ್ತದೆ‌. ಇದೇ ಕಷ್ಟದ ಸಂಧರ್ಭದಲ್ಲಿ ನೋಡಲು ಸುಂದರವಾಗಿ ಆಕರ್ಷಕವಾಗಿದ್ದ ಶಕೀಲಾ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗುತ್ತದೆ.

ಈ ಅವಕಾಶ ಸದುಪಯೋಗ ಮಾಡಿಕೊಂಡು ಶಕೀಲಾ ಅವರು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾರೆ‌. ಹೀಗೆ ಸಿನಿ ಬದುಕು ಸಾಗುತ್ತಾ ಬಹುದೊಡ್ಡ ನಟಿಯಾಗಿ ಬೆಳೆಯುತ್ತಾರೆ. ಮಾದಕ ನೋಟ ಹೊಂದಿದ್ದ ಇವರಿಗೆ ಹೆಚ್ಚೆಚ್ಚು ಹಾಟ್ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಗುತ್ತಾ ಬರುತ್ತದೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸ್ಟಾ‌ರ್ ನಟಿಯಾಗಿ ರೂಪಿಸಿಕೊಂಡ ತನ್ನ ಎಲ್ಲಾ ತಂಗಿಯರಿಗೆ ಮದುವೆ ಮಾಡುತ್ತಾರೆ. ಅವರ ಮಕ್ಕಳನ್ನ ಕೂಡ ವಿದೇಶದಲ್ಲಿ ಓದಿಸಿ ಎಲ್ಲರಿಗೂ ಒಳ್ಳೇಕಡೆ ಕೆಲಸ ಸಿಗುವಂತೆ ಮಾಡುತ್ತಾರೆ. ಆದರೆ ಕಾಲ ಅನ್ನೋದು ಒಂದೇ ರೀತಿ ಇರಲ್ಲ ಅನ್ನೋ ಹಾಗೇ ಶಕೀಲಾ ಅವರ ಯಶಸ್ಸು ಹೀಗೆ ಒಂದು ದಿನ ದಿಢೀರ್ ಕೆಳಗೆ ಬೀಳುತ್ತದೆ. ತನ್ನ ತಾಯಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆಗಿ ನಂಬಿದ ಜನರಿಂದ ಆರ್ಥಿಕವಾಗಿ ದಿವಾಳಿ ಆಗುತ್ತಾರೆ‌. ಅಂತಿಮವಾಗಿ ತಾನು ಸಾಕು ಬೆಳೆಸಿದ ತಂಗಿಯರ ನೆರವು ಬಯಸಿದಾಗ ಅವರು ಕೂಡ ಸಹಾಯ ಮಾಡದೇ ಇಂದು ನಟಿ ಶಕೀಲಾ ಸಾಮಾನ್ಯರಂತೆ ಬಾಡಿಗೆ ಮನೆಯಲ್ಲಿ ಜೀವನ ಮಾಡುತ್ತಿದ್ದಾರೆ‌. ಒಂದು ಕಾಲದಲ್ಲಿ ಕೋಟ್ಯಧೀಶ್ವರೆಯಾಗಿ ಸ್ಟಾರ್ ನಟಿಯಾಗಿ ಮಿಂಚಿದ್ದ ನಟಿ ಇಂದು ದುಃಸ್ಥಿತಿ ತಲುಪಿದ್ದಾರೆ ಅಂದರೆ ಇದು ನಿಜಕ್ಕೂ ಕೂಡ ದುರಂತವೇ ಸರಿ ಎನ್ನಬಹುದು.

Leave a Reply

%d bloggers like this: