ಪತ್ನಿ ಕೀರ್ತಿಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಹೊಸ ಮನೆ ಖರೀದಿಸಿದ ದುನಿಯಾ ವಿಜಯ್! ಎಷ್ಟು ಕೋಟಿ ಗೊತ್ತಾ

ಕನ್ನಡ ಚಿತ್ರರಂಗದ ಖ್ಯಾತ ನಟ ದುನಿಯಾ ವಿಜಯ್ ತಮ್ಮ ಎರಡನೇ ಪತ್ನಿ ಕೀರ್ತಿ ಅವರಿಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಹೊಸದೊಂದು ಮನೆಯನ್ನು ಖರೀದಿ ಮಾಡಿದ್ದಾರೆ.ಧಾರಾವಾಹಿಗಳ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ವಿಜಯ್ ಮೂಲತಃ ರೈತಾಪಿ ಕುಟುಂಬದ ಆನೇಕಲ್ ನವರು. ಅನೇಕ ದೇಹಧಾರ್ಡ್ಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಪ್ರಶಸ್ತಿ ಪದಕಗಳನ್ನ ಮುಡಿಗೇರಿಸಿಕೊಂಡಿರುವ ವಿಜಯ್ ತದ ನಂತರ ಸಿನಿಮಾ ಲೋಕದಲ್ಲಿ ಏನಾದರು ಸಾಧಿಸಬೇಕು ಎಂಬ ಛಲದಿಂದ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಾರೆ.ಡೆಡ್ಲಿ ಸೋಮ,ರಂಗ ಎಸ್.ಎಸ್.ಎಲ್.ರಿಷಿ ಸಿ.,ಜೋಗಿ ಅಂತಹ ಅನೇಕ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ವಿಜಯ್ ಅವರಿಗೆ ಸೂರಿ ಅವರ ಪರಿಚಯವಾಗಿ ದುನಿಯಾ ಚಿತ್ರ ಮಾಡಲು ದಾರಿ ಸಿಗುತ್ತದೆ.ದುನಿಯಾ ಚಿತ್ರಕ್ಕೆ ತಾವು ಹೀರೋ ಆಗಲು ತಮ್ಮ ತಂದೆಯ ಬಳಿ ಮತ್ತು ಅವರ ಭಾವ ಸಿದ್ದರಾಜು ಅವರಿಂದ ಬಂಡವಾಳ ಹೂಡಿಕೆ ಮಾಡಿಸಿ ದುನಿಯಾ ಚಿತ್ರ ದಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಾರೆ.

ಸೂರಿ ನಿರ್ದೇಶನದಲ್ಲಿ ಮೂಡಿ ಬಂದ ಈ ದುನಿಯಾ ಚಿತ್ರದಲ್ಲಿ ವಿಜಯ್ ಅವರ ನಟನೆಗೆ ಸಿನಿ ಪ್ರಿಯರು ಫಿದಾ ಆಗುತ್ತಾರೆ.ಹೀಗೆ ದುನಿಯಾ ಚಿತ್ರದ ಯಶಸ್ಸಿನ ನಂತರ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಬೇಡಿಕೆಯ ನಟರಾಗಿ ಬೆಳೆದ ವಿಜಯ್ ತಮ್ಮ ದಾಂಪತ್ಯ ಜೀವನದಲ್ಲಿ ಎಡವುತ್ತಾರೆ.ಮೂವರು ಮಕ್ಕಳಿರುವ ವಿಜಯ್ ವೈಮನಸ್ಸಿನಿಂದಾಗಿ ತಮ್ಮ ಪತ್ನಿ ನಾಗರತ್ನ ಅವರಿಗೆ ವಿಚ್ಚೇದನ ನೀಡುತ್ತಾರೆ.ಬಳಿಕ ನಟಿ ಕೀರ್ತಿ ಅವರನ್ನು ಎರಡನೇ ಪತ್ನಿಯಾಗಿ ಸ್ವೀಕರಿಸುತ್ತಾರೆ.ನಟಿ ಕೀರ್ತಿ ಕೂಡ ಜಾಲಿಡೇಸ್ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದು ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ.ಶ್ರೀಮಂತ ಕುಟುಂಬದ ಹಿನ್ನೆಲೆ ಹೊಂದಿರುವ ಕೀರ್ತಿ ಅವರು ಕೋಟ್ಯಾಂತರ ರೂ.ಮೌಲ್ಯದ ಪ್ರಾಪರ್ಟಿ ಹೊಂದಿದ್ದಾರೆ.

ದುನಿಯಾ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾಗಿರುವ ಕೀರ್ತಿ ತಮ್ಮ ನೆಚ್ಚಿನ ಬಂಗಲೆಯಲ್ಲಿ ವಿಜಯ್ ಅವರೊಂದಿಗೆ ಸುಂದರ ಬದುಕನ್ನ ಕಟ್ಟಿಕೊಂಡಿದ್ದಾರೆ.ಇತ್ತೀಚೆಗೆ ತಾನೇ ನಟ ದುನಿಯಾ ವಿಜಯ್ ಸಲಗ ಚಿತ್ರದ ಮೂಲಕ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ.ಸಲಗ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ.ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ಮಾಡಿ.