ಪತಿಯ ಸಾವಿನ ವಿರುದ್ಧ ಸೇಡು ತೀರಿಸಿಕೊಂಡ ವೀರಮಹಿಳೆ, ಇತಿಯಾಸ ಪುಟದಿಂದ ಮರೆಯಾದ ವೀರ ಮಹಿಳೆ.. ನೋಡಿ ಒಮ್ಮೆ

ಹೋರಾಟದಲ್ಲಿ ಬ್ರಿಟೀಷರೇ ಅಚ್ಚರಿಗೊಳ್ಳುವಂತೆ ಶೌರ್ಯ ಮೆರೆದ ಈ ಮಹಿಳಾ ಹೋರಾಟಗಾರ್ತಿ ಯಾರು ಗೊತ್ತಾ..! ಬ್ರಿಟೀಷರನ್ನು ಭಾರತ ದಿಂದ ಹೊರ ಓಡಿಸಲು ಅನೇಕ ಸ್ವಾತಂತ್ರ್ಯ ಹೋರಾಟಗಳು ನಡೆದಿವೆ. ಈ ಹೋರಾಟದಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿ ಹೋರಾಟಗಾರರು ಹುತಾತ್ಮರಾಗಿದ್ದಾರೆ. ಕೇವಲ ಪುರುಷರು ಮಾತ್ರ ಅಲ್ಲದೆ ಈ ಸ್ವಾತಂತ್ಯ ಸಂಗ್ರಾಮದಲ್ಲಿ ಮಹಿಳೆಯರು ಕೂಡ ತಮ್ಮ ವೀರಶೌರ್ಯತೆ ಪ್ರದರ್ಶನ ಮಾಡಿ ತಮ್ಮ ಪ್ರಾಣವನ್ನ ತ್ಯಾಗ ಮಾಡಿದ್ದಾರೆ. ಅಂತೆಯೇ 1857 ಮತ್ತು 1858 ರಲ್ಲಿ ಭಾರತ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ದ ಸಂಗ್ರಾಮ ಸಾರುತ್ತದೆ. ಈ 1857 ರಲ್ಲಿ ನಡೆದ ಈ ಹೋರಾಟಕ್ಕೆ ಕಾರಣ ಏನೆಂದರೆ ಹೊರ ದೇಶದ ಅಂದರೆ ಬ್ರಿಟೀಷರು ಭಾರತಕ್ಕೆ ತಮ್ಮ ವ್ಯಾಪಾರ ವಹಿವಾಟಿಗೆ ಬಂದು ಇಡೀ ಭಾರತವನ್ನು ತಮ್ಮ ವಶಕ್ಕೆ ಪಡೆದು ತಮ್ಮ ಅನುಕೂಲಕ್ಕೆ ತಕ್ಕಂತೆ ದೇಶದಲ್ಲಿ ನೀತಿ ನಿಯಮಗಳನ್ನು ರೂಪಿಸಿ ಭಾರತೀಯರಿಗೆ ತೊಂದರೆ ಆಗುವಂತೆ ತಮ್ಮ ಕಾರ್ಯಗಳನ್ನ ಮಾಡಿಕೊಳ್ಳುತ್ತಿದ್ದರು.

ಅವುಗಳು ಸಾಮಾಜಿಕ ಸುಧಾರಣೆ, ಭೂ ತೆರಿಗೆಯನ್ನು ಹೆಚ್ಚು ಮಾಡುವಂತದ್ದು ತಮ್ಮ ಕಠಿಣ ನಿಯಮಗಳನ್ನ ಪಾಲಿಸುವಂತೆ ಬಲವಂತವಾಗಿ ಏರಿಕೆ ಮಾಡುವುದು ಒಟ್ಟಾರೆಯಾಗಿ ವಸಾಹತು ಶಾಹಿ ಭಾರತದಲ್ಲಿನಿರ್ಮಾಣವಾಗಿ ಭಾರತೀಯರ ಸ್ಥಿತಿ ಶೋಚನೀಯವಾಗ ತೊಡಗಿತ್ತು. ಭಾರತೀಯರ ಸಹನೆಯ ಕಟ್ಟೆ ಹೊಡೆದು1857 ರಲ್ಲಿ ಭಾರತದ ಮೊದಲ ಸಂಗ್ರಾಮಕ್ಕೆ ಕಾರಣವಾಯಿತು. ಈ ಸಂಗ್ರಾಮವನ್ನ ಸಿಪಾಯಿ ದಂಗೆ ಎಂತಲೂ ಕರೆಯಲಾಗುತ್ತದೆ. ಏಕೆಂದರೆ ದೆಹಲಿಯ ಈಶಾನ್ಯಕ್ಕೆ ನಲವತ್ತು ಮೈಲಿ ದೂರದಲ್ಲಿರುವ ಮೀರತ್ ನ ಗ್ಯಾರಿಸನ್ ಪಟ್ಟಣದಲ್ಲಿ ಕಂಪನಿಯ ಸೈನ್ಯದ ಸಿಪಾಯಿಗಳು ದಂಗೆಯ ರೂಪದಲ್ಲಿ ಈ ಹೋರಾಟ ಆರಂಭ ಆಗಿತ್ತು. ಇಂತಹ ಬೃಹತ್ ಹೋರಾಟದಲ್ಲಿ ಪುರುಷರು ಮಾತ್ರ ಅಲ್ಲದೆ ಅನೇಕ ಮಹಿಳೆಯರು ಕೂಡ ದೇಶಕ್ಕಾಗಿ ತಮ್ಮ ಶೌರ್ಯ ವನ್ನು ಪ್ರದರ್ಶನ ತೋರಿದ್ದಾರೆ.

ಅದರಂತೆ ಈ ಸ್ವಾತಂತ್ಯ ಮೊದಲ ಸಂಗ್ರಾಮದಲ್ಲಿ ಅನೇಕ ಮಹಿಳೆಯರು ತಮ್ಮ ಗಂಡಂದಿರನ್ನ ಕಳೆದುಕೊಳ್ಳುತ್ತಾರೆ. ಇವೆರಡರಲ್ಲಿ ಉದಾ ದೇವಿಯವರು ಕೂಡ ಪ್ರಮುಖರು. ಇವರ ಶೌರ್ಯಕ್ಕೆ ಬ್ರಿಟಿಷರೇ ಗೌರವ ಪೂರ್ವಕವಾಗಿ ನಮನ ಸಲ್ಲಿಸಿದ್ದರು. ಉದಾ ದೇವಿ ಅವರು ಲಕ್ನೋದ ಪಾಸಿ ಎಂಬ ಸಮುದಾಯದಲ್ಲಿ ಜನ್ಮ ಪಡೆಯುತ್ತಾರೆ. ಇವರು ಮಕ್ಕಾ ಎಂಬ ವ್ಯಕ್ತಿಯನ್ನ ಮದುವೆಯಾದ ನಂತರ ಅತ್ತೆಯ ಮನೆಯಲ್ಲಿ ಉದಾ ದೇವಿ ಅವರಿಗೆ ಜಾಗ್ರಾಣೆ ಎಂದು ಹೆಸರಿಡಲಾಗುತ್ತದೆ. ಈ ಸಂಧರ್ಭದಲ್ಲಿ ಲಕ್ನೋದ ಆರನೇ ನವಾಬ ವಾಜಿದ್ ತನ್ನ ಸೈನ್ಯವನ್ನು ಮತ್ತಷ್ಟು ವಿಸ್ತರಿಸುವ ಯೋಚನೆ ಇಂದ ಒಂದಷ್ಟು ಜನರನ್ನ ತನ್ನ ಸೈನಕ್ಕೆ ಸೇರಿಸಿಕೊಳ್ಳುತ್ತಾನೆ. ಇವರಲ್ಲಿ ಉದಾ ದೇವಿ ಅವರ ಪತಿ ಮಕ್ಕಾ ಕೂಡ ಒಬ್ಬರಾಗಿರುತ್ತಾರೆ.

ಯುದ್ದದ ಸಂಧರ್ಭದಲ್ಲಿ ಬ್ರಿಟೀಷರ ಗುಂಡೇಟಿಗೆ ಉದಾ ದೇವಿ ಪತಿ ಮಕ್ಕಾ ಸಾವನ್ನಪ್ನುತ್ತಾನೆ. ಆಗತಾನೆ ಮದುವೆ ಆಗಿದ್ದ ಉದಾ ದೇವಿ ಗಂಡನನ್ನು ಕಳೆದುಕೊಂಡು ವಿಧವೆ ಆಗುತ್ತಾಳೆ.ತನ್ನ ಗಂಡನ ಸಾವಿಗೆ ಕಾರಣರಾದ ಬ್ರಿಟೀಷರ ಸೈನಿಕರನ್ನ ಹೊಡೆದುರುಳಿಸಬೇಕು ಎಂದು ನವಾಬನ ಸೈನ್ಯಕ್ಕೆ ಉದಾ ದೇಶಿ ಸೇರಿಕೊಳ್ಳುತ್ತಾರೆ. ಇದೇ ಸಂಧರ್ಭದಲ್ಲಿ ಸಿಪಾಯಿ ದಂಗೆ ನಡೆಯುತ್ತದೆ. ಈ ರಣರಂಗದ ದಂಗೆಯಲ್ಲಿ ಉದಾ ದೇವಿ ಅವರು ಮದ್ದು ಗುಂಡಗಳನ್ನ ಹೊತ್ತು ಅರಳೀಮರ ಏರಿ ಮರೆಯಾಗಿ ಬ್ರಿಟೀಷರ ಸೈನಿಕರ ಮೇಲೆ ದಾಳಿ ನಡೆಸಿ ಬರೋಬ್ಬರಿ ಇಪ್ಪತ್ತೈದಕ್ಕೂ ಹೆಚ್ಚು ಶತ್ರುಗಳನ್ನು ನಾಶ ಮಾಡುತ್ತಾಳೆ.

ಯಾವ ಮಟ್ಟಿಗೆ ಅಂದರೆ ಬ್ರಿಟೀಷರು ಸಿಕಂದರ್ ಬಾಗ್ ಪ್ರವೇಶ ಮಾಡಲು ಹರ ಸಾಹಸ ಪಡುವಂತಹ ರೋಚಕವಾಗಿ ಉದಾ ದೇವಿ ಹೋರಾಟ ನಡೆಸಿದರು. ಆದರೆ ಅಂತಿಮವಾಗಿ ಅರಳಿಮರದಿಂದ ಬರುತ್ತಿದ್ದ ಮದ್ದು ಗುಂಡುಗಳ ರಭಸ ಕಂಡ ಬ್ರಿಟೀಷ್ ಸೈನಿಕ ಒಬ್ಬ ಗುರಿ ಇಟ್ಟು ಇತ್ತ ಗುಂಡು ಹಾರಿಸಿದ. ಉದಾ ದೇವಿ ನೆಲಕ್ಕುರುಳಿದರು. ಪುರುಷರ ವಸ್ತ್ರ ಧರಿಸಿದ್ದ ಉದಾ ದೇವಿಯನ್ನು ಕಂಡ ಬ್ರಿಟೀಷರು ಇವರ ಹೋರಾಟದ ಶೌರ್ಯಕ್ಕೆ ಮೆಚ್ಚಿ ತಮ್ಮ ಟೋಪಿಯನ್ನು ತೆಗೆದು ಗೌರವ ಸೂಚಿಸಿದರು. ಇಂದಿಗೂ ಕೂಡ ಪಾಸಿ ಸಮುದಾಯದವರು ವೀರ ಮರಣ ಹೊಂದಿದ ಉದಾ ದೇವಿ ಅವರ ಜಯಂತಿ ಆಚರಣೆ ಮಾಡುತ್ತಾರೆ.

ಶ್ರೀ ರಾಘವೇಂದ್ರ ಸ್ವಾಮಿಗಳು ಅರ್ಚಕ ಮನೆತನದವರು ಹಾಗೂ ಪ್ರಧಾನ ಗುರುಗಳು ಮೊಬೈಲ್ ಸಂಖ್ಯೆ 9538866755 ಇವರು ದುರ್ಗಾ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಅನಾರೋಗ್ಯ ಸಂಬಂಧಿಸಿದ ಸಮಸ್ಯೆಗಳು ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಂಜನಾ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕೂಡಲೇ ಕರೆ ಮಾಡಿ 9538866755.

Leave a Reply

%d bloggers like this: