ಪರಭಾಷೆಯ ಡಬ್ಬಿಂಗ್ ಹಾವಳಿ ನಡುವೆಯೂ ಕಿರುತೆರೆ ಪ್ರೇಕ್ಷಕರ ಮನ ಗೆದ್ದ ಅಪ್ಪಟ ಕನ್ನಡ ಧಾರಾವಾಹಿಗಳು!. ಯಾವವು ನೋಡಿ ಒಮ್ಮೆ

ಇತ್ತೀಚೆಗೆ ಕನ್ನಡ ಕಿರುತೆರೆ ವಾಹಿನಿಗಳಲ್ಲಿ ಭಾರಿ ಬದಲಾವಣೆ ಕಂಡಿವೆ.ಪರ ಭಾಷೆಯ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರ ಆಗುತ್ತಿವೆ.ಇದು ಮೂಲ ಕನ್ನಡ ಧಾರಾವಾಹಿಗಳಿಗೆ ಪರೋಕ್ಷವಾಗಿ ಪೆಟ್ಟು ಬೀಳುತ್ತಿವೆ ಎಂಬ ವಾದ ಒಂದೆಡೆಯಾದರೆ, ಮತ್ತೊಂದೆಡೆ ಕನ್ನಡ ಧಾರಾವಾಹಿಗಳು ಕೂಡ ಯಾವ ಭಾಷೆಗೂ ಕಡಿಮೆ ಇಲ್ಲದಂತಹ ಅದ್ಭುತ ಮೇಕಿಂಗ್,ಉತ್ತಮ ಕಥೆ, ಗುಣಮಟ್ಟದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ವಿಭಿನ್ನವಾಗಿ ಕಿರುತೆರೆಯಲ್ಲಿ ಮಿಂಚುತ್ತಿವೆ. ಒಂದಕ್ಕಿಂತ ಒಂದು ಪೈಪೋಟಿಯಂತೆ ನೂರು ಇನ್ನೂರು ಸಂಚಿಕೆಗಳನ್ನು ಪೂರೈಸಿ ಸಂಭ್ರಮಾಚರಣೆ ಮಾಡುತ್ತಿವೆ.ಮೊದಲ ಬಾರಿ ಕನ್ನಡದ ಧಾರಾವಾಹಿಯೂ ಕೂಡ ಈ ರೀತಿಯ ಅದ್ಭುತ ಮೇಕಿಂಗ್ ಮಾಡಬಹುದು ಎಂದು ಆರೂರು ಜಗದೀಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ನಿರೂಪಿಸಿತು‌.ಈ ಜೊತೆ ಜೊತೆಯಲಿ ಧಾರಾವಾಹಿ ಮಧ್ಯಮ ವರ್ಗದ ಕಥೆಯನ್ನ ಹೊಂದಿರುವುದರ ಜೊತೆಗೆ ಕಾರ್ಪೋರೇಟ್ ಕಥೆಯ ಎಳೆಯನ್ನು ಇಟ್ಟುಕೊಂಡು ಎಣೆದಿರುವ ಈ ಜೊತೆ ಜೊತೆಯಲಿ ಸೀರಿಯಲ್ ನಾಡಿನಾದ್ಯಂತ ಅಪಾರ ಜನಪ್ರಿಯತೆ ಪಡೆದುಕೊಂಡಿದೆ.

ಇದು ಟಿ.ಆರ್.ಪಿ ಯಲ್ಲಿ ನಂಬರ್ ಒನ್ ಸ್ಥಾನವನ್ನು ಕೂಡ ಪಡೆದುಕೊಂಡಿತ್ತು.ಇದೀಗ ಇದಕ್ಕೆ ಪ್ರಬಲ ಪೈಪೋಟಿಯಂತೆ ನಟ ದಿಲೀಪ್ ರಾಜ್ ನಿರ್ಮಾಣ ಮಾಡಿ ಸ್ವತಃ ಕಥಾ ನಾಯಕರಾಗಿ ನಟಿಸುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿ ಇತ್ತೀಚೆಗಷ್ಟೇ ಕಿರುತೆರೆಗೆ ಎಂಟ್ರಿಕೊಟ್ಟು ಕಥೆ ಮತ್ತು ಮೇಕಿಂಗ್ ಮೂಲಕ ಭಾರಿ ಜನ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.ಅದರಂತೆ ಕನ್ನಡದ್ದ ಪ್ರಸಿದ್ದ ಉದಯ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಕಾದಂಬರಿ ಸೀರಿಯಲ್ ಜವಾಬ್ದಾರಿಯುತ ಹೆಣ್ಣು ಮಗಳೊಬ್ಬಳ ಕಥೆಯನ್ನು ಹೊಂದಿದ್ದು ಮಹಿಳಾ ಪ್ರೇಕ್ಷಕರನ್ನು ತನ್ನತ್ತ ಸೆಳೆದಿಟ್ಟಿಕೊಂಡಿದೆ. ಕಿರುತೆರೆಯ ಜನಪ್ರಿಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅನೇಕ ಹೊಸ ಹೊಸ ಧಾರಾವಾಹಿಗಳು ಆರಂಭವಾಗಿವೆ.ಅವುಗಳಲ್ಲಿ ಲಕ್ಷಣ ಧಾರಾವಾಹಿ ಕೂಡ ಒಂದು.ಸಮಾಜದಲ್ಲಿರುವ ವರ್ಣಭೇಧ ಯಾವ ರೀತಿಯಾಗಿ ಪರಿಣಾಮ ಬೀರುತ್ತದೆ ಎಂಬುದನ್ನ ಸೂಕ್ಷ್ಮವಾಗಿ ಹೇಳಲಾಗುತ್ತಿದೆ.ಕಪ್ಪು ಬಣ್ಣ ಹೊಂದಿರುವ ಹೆಣ್ಣು ಮಕ್ಕಳು ಸಮಾಜದಿಂದ ಯಾವ ರೀತಿಯ ಅವಮಾನ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನ ನಿರ್ದೇಶಕರು ಉತ್ತಮವಾಗಿ ನಿರೂಪಿಸಿದ್ದಾರೆ.

ಇನ್ನು ಲಕ್ಷ್ಮಿ ಬಾರಮ್ಮಾ ಧಾರಾವಾಹಿ ಖ್ಯಾತಿಯ ನಟ ಚಂದನ್ ಇದೇ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿರುವ ಮರಳಿ ಮನಸಾಗಿದೆ ಧಾರಾವಾಹಿ ಕೂಡ ಕಿರುತೆರೆ ವೀಕ್ಷಕರಿಗೆ ಮೋಡಿ ಮಾಡಿದೆ.ಹಿಂದಿ ಧಾರಾವಾಹಿ ರಿಮೇಕ್ ಆಗಿದ್ದರು ಕೂಡ ಈ ಮರಳಿ ಮನಸಾಗಿದೆ ಸೀರಿಯಲ್ ಕನ್ನಡ ನೇಟಿವಿಟಿಗೆ ತಕ್ಕಂತೆ ಸುಂದರವಾಗಿ ಮೂಡಿ ಬಂದಿದೆ.ಎರಡು ಒಲವಿನ ಜೀವಗಳ ನಡುವೆ ಸಿಲುಕಿಕೊಳ್ಳುವ ಚಂದನ್ ಪಾತ್ರ ಯುವ ಪೀಳಿಗೆಗೆ ಇಷ್ಟವಾಗಿದ್ದು,ಸ್ಟಾರ್ ಸುವರ್ಣ ವಾಹಿನಿಯಲ್ಲಿ ಉತ್ತಮ ರೇಟಿಂಗ್ ಹೊಂದಿರುವ ಧಾರಾವಾಹಿಯಾಗಿ ಹೊರ ಹೊಮ್ಮಿದೆ. ಹಾಗೆಯೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ತಾನೇ ಐವತ್ತು ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಸಾಗುತ್ತಿರುವ ಕನ್ಯಾಕುಮಾರಿ ಧಾರಾವಾಹಿ ಮಧ್ಯಮ ವರ್ಗದ ಬದುಕು ಮತ್ತು ಶ್ರೀಮಂತಿಕೆಯ ಜೀವನ ಶೈಲಿಯನ್ನ ಕಥಾ ನಾಯಕ ಮತ್ತು ಕಥಾ ನಾಯಕಿಯನ್ನಾಗಿ ನಿರೂಪಿಸಲಾಗಿದ್ದು ವೀಕ್ಷಕರಿಗೆ ಅಚ್ಚು ಮೆಚ್ಚಾಗಿದೆ.ಹೀಗೆ ಕನ್ನಡದ ಈ ಹೊಸ ಧಾರಾವಾಹಿಗಳು ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಕುತೂಹಲಭರಿತ ಕಥಾಹಂದರ ಸೀರಿಯಲ್ ಗಳ ಮೂಲಕ ಮನರಂಜಿಸುತ್ತಿವೆ.

Leave a Reply

%d bloggers like this: