ಪಾತ್ರ ಬೇಕಾದರೆ ನನ್ನ ಜೊತೆ ಮಲಗು ಎಂದಿದ್ದರು! ದಕ್ಷಿಣ ಭಾರತದ ಈ ಖ್ಯಾತ ನಿರ್ದೇಶಕ

ಸಿನಿಮಾ ಬಣ್ಣದ ಜಗತ್ತು ಹೊರಗಡೆಯಿಂದ ನೋಡಿದಂತೆ ತುಂಬಾ ಸುಂದರವಾಗಿ ಕಾಣುವಷ್ಟು ಅದರ ಒಳಹೊಕ್ಕು ನೋಡಿದಾಗ ಅದರದೇ ಆದಂತಹ ವಿಚಾರ ಸಂಗತಿಗಳು ಇರುತ್ತವೆ‌. ಆಗಂತಾ ಸಿನಿಮಾ ಕ್ಷೇತ್ರದಲ್ಲಿ ಬರೀ ಕೆಟ್ಟದ್ದೇ ಇರುತ್ತದೆ ಎಂದು ಹೇಳಲಾಗುತ್ತಿಲ್ಲ. ಪ್ರತಿ ಕ್ಷೇತ್ರದಲ್ಲಿ ಇರುವಂತೆ ಒಳ್ಳೇಯದು ಮತ್ತು ಕೆಟ್ಟದ್ದು ಎರಡೂ ಇರುತ್ತದೆ. ಸಿನಿಮಾ ಎಲ್ಲಾರನ್ನು ಆಕರ್ಷಿಸುತ್ತದೆ. ಕಲಾ ಸರಸ್ವತಿ ಎಲ್ಲರನ್ನು ಕೈ ಹಿಡಿಯುವುದಿಲ್ಲ. ಅವರಲ್ಲಿ ಕೆಲವರಲ್ಲಿ ಕೆಲವರನ್ನ ಮಾತ್ರ ತನ್ನಲ್ಲಿ ಹಿಡಿದಿಟ್ಟುಕೊಳ್ಳುತ್ತಾಳೆ. ಅದಕ್ಕೂ ಮುನ್ನ ಸಿನಿಮಾದ್ಲಲಿ ಅವಕಾಶ ಪಡೆಯುವುದು ಕೂಡ ಒಂದು ಯಾಗವಿದ್ದಂತೆ ಇರುತ್ತದೆ. ಬಾಲಿವುಡ್ ಸೇರಿದಂತೆ ಎಲ್ಲಾ ಭಾಷೆಯ ಚಿತ್ರರಂಗದಲ್ಲಿಯೂ ಕೂಡ ಈ ಅವಕಾಶಕ್ಕಾಗಿ ಅಲೆಯುವುದು ಹೊಸದೇನಲ್ಲ.ಭಿನ್ನವೇನೂ ಇಲ್ಲ‌.

ಇಲ್ಲಿ ಹುಡುಗರು ಹೀರೋ ಆಗಬೇಕು ಎಂದುಕೊಂಡು ಬಂದಾಗ ಅವರಲ್ಲಿ ಹಣ ಪಡೆದುಕೊಳ್ಳುವುದು ಸಾಮಾನ್ಯವಾಗಿರುತ್ತದೆ‌. ಅದೇ ರೀತಿಯಾಗಿ ಹುಡುಗಿಯರು ಸಿನಿಮಾದಲ್ಲಿ ಅವಕಾಶ ಕೇಳಕೊಂಡು ಹೋದಾಗ ಅದು ಕೆಲವು ದುಷ್ಟ ನಿರ್ಮಾಪಕ ಅಥವಾ ನಿರ್ದೇಶಕರು ಅವರನ್ನ ನೋಡುವ ರೀತಿ ಬೇರೆಯದ್ದೇ ಆಗಿರುತ್ತದೆ. ಅದನ್ನ ಸಿನಿಮಾಲೋಕದಲ್ಲಿ ಕಾಸ್ಟಿಂಗ್ ಕೌಚ್ ಎಂಬ ಹೆಸರಿನಿಂದ ಕರೆಯುತ್ತಾರೆ.ಇದೀಗ ಅಂತಹದ್ದೇ ಅನುಭವ ಆಗಿರುವ ಬಾಲಿವುಡ್ ನ ಖ್ಯಾತ ನಟಿಯೊಬ್ಬರು ತಾವು ಅವಕಾಶ ಕೇಳಿದಾಗ ನಿರ್ದೇಶಕನೊಬ್ಬ ತನ್ನ ಜೊತೆ ಮಲಗು ಎಂದಿದ್ದ ಎಂದು ಹೇಳಿದ್ದಾರೆ.

ಹಿಂದಿಯ ಏಕ್ ದೀವಾನಾ ಥಾ ಮತ್ತು ರೂಪ್ ಮರ್ದ್ ಕಾ ನಯಾ ಸ್ವರೂಪ್ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಜನಪ್ರಿಯರಾಗಿರುವ ನಟಿ ಡೊನಾಲ್ ಬಿಶ್ತ್ ತಮಗಾದ ಅನುಭವವನ್ನು ಖಾಸಗಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ನಟಿ ಡೊನಾಲ್ ಬಿಶ್ತ್ ಅವರು ಬಣ್ಣದ ಲೋಕಕ್ಕೆ ಎಂಟ್ರಿ ಪಡೆದುಕೊಳ್ಳುವ ಮೊದಲು ರಿಯಾಲಿಟಿ ಶೋ ಒಂದಕ್ಕೆ ಆಯ್ಕೆ ಆಗಿದ್ದಾರಂತೆ. ಅವರ ಸಂಭಾವನೆ ಕೂಡ ಮಾತಾಡಿ ನಂತರ ದಿಢೀರ್ ಅವರನ್ನ ಏಕಾಏಕಿ ಆ ರಿಯಾಲಿಟಿ ಶೋ ಪಟ್ಟಿಯಿಂದ ಹೊರಗಿಟ್ಟರಂತೆ. ಸೂಕ್ತ ಕಾರಣಗಳಿಲ್ಲದೆ ತಮ್ಮನ್ನ ಏಕೆ ತೆಗೆದು ಹಾಕಿದಿರಿ ಎಂಬ ಪ್ರಶ್ನೆಗೆ ಕಾರ್ಯಕ್ರಮದವರು ಇನ್ನೊಬ್ಬ ನಟಿ ಆಯ್ಕೆ ಆಯ್ತು ಹಾಗಾಗಿ ನಿಮ್ಮನ್ನು ಕೈ ಬಿಡಲಾಗಿದೆ ಎಂದರಂತೆ.

ಇದರಿಂದ ನಟಿ ಡೊನಾಲ್ ಬಿಶ್ತ್ ಅವರಿಗೆ ಕೊಂಚ ಬೇಸರ ಆಗಿತ್ತಂತೆ. ಇದರಿಂದ ಅವರ ಪೋಷಕರು ಕೂಡ ಈ ಮುಂಬೈ ಬಣ್ಣದ ಜಗತ್ತು ನಮಗಲ್ಲ ನೀನು ಮತ್ತೆ ಪತ್ರಿಕೋದ್ಯಮಕ್ಕೆ ಹೋಗು ಎಂದು ಸಲಹೆ ನೀಡಿದ್ದರಂತೆ. ಆದರೆ ಡೊನಾಲ್ ಬಿಶ್ತ್ ಅವರಿಗೆ ನಟನಾ ಕ್ಷೇತ್ರದಲ್ಲಿ ಏನಾದರು ಸಾಧಿಸಬೇಕು ಎಂಬ ಹಠ-ಛಲ ಇದ್ದಿದ್ದರಿಂದ ನಿರುತ್ಸಾಹಕ್ಕೆ ಒಳಗಾಗದೇ ಮತ್ತೆ ಬೇರೆ ಆಡಿಶನ್ ಗೆ ಪ್ರಯತ್ನ ಪಡುತ್ತಾರಂತೆ. ಇದೇ ಸಂಧರ್ಭದಲ್ಲಿ ಅವರ ಹೆಸರು ಹೇಳದೆ ಸೌತ್ ಸಿನಿಮಾ ನಿರ್ಮಾಪಕನೊಬ್ಬ ಅವಕಾಶ ನೀಡುತ್ತೇನೆ ನನ್ನ ಜೊತೆ ಮಲಗುತ್ತೀಯಾ ಎಂದು ಕೇಳಿದ್ದರಂತೆ. ಇದರಿಂದ ಕೋಪಗೊಂಡ ಡೊನೊಲ್ ಬಿಶ್ತ್ ತಕ್ಷಣ ಪೊಲೀಸರಿಗೆ ದೂರು ನೀಡಿದರಂತೆ.

ಇದಾದ ಬಳಿಕ ತಾನು ಎಷ್ಟೇ ಕಷ್ಟ ಆದರು ಪರವಾಗಿಲ್ಲ ನ್ಯಾಯವಾದ ರೀತಿಯಲ್ಲಿಯೇ ಸಿನಿಮಾ ರಂಗ ಪ್ರವೇಶ ಪಡೆಯುತ್ತೇನೆ ಎಂದು ನಿರ್ಧರಿಸಿ ದೃಢ ನಿರ್ಧಾರ ಮಾಡುತ್ತಾರೆ. ಅವರ ಸಂಕಲ್ಪದಂತೆ 2019 ರಲ್ಲಿ ಡೊನಾಲ್ ಬಿಶ್ತ್ ಅವರಿಗೆ ಅತ್ಯಂತ ಜನಪ್ರಾಯ ಕಿರುತೆರೆ ನಟಿಯರ ಪೈಕಿ ಟಾಪ್ 20 ರಲ್ಲಿ 18 ನೇ ಸ್ಥಾನವನ್ನು ಪಡೆಯುತ್ತಾರಂತೆ. ಇಂದು ಹಿಂದಿ ಕಿರುತೆರೆಯ ಅನೇಕ ರಿಯಾಲಿಟಿ ಶೋ ಗಳಲ್ಲಿ ಜನಪ್ರಿಯರಾಗಿ ಹೊರ ಹೊಮ್ಮಿದ್ದಾರೆ ಡೊನಾಲ್ ಬಿಶ್ತ್. ಈ ಲೇಖನ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: