ಪಾದಯಾತ್ರೆಗಳ ಬೇಜವಾಬ್ದಾರಿ ವರ್ತನೆಗೆ ಮೂವತ್ತಕ್ಕೂ ಹೆಚ್ಚು ಜಾನುವಾರುಗಳು ಸಾವು..!

ಪಾದಯಾತ್ರೆಗಳ ಬೇಜವಾಬ್ದಾರಿ ವರ್ತನೆಗೆ ಮೂವತ್ತಕ್ಕೂ ಹೆಚ್ಚು ಜಾನುವಾರುಗಳು ಸಾವು..! ಒಂದೆಡೆ ಗೋವುಗಳ ಸಂರಕ್ಷಣೆ ಕುರಿತು ಅನೇಕ ಸಂಘ ಸಂಸ್ಥೆಗಳು ಅಭಿಯಾನ ಆರಂಭಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿವೆ. ಇನ್ನೊಂದೆಡೆ ಜನರು ಮಾಡುವ ಧೋರಣೆಯ ಫಲವಾಗಿ ಅದೇ ಗೋವುಗಳುಸಾವನ್ನಪ್ಪವೆ. ಈ ದುರಂತದ ಘಟನೆ ನಡೆದಿರುವುದು ಚಿಕ್ಕ ಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ. ಮಾರ್ಚ್ ಒಂದರಂದು ರಾಜ್ಯದೆಲ್ಲೆಡೆ ಅದ್ದೂರಿಯಾಗಿ ಶಿವರಾತ್ರಿ ಹಬ್ಬ ಆಚರಣೆ ಮಾಡಲಾಯಿತು. ಇದಕ್ಕಾಗಿ ಶಿವನ ಭಕ್ತರು ವಿವಿಧ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವ ತಮ್ಮ ಹರಕೆಯನ್ನು ಕೂಡ ಪೂರೈಸಿಕೊಂಡರು‌. ಅದರಂತೆ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ವಾರಕ್ಕೂ ಮೊದಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಮಂದಿ ಕಾಲ್ನಡಿಗೆಯಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಪಾದಯಾತ್ರೆ ಬೆಳೆಸಿದ್ದಾರೆ.

ಹೀಗೆ ಕಾಲ್ನಡಿಗೆಯಲ್ಲಿ ಬರುವಾಗ ಅನೇಕ ಜನರು ತಾವು ಪೊಟ್ಟಣಗಳಲ್ಲಿ ತಂದಿದಂತಹ ಆಹಾರ ಪದಾರ್ಥಗಳನ್ನು ತಿಂದು ತಾವು ತಂಗಿದಂತಹ ಸ್ಥಳದಲ್ಲಿ ಖಾಲಿ ಪ್ಲಾಸ್ಟಿಕ್ ಗಳನ್ನ ಅಲ್ಲೇ ಬಿಸಾಡಿದ್ದಾರೆ. ಹೇಳಿ ಕೇಳೀ ಪ್ರವಾಸ ತಾಣ ಆಗಿರುವ ಚಿಕ್ಕಮಗಳೂರು ಜಿಲ್ಲೆಗೆ ರಾಜ್ಯದ ವಿವಿಧ ಭಾಗಗಳಳಿಂದ ಸಾವಿರಾರು ಜನ ಬರುತ್ತಾರೆ. ಈ ಸಂಧರ್ಭದಲ್ಲಿಅನೇಕ ಪ್ರವಾಸಿಗರು ಸಿಕ್ಕ ಸಿಕ್ಕಲ್ಲಿ ತ್ಯಾಜ್ಯ ವಸ್ತುಗಳನ್ನು ಬಿಸಾಡಿ ಅಲ್ಲಿನ ಸ್ವಚ್ಚತೆಯನ್ಧ ಹಾಳು ಮಾಡುತ್ತಿರುವ ಅನೇಕ ಘಟನೆಗಳನ್ನು ಅಲ್ಲಿನ ಸ್ಥಳೀಯರೇ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ವಚ್ಚತಾ ಅಭಿಯಾನದಡಿ ಜಿಲ್ಲಾಡಳಿತ ಕೂಡ ಸ್ವಚ್ಚತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಕೂಡ ಮಾಡಿದ್ದಾರೆ.

ಆದರೆ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಪಾದಯಾತ್ರೆ ಹಮ್ಮಿಕೊಂಡಡಿದ್ದ ಕೆಲವು ಜನರು ಮೂಡಿಗೆರೆ ತಾಲ್ಲೂಕಿನ ಸುತ್ತ ಮುತ್ತ ಪ್ರಯಾಣ ಮಾಡುವಾಗ ತಾವು ತಂದಿದ್ದ ಆಹಾರ ಪದಾರ್ಥಗಳನ್ನು ಸೇವಿಸಿದ ನಂತರ ಪ್ಲಾಸ್ಟಿಕ್ ಕವರ್, ಬಾಟಲ್ ಸೇರಿದಂತೆ ಒಂದಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳನ್ನ ಎಲ್ಲೆಂದರಲ್ಲಿ ಬಿಸಾಡಿದ್ದಾರೆ. ಈ ಪ್ಲ್ಯಾಸ್ಟಿಕ್ ತ್ಯಾಜ್ಯಗಳನ್ನು ಅಲ್ಲಿನ ಸುತ್ತ ಮುತ್ತ ಗ್ರಾಮದ ಜಾನುವಾರು ಸೇವಿಸಿ ಸರಿಸುಮಾರು ಮೂವತ್ತಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿವೆ. ಇದರಿಂದ ಅಲ್ಲಿ ಸಾವನ್ನಪಿದ ಹಸು-ಕರುಗಳನ್ನು ಸಾಕಿದ ರೈತರು ಕಣ್ಣೀರಿಡುವಂತಾಗಿದೆ.

Leave a Reply

%d bloggers like this: