ಒಟ್ಟೊಟ್ಟಿಗೆ ಮೂರೂ ನ್ಯೂಸ್ ಚಾನೆಲ್ ಖರೀದಿಸಲಿದ್ದಾರೆ ತೆಲುಗಿನ ದೊಡ್ಡ ಖ್ಯಾತ ನಟ

ಟಾಲಿವುಡ್ ಸೂಪರ್ ಸ್ಟಾರ್ ತನ್ನ ಚಿಕ್ಕಪ್ಪನ ರಾಜಕೀಯ ಪಕ್ಷ ಪ್ರಚಾರಕ್ಕಾಗಿ ಒಟ್ಟೊಟ್ಟಿಗೆ ಮೂರು ಸುದ್ದಿ ವಾಹಿನಿಯನ್ನ ಖರೀದಿ ಮಾಡಲು ಮುಂದಾಗಿದ್ದಾರೆ.ಸಿನಿಮಾ ಸೆಲೆಬ್ರಿಟಿಗಳು ಅಂದ ಮೇಲೆ ಹಣಕ್ಕೇನೂ ಕೊರತೆ ಇಲ್ಲ ಕೆಲವು ಕಲಾವಿದರನ್ನ ಹೊರತು ಪಡಿಸಿದರೆ.ಇನ್ನು ಬೇಡಿಕೆಯ ಬಹುತೇಕ ನಟ-ನಟಿಯರು ತಮ್ಮ ಸಿನಿಮಾ ಕೆರಿಯರ್ ಜೊತೆ ಜೊತೆಗೆ ಸ್ಟಾರ್ಟ್ ಅಪ್ ಬ್ಯುಸಿನೆಸ್ ಗಳನ್ನ ಹೊಂದಿದ್ದಾರೆ.ಅಷ್ಟೇ ಅಲ್ಲದೇ ಅವರ ಕುಟುಂಬದವರ ಹೆಸರನಲ್ಲಿ ಹಲವು ಶೇರುಗಳು ಮತ್ತು ವಿವಿಧ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡುತ್ತಾರೆ.ಅದರಂತೆ ಇದೀಗ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ ರಾಮ್ ಚರಣ್ ತೇಜಾ ಕೂಡ ಹೊಸದೊಂದು ಉದ್ಯಮಕ್ಕೆ ಹೆಜ್ಜೆ ಇಡುತ್ತಿದ್ದಾರೆ.ನಟ ರಾಮ್ ಚರಣ್ ತೇಜಾ ಕೇವಲ ನಟ ಮಾತ್ರ ಅಲ್ಲ.

ನಿರ್ಮಾಪಕ ಹಾಗೂ ಉದ್ಯಮಿಯೂ ಕೂಡ ಹೌದು.ಇವರು ಏರ್ಲೈನ್ಸ್ ಸಿನಿ ಸಂಸ್ಥೆ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಕ್ಲಬ್ ಹೊಂದನ್ನ ಕೂಡ ಹೊಂದಿದ್ದಾರೆ.ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿದೆಲ ದೊಡ್ಡ ಉದ್ಯಮ ಕುಟುಂಬದಿಂದ ಬಂದವರು.ಅಪೋಲ್ ಗ್ರೂಪ್ ಆಫ್ ಕಂಪನಿಯ ಮಾಲೀಕರಾಗಿರುವ ಉಪಾಸನಾ ಕೂಡ ಕೆಲವು ವ್ಯವಹಾರಗಳನ್ನ ನೋಡಿಕೊಳ್ಳುತ್ತಾರೆ.ಇನ್ನು ಇಷ್ಟೆಲ್ಲಾ ವ್ಯವಹಾರಗಳ ನಡುವೆ ರಾಮ್ ಚರಣ್ ತೇಜಾ ದೃಶ್ಯ ಮಾಧ್ಯಮ ಕ್ಷೇತ್ರಕ್ಕೂ ಹೆಜ್ಜೆ ಇಟ್ಟಿದ್ದಾರೆ.ನಷ್ಟ ದಲ್ಲಿ ಸಾಗುತ್ತಿರುವ ಮೂರು ವಾಹಿನಿಯನ್ನ ಖರೀದಿಸಿ ಅವುಗಳಿಗೆ ಆಧುನಿಕ ಸ್ಪರ್ಶ ಕೊಟ್ಟು ಹೊಸ ರೂಪದಲ್ಲಿ ಪುನರಾರಂಭ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.

ಇದು ಆದಾಯ ಗಳಿಸುವ ಉದ್ದೇಶಕ್ಕೆ ಮಾತ್ರ ಅಲ್ಲದೆ ತಮ್ಮ ಚಿಕ್ಕಪ್ಪ ಪವನ್ ಕಲ್ಯಾಣ್ ಅವರ ಜನಸೇನಾ ಎಂಬ ರಾಜಕೀಯ ಪಕ್ಷದ ಪ್ರಚಾರಕ್ಕಾಗಿಯೂ ಕೂಡ ಬಳಸುವ ಉದ್ದೇಶವನ್ನೊಂದಿದೆ ಎಂದು ತಿಳಿದು ಬಂದಿದೆ.ಒಟ್ಟಾರೆಯಾಗಿ ನಟ ರಾಮ್ ಚರಣ್ ತೇಜಾ ಅವರು ತಮ್ಮ ಕುಟುಂಬದ ಏಳ್ಗೆಯ ಜೊತೆ ಜೊತೆಗೆ ತಾವೂ ಕೂಡ ಹೇಗೆ ಅಭಿವೃದ್ದಿ ಆಗಬಹುದು ಎಂಬುದನ್ನ ಚೆನ್ನಾಗಿಯೇ ಅರಿತಿದ್ದಾರೆ. ಇಷ್ಟ ಆದ್ರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ.

Leave a Reply

%d bloggers like this: