ಓಟಿಟಿಯಲ್ಲಿ ಬಿಡುಗಡೆ ಆದ 24 ಗಂಟೆಯಲ್ಲಿ ಹೊಸ ದಾಖಲೆ ಬರೆದ ವಿಕ್ರಾಂತ್ ರೋಣ ಚಿತ್ರ

ಕಿಚ್ಚನ ವಿಕ್ರಾಂತ್ ರೋಣ ಸಿನಿಮಾ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ. ಹೌದು ಸ್ಯಾಂಡಲ್ ವುಡ್ ಬಾದ್ ಶಾ ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ವಿಕ್ರಾಂತ್ ರೋಣ ಸಿನಿಮಾ ಜುಲೈ 28ರಂದು ಪಂಚ ಭಾಷೆಗಳಲ್ಲಿ ವರ್ಲ್ಡ್ ವೈಡ್ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಂಡಿತು. ಫ್ಯಾಂಟಸಿ ಆಕ್ಷನ್ ಅಂಡ್ ಥ್ರಿಲ್ಲರ್ ವಿಕ್ರಾಂತ್ ರೋಣ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡಿಸ್ ಕೂಡ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿ ಬಂದ ಈ ವಿಕ್ರಾಂತ್ ರೋಣ ಸಿನಿಮಾಗೆ ನಿರ್ಮಾಪಕ ಜಾಕ್ ಮಂಜು ಅವರು ಬರೋಬ್ಬರಿ ನೂರು ಕೋಟಿ ವೆಚ್ಚ ಮಾಡಿದ್ದರು. ಅದರಂತೆ ಥ್ರೀ ಡಿಯಲ್ಲಿ ಸಿನಿಮಾ ನೋಡಿ ಪ್ರೇಕ್ಷಕರು ಜೈ ಹೋ ಹೇಳಿದ್ರು. ಕಿಚ್ಚನ ಹೊಸ ಅವತಾರದಲ್ಲಿ ಕಂಡು ಕಣ್ತುಂಬಿಕೊಂಡಿದ್ದ ಪ್ರೇಕ್ಷಕ್ಷರು ಇದೀಗ ಓಟಿಟಿಯಲ್ಲಿಯೂ ಕೂಡ ಕಣ್ತುಂಬಿಕೊಂಡಿದ್ದಾರೆ.

ಹೌದು ಸೆಪ್ಟೆಂಬರ್ 2ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಓಟಿಟಿ ಜೀ಼ ಫೈವ್ ನಲ್ಲಿ ರಿಲೀಸ್ ಆಗಿದೆ. ಥಿಯೇಟರ್ ನಲ್ಲಿ ಮೋಡಿ ಮಾಡಿ ಬರೋಬ್ಬರಿ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ವಿಕ್ರಾಂತ್ ರೋಣ ಸಿನಿಮಾ ಇದೀಗ ಓಟಿಟಿಯಲ್ಲಿಯೂ ಕೂಡ ದಾಖಲೆ ಮಾಡಿದೆ. ಹೌದು ವಿಕ್ರಾಂತ್ ರೋಣ ಸಿನಿಮಾ ಒಂದೇ ದಿನದಲ್ಲಿ ಬರೋಬ್ಬರಿ ಐನೂರು ಮಿಲಿಯನ್ ಅಂದರೆ ಐವತ್ತು ಕೋಟಿ ನಿಮಿಷ ವೀಕ್ಷಣೆ ಕಂಡು ದಾಖಲೆ ಮಾಡಿದೆಯಂತೆ. ಈ ಸಖತ್ ಸುದ್ದಿಯನ್ನ ಜೀ಼ ಫೈವ್ ಓಟಿಟಿ ಸಂಸ್ಥೆಯೇ ತಿಳಿಸಿದೆ. ಈ ಸುದ್ದಿ ತಿಳಿದ ಕಿಚ್ಚನ ಅಭಿಮಾನಿಗಳು ಸಖತ್ ಎಕ್ಸೈಟ್ ಆಗಿದ್ದಾರೆ. ಇನ್ನು ವಿಕ್ರಾಂತ್ ರೋಣ ಚಿತ್ರದ ಯಶಸ್ಸಿನಲ್ಲಿರೋ ಕಿಚ್ಚ ಸುದೀಪ್ ಅವರು ತಮ್ಮ ಹುಟ್ಟು ಹಬ್ಬದಂದು ಯಾವುದೇ ರೀತಿ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಆದರೆ ವರ್ಷಕ್ಕೆ ಎರಡು ಸಿನಿಮಾಗಳು ರಿಲೀಸ್ ಆಗೋ ರೀತಿ ಯೋಜನೆ ಹಾಕಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನು ವಿಕ್ರಾಂತ್ ರೋಣ ಸಿನಿಮಾದ ನಂತರ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಾಂಬಿನೇಶನ್ ನಲ್ಲಿ ಮತ್ತೊಂದು ಸಿನಿಮಾ ಬರಲಿದೆ ಎಂದು ತಿಳಿದು ಬಂದಿದೆ.

Leave a Reply

%d bloggers like this: