ಬರಿ 5 ನಿಮಿಷ ಪಾತ್ರಕ್ಕೆ ಈ ಶ್ರೀಲಂಕಾ ಸುಂದ್ರಿ ಎಷ್ಟು ಕೋಟಿ ಹಣ ಡಿಮ್ಯಾಂಡ್ ಮಾಡಿದ್ದಾಳೆ ಗೊತ್ತಾ? ಇವರ ಪಾತ್ರವೇನು ಗೊತ್ತಾ

ಕೇವಲ ಹಾಡೊಂದರಲ್ಲಿ ಸೊಂಟ ಬಳುಕಿಸಲು ಶ್ರೀಲಂಕನ್ ಬೆಡಗಿ ಬೇಡಿಕೆಯಿಟ್ಟ ಹಣದ ಮೊತ್ತ ಎಷ್ಟು ಗೊತ್ತಾ…! ಕನ್ನಡದ ಮತ್ತೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾವಾಗಲು ಹೊರಟಿರುವ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಹವಾ ಈಗಾಗಲೇ ದೇಶಾದ್ಯಂತ ಭಾರಿ ಸೌಂಡ್ ಮಾಡುತ್ತಿದೆ.ಸೌತ್ ಸಿನಿ ರಂಗದ ಬಹು ನಿರೀಕ್ಷಿತ ಸಿನಿಮಾವಾಗಿರುವ ವಿಕ್ರಾಂತ್ ರೋಣ ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಈ ಫ್ಯಾಂಟಸಿ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಕಾರ್ಯವನ್ನು ಕೂಡ ಪೂರೈಸಿಕೊಂಡಿದೆ.ಇನ್ನೇನೋ ಕೆಲವೇ ದಿನಗಳಲ್ಲಿ ಈ ವಿಕ್ರಾಂತ್ ರೋಣ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಿ ಚಿತ್ರದ ಪ್ರಚಾರ ಕಾರ್ಯ ಕೂಡ ಆರಂಭಗೊಳ್ಳಲಿದೆ.ಕನ್ನಡ ,ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ತಯಾರಾಗುತ್ತಿರುವ ವಿಕ್ರಾಂತ್ ರೋಣ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ.ಈ ಚಿತ್ರದಲ್ಲಿ ಹೊಸ ಕಲಾವಿದರೇ ಹೆಚ್ಚು ಇದ್ದಾರೆ.

ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮೋಹನ್ ಬಿ.ಕೆರೆ. ಸ್ಟೂಡಿಯೋದಲ್ಲಿ ಅದ್ದೂರಿತನದ ಸೆಟ್ ಹಾಕಿ ಶ್ರೀಲಂಕನ್ ಚೆಲುವೆ ಜಾಕ್ವೇಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಿದ್ದರು. ಕೇವಲ ಐದು ನಿಮಿಷದ ಈ ಒಂದು ಹಾಡಿಗೆ ಬಾಲಿವುಡ್ ಬ್ಯೂಟಿ ನಟಿ ಜಾಕ್ವೇಲಿನ್ ಫರ್ನಾಂಡೀಸ್ ಅವರು ಬರೋಬ್ಬರಿ ಮೂರು ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.ವಿಕ್ರಾಂತ್ ರೋಣ ಚಿತ್ರ ಕನ್ನಡದ ಬಹುಕೋಟಿ ಮತ್ತು ಅತ್ಯಾಧುನಿಕ ತಂತ್ರಜ್ಞನರನ್ನ ಬಳಸಿಕೊಂಡು ತಯಾರಾಗಿರುವ ಪ್ಯಾನ್ ಇಂಡಿಯಾ ಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿದೆ.ವಿಕ್ರಾಂತ್ ರೋಣನಿಗೆ ಜೋಡಿಯಾಗಿ ನಟಿ ನೀತಾ ಅಶೋಕ್ ನಟಿಸಿದ್ದಾರೆ.ಜೊತೆಗೆ ನಿರೂಪ್ ಭಂಡಾರಿ,ಶ್ರದ್ದಾ ಶ್ರೀನಾಥ್,ರವಿ ಶಂಕರ್ ಗೌಡ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದು,ಈಗಾಗಲೇ ಚಿತ್ರದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಪ್ರೇಕ್ಷಕರಿಗೆ ಸಖತ್ ಮೋಡಿ ಮಾಡಿದೆ.

ಇನ್ನು ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿರುವ ಈ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಶ್ರೀಲಂಕನ್ ಬೆಡಿಗಿ ನಟಿ ಜಾಕ್ವೇಲಿನ್ ಫರ್ನಾಂಡಿಸ್ ಅವರು ಬಯೋಬ್ಬರಿ ಮೂರು ಕೋಟಿ ಸಂಭಾವನೆ ಪಡೆದಿದ್ದಾರೆ.ಜೊತೆಗೆ ಜಾಕ್ವೇಲಿನ್ ಕೇವಲ ಹಾಡಿನಲ್ಲಿ ಮಾತ್ರ ಕಾಣಿಸಿಕೊಂಡಿಲ್ಲ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ ಎಂಬುದಕ್ಕೆ ಕಳೆದ ಎರಡು ತಿಂಗಳ ಹಿಂದೆ ಬಿಡುಗಡೆಯಾದ ಪೋಸ್ಟರ್ ಸಾಕ್ಷಿಯಾಗಿದೆ.ನಟಿ ಜಾಕ್ವೇಲಿನ್ ಫರ್ನಾಂಡಿಸ್ ಅವರ ಜನ್ಮದಿನದಂದು ರಿಲೀಸ್ ಆದ ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್ ದೇಶಾದ್ಯಂತ ಭಾರಿ ಸೌಂಡ್ ಮಾಡಿತ್ತು.ಬರೋಬ್ಬರಿ 120 ಕೋಟಿ ಬಜೆಟ್ ಹೊಂದಿರುವ ವಿಕ್ರಾಂತ್ ರೋಣ ಸಿನಿಮಾದ ರಿಲೀಸ್ ಡೇಟ್ ಅನ್ನು ಇನ್ನು ಕೆಲವೇ ದಿನಗಳಲ್ಲಿ ಚಿತ್ರತಂಡ ಅನೌನ್ಸ್ ಮಾಡಲಿದೆ ಎಂದು ತಿಳಿದು ಬಂದಿದೆ.

Leave a Reply

%d bloggers like this: