ಒಂದು ವರ್ಷದ ನಂತರ ಧಿಡೀರನೇ ಪ್ರತ್ಯಕ್ಷವಾಗಿ ಸಿಹಿ ಸುದ್ದಿ ಕೊಟ್ಟ ಡ್ರೋನ್ ಪ್ರತಾಪ

ಹೆಮ್ಮೆಯ ಕನ್ನಡಿಗ,ಭಾರತದ ಹೆಮ್ಮೆಯ ಯುವ ವಿಜ್ಞಾನಿ,ಮಂಡ್ಯದ ಗಂಡು,ಡ್ರೋನಾಚಾರ್ಯ ಹೀಗೆಲ್ಲ ಫೇಮಸ್ ಆಗಿದ್ದ ಡ್ರೋನ್ ಪ್ರತಾಪನ‌ ಅಸಲಿ ಮುಖ ಬಯಲಾಗಿತ್ತು.ಅನೇಕ ಮಠಗಳು ಅವನಿಗೆ ಹಣ ನೀಡಿದ್ದವು.ಚಿತ್ರ ನಿರ್ದೇಶಕರೊಬ್ಬರು ಸಹ ಅವನಿಗೆ ಹಣಸಹಾಯ ಮಾಡಿದ್ದರು.ಇದಕ್ಕೆ ಕಾರಣ ಏನಂದರೆ ಯುವ ಜನರಿಗೆ ಸ್ಪೂರ್ತಿಯಾಗಲಿ ಎಂದು ಆತನ ಕತೆಯನ್ನು ಸಿನಿಮಾ ಮಾಡಲು ಹೋಗಿದ್ದರು.ಆ ನಿರ್ದೇಶಕರಿಂದ ಆತ 1 ಲಕ್ಷ ಮುಂಗಡ ಹಣವನ್ನು ಪಡೆದಿದ್ದ.ಕಥೆಯ ಬಹುತೇಕ ಭಾಗ ಮುಗಿದಿತ್ತಂತೆ ಅದರಲ್ಲಿ ಡ್ರೋನ್ ಪ್ರತಾಪನೇ ನಟಿಸಲು ಮುಂದಾಗಿದ್ದನಂತೆ ಹೆಸರಾಂತ ನಟಿ ನಟಿಯರನ್ನು ಕೂಡ ಆಯ್ಕೆ ಮಾಡಿಕೊಂಡಿದ್ದನಂತೆ.

ಒಂದು ವಾಹಿನಿಯಲ್ಲಿ ಮೊದಲ ಬಾರಿಗೆ ಪರಿಚಯ ಮಾಡಿದ್ದು ಜಗ್ಗೇಶ್ ಅವರು.ಆರ್ಥಿಕವಾಗಿಯೂ ಪ್ರತಾಪ್‌ಗೆ ಸಹಾಯ ಮಾಡಿದ್ದ ಜಗ್ಗೇಶ್ ಅವರು ಸಂಪೂರ್ಣವಾಗಿ ಅವನ ಮಾತಿಗೆ ಮರುಳಾಗಿದ್ದರಂತೆ.ಮಾಜಿ ಮುಖ್ಯಮಂತ್ರಿ ಆದ ಸದಾನಂದಗೌಡರಿಗೂ ಪ್ರತಾಪನ ಪರಿಚಯ ಮಾಡಿಸಿ ಅವರಿಂದಲೂ ಸಹಾಯ ಸಿಗುವಂತೆ ಮಾಡಿದ್ದರು.ವಿಚಾರವೆಲ್ಲ ತಿಳಿದು ನೊಂದ ಜಗ್ಗೇಶ್ ಅವರ ಇನ್ಮುಂದೆ ಯಾರಿಗೂ ಸಹಾಯ ಮಾಡಬಾರದು ಅನ್ನಿಸಿಬಿಟ್ಟಿದೆ.ಸಾಮಾಜಿಕ ಜಾಲತಾಣದಲ್ಲಿ ಕೆಲವರು ಇವನನ್ನು ಬೆಂಬಲಿಸಿದರೆ ಹಲವರು ಇವನನ್ನು ಟ್ರೊಲ್ ಪೀಸ್ ಮಾಡಿದರು.

ಎಪ್ಪತ್ತೆರೆಡು ಲಕ್ಷ ಫಾಲೋವರ‌್ಸ್ ಹೊಂದಿದ್ದವನು ೩೨ ಸಾವಿರಕ್ಕೆ ಇಳಿಯಿತು.ಕಳೆದ ವರ್ಷ ಸ್ಪಷ್ಟನೆ ನೀಡುವ ಸಲುವಾಗಿ ಕಾಣಿಸಿಕೊಂಡಿದ್ದು ಬಿಟ್ಟರೆ ಮತ್ತೆಲ್ಲೂ ಆತ ಕಾಣಿಸಿಕೊಂಡಿರಲಿಲ್ಲ.ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ನೂತನ‌ ಫೋಟೋ ಹಾಕಿದ್ದಾನೆ.ಲಂಡನ್ ವಿಮಾನ ನಿಲ್ದಾಣದಲ್ಲಿ ಇದ್ದೇನೆ ಇದು ನನ್ನ ಹೊಸ ಹಣೆಬರಹ ಅನ್ನುವ ಕ್ಯಾಪ್ಶನ್ ಹಾಕಿದ್ದಾನೆ.ಇದು ನಿಜವೋ ಅಥವಾ ಬಿಲ್ಡಪ್ ಗಾಗಿ ಹಳೇ ಫೋಟೋ ಹಾಕಿ ಯಾಮಾರಿಸುತ್ತಿದ್ದಾನೋ ಅವನೇ ಬಲ್ಲ.ಇವನ ಹಣೆಬರಹವೇ ಇಷ್ಟು ಅಂತ ಮತ್ತೆ ಆತ ಟ್ರೋಲ್ ಆಗುತ್ತಿರೋದು ವಾಸ್ತವ‌.

Leave a Reply

%d bloggers like this: