ಒಂದು ಕಾಲದಲ್ಲಿ ಮಿಂಚಿದ ನಟಿ ಪ್ರೇಮ ಈಗ ಯಾವ ಸ್ಥಿತಿಯಲ್ಲಿದ್ದಾರೆ ನೋಡಿ

ಕನ್ನಡ ಚಲನಚಿತ್ರರಂಗದ ಖ್ಯಾತ ನಟಿ ಪ್ರೇಮ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಕನ್ನಡ ಚಿತ್ರರಂಗ ಸೇರಿದಂತೆ ತೆಲುಗಿನಲ್ಲೂ ದಾಖಲೆ ನಿರ್ಮಿಸಿದ ನಟಿ ಪ್ರೇಮ.ಕನ್ನಡ ಚಿತ್ರರಂಗದ ದಿಗ್ಗಜ ನಟಿ.ಕನ್ನಡ ಚಿತ್ರರಂಗದ ಚಂದ್ರಮುಖಿಯಾಗಿ ಅಭಿಮಾನಿಗಳ ಪ್ರಾಣಸಖಿಯಾಗಿ ಮೆರೆದವರು.ಪ್ರೇಮ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ‌.ಪ್ರೇಮ ಕನ್ನಡದಲ್ಲೇ ಬರೋಬ್ಬರಿ ಐವತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದವರು.ಅದಿರಲಿ ಪ್ರೇಮ ಅವರ ವೈಯಕ್ತಿಕ ಜೀವನ ಹೇಗಿದೆ ನೋಡೋಣ. ಪ್ರೇಮ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಿದಾಗ ತಮಗೆ ಮದುವೆಯೇ ಆಗಿಲ್ಲ ಎಂಬಂತೆ ಹೇಳಿದರು.ಅದಕ್ಕೆ ಕಾರಣವಿದೆ.

ಪ್ರೇಮ ಅವರು 2006ರಲ್ಲಿ ವಿವಾಹ ಆಗಿದ್ದು ನಿಜ.ಕೊಡಗಿನ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಜೀವನ್ ಅಪ್ಪಚ್ಚು ಅನ್ನುವವರನ್ನು ವರಿಸಿದರು ಪ್ರೇಮ.ನಂತರ ಏನಾಯಿತು ಅನ್ನೋದು ವಿಷಯ.ಆತ ಸಾಫ್ಟ್ ವೇರ್ ಇಂಜಿನಿಯರ್ ಆಗಿರಲಿಲ್ಲ.ಪ್ರೇಮ ಅವರನ್ನು ಅಭಿನಯದಲ್ಲಿ ಮುಂದುವರೆಸಿ ಅವರ ದುಡ್ಡಲ್ಲಿ ಮಜ ಮಾಡುವ ಉಂಡಾಡಿ ಗುಂಡ ಆಗಿದ್ದರಂತೆ ಜೀವನ್.ಇದು ಮದುವೆ ಆದ ಕೆಲವೇ ಸಮಯದಲ್ಲಿ ಪ್ರೇಮ ಅವರ ಕುಟುಂಬದವರಿಗೆ ಅರ್ಥವಾಯಿತು.ಇದರಿಂದ ಪ್ರೇಮ ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನ್ ಅವರಿಂದ ದೂರ ಆದರು.

ಪ್ರೇಮ ಅವರಿಗೆ ಮಗಳಿರುವ ಬಗ್ಗೆ ಸುದ್ದಿ ಹರಡಿತ್ತು. ಅದು ಸುಳ್ಳು ನನಗೆ ಮಕ್ಕಳಿಲ್ಲ ಅಂತ ಸ್ಪಷ್ಟನೆ ನೀಡಿದರು ಪ್ರೇಮ.ವೈವಾಹಿಕ ಜೀವನದಲ್ಲಿ ಪ್ರೇಮ ಬಹಳ ನೊಂದವರು.ಹೀಗಾಗಿ ಅವಿವಾಹಿತರಾಗಿ ಕುಟುಂಬದ ಜೊತೆಗೆ ಉಳಿದರು.ಪ್ರೇಮ ಅವರ ಮುಂದಿನ ಜೀವನಕ್ಕೆ ಶುಭವಾಗಲಿ ಎಂದು ಹಾರೈಸೋಣ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: