ಒಂದು ಕಾರ್ಯಕ್ರಮವನ್ನು ನಡಿಸಿಕೊಡಲು ಅನುಶ್ರೀ ಪಡೆಯುವ ಸಂಬಾವನೆ ಎಷ್ಟು ಗೊತ್ತಾ? ನೋಡಿ ಒಮ್ಮೆ

ಅನುಶ್ರೀ ಸಿನಿಮಾಗಳಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಕ್ಕಿಂತ ಹೆಚ್ಚಾಗಿ ಕಾರ್ಯಕ್ರಮಗಳ ನಿರೂಪಕಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಸದ್ಯ ಇವರು ಕನ್ನಡದ ಬೇಡಿಕೆಯ ನಿರೂಪಕಿಯಾಗಿದ್ದಾರೆ. ಅನುಶ್ರೀ ಅವರು ಬಾರಿ ಬೇಡಿಕೆಯ ನಿರೂಪಕಿಯಾಗಿಯಾಗಿದ್ದಾರೆ. ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕುಣಿಯೋಣು ಬಾರಾ, ಕಾಮಿಡಿ ಕಿಲಾಡಿಗಳು ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಈ ಅನುಶ್ರೀ ಮಾತನಾಡಲು ಆರಂಭಿಸಿದರೆ ಅವರನ್ನು ನೋಡುವುದಾ, ಅವರ ಮಾತು ಕೇಳುವುದಾ ಕನ್‌ಫ್ಯೂಸ್ ಆಗುತ್ತದೆ. ಸೌಂದರ್ಯ, ಅದಕ್ಕೆ ತಕ್ಕಂತೆ ಉಡುಗೆ, ಮ್ಯನರಿಸಂ, ಕನ್ನಡದ ಮೇಲಿನ ಹಿಡಿತ ಎಲ್ಲವೂ ಅನುಶ್ರೀಯವರನ್ನು ಪರ್ಫೆಕ್ಟ್ ಆಗಿಸಿವೆ.

ಅನುಶ್ರೀ ಆ್ಯಂಕರ್ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿರುವ ಅನುಶ್ರೀ ಇದರಲ್ಲಿ ಸಿನಿಮಾ ತಾರೆಯರ ಸಂದರ್ಶನ ಮಾಡುತ್ತಾರೆ. ಕನ್ನಡ ವರದಿಗಳ ಪ್ರಕಾರ, ಅನುಶ್ರೀ ಸರಿಗಮಪ ಕಾರ್ಯಕ್ರಮದ ನಿರೂಪಣೆಗೆ 60,000 ರಿಂದ 70,000 ರೂಪಾಯಿಗಳವರೆಗೆ ಸಂಭಾವನೆ ಪಡೆಯುತ್ತಾರೆ. ಸದ್ಯ ಮಾಹಿತಿಯ ಪ್ರಕಾರ ಅನುಶ್ರೀ ಅವರು ಒಂದು ಎಪಿಸೋಡ್ಗೆ ಒಂದು ಲಕ್ಷದ 20ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.

ತಮ್ಮ ಹೋರಾಟದ ಅವಧಿಯನ್ನು ಹಂಚಿಕೊಂಡ ಅನುಶ್ರೀ, ‘ಆಗ ನನಗೆ ಪ್ರತಿ ಸಂಚಿಕೆಗೆ ₹ 250 ಸಂಭಾವನೆ ನೀಡುವುದಾಗಿ ಹೇಳಲಾಗಿತ್ತು. ಈಗ ನಾನು ಲಕ್ಷಗಟ್ಟಲೆ ದುಡಿಯಿತ್ತಿದ್ದೇನೆ. ಇದು ನನ್ನ ಹೋರಾಟದ ಯಶಸ್ಸಿನ ಪರಿಶ್ರಮ ಎಂದಿದ್ದಾರೆ.