ಒಂದೂವರೆ ವರ್ಷದಿಂದ ಯಾರಿಗೂ ಆಗದ ಕೆಜಿಎಫ್ ಚಾಪ್ಟರ್2 ದಾಖಲೆಯನ್ನು ಒಂದೇ ದಿನದಲ್ಲಿ ಮುರಿದು ಹಾಕಿದ ಭಾರತದ ಬಿಗ್ ಬಜೆಟ್ ಚಿತ್ರ

ಟೀಕೆ ಟ್ರೋಲ್ ಗಳ ನಡುವೆಯೂ ಕೂಡ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದ ಟೀಸರ್ ಕೋಟಿ ಕೋಟಿ ವೀಕ್ಷಣೆ ಪಡೆದು ಕೆಜಿಎಫ್2 ದಾಖಲೆಯನ್ನ ಕೂಡ ಸೈಡ್ ಲೈನ್ ಮಾಡಿದೆ. ಹೌದು ಭಾರತೀಯ ಸಿನಿಮಾ ರಂಗದ ಬಹು ನಿರೀಕ್ಷಿತ ಪೌರಾಣಿಕ ಸಿನಿಮಾ ಅಂದರೆ ಅದು ಪ್ಯಾನ್ ಇಂಡಿಯಾ ಆದಿಪುರುಷ್ ಸಿನಿಮಾ. ಆದಿಪುರುಷ್ ಸಿನಿಮಾದ ಪೋಸ್ಟರ್ ಬಿಡುಗಡೆಯಾದಾಗ ಪ್ರಭಾಸ್ ಅವರ ಲುಕ್ ಕಂಡು ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ರು. ಬಿಲ್ಲು ಬಾಣ ಹಿಡಿದು ರಾಮನ ಪಾತ್ರದಲ್ಲಿ ಪ್ರಭಾಸ್ ಸಖತ್ತಾಗಿಯೇ ಮಿಂಚಿದ್ದರು. ಹಾಗಾಗಿ ಆದಿಪುರುಷ್ ಸಿನಿಮಾದ ನಿರೀಕ್ಷೆ ಮತ್ತಷ್ಟು ಹೆಚ್ಚಾಯಿತು. ಅದೇ ರೀತಿ ಮೊನ್ನೆ ಅಕ್ಟೋಬರ್ 2ರಂದು ಸಂಜೆ 7.11ಕ್ಕೆ ಆದಿಪುರುಷ್ ಸಿನಿಮಾದ ಟೀಸರ್ ಲಾಂಚ್ ಆಗಿದೆ. ಟೀಸರ್ ನಲ್ಲಿ ಗ್ರಾಫಿಕ್ಸ್ ಬಗ್ಗೆ ಭಾರಿ ಅಸಮಾಧಾನ ವ್ಯಕ್ತವಾಗಿದ್ದು, ಪ್ರಭಾಸ್ ಅಭಿಮಾನಿಗಳು ನಿರ್ದೇಶಕ ಓಂ ರಾವುತ್ ಅವರ ಮೇಲೆ ಬೇಜಾರಾಗಿದ್ದಾರೆ.

ಯಾಕಂದ್ರೆ ಟೀಸರ್ ನಲ್ಲಿ ಸಿನಿಮಾದ ಮೇಕಿಂಗ್ ಗ್ರಾಫಿಕ್ಸ್ ತೀರ ಕಳಪೆ ಮಟ್ಟದಲ್ಲಿದೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಆದಿಪುರುಷ್ ಸಿನಿಮಾದ ಟೀಸರ್ ಬಗ್ಗೆ ಸಖತ್ ಟ್ರೋಲ್ ಮಾಡಲಾಗುತ್ತಿದೆ. ಇದೆಲ್ಲದರ ನಡುವೆಯೂ ಕೂಡ ಆದಿಪುರುಷ್ ಚಿತ್ರದ ಟೀಸರ್ ಬಿಡುಗಡೆಯಾದ ಕೇವಲ 17 ಗಂಟೆಗಳಲ್ಲಿ ಬರೋಬ್ಬರಿ 88 ಮಿಲಿಯನ್ ದಾಖಲೆ ವೀಕ್ಷಣೆ ಪಡೆದುಕೊಂಡಿದೆ. ಇನ್ನು 24 ಗಂಟೆಯೊಳಗೆ ನೂರು ಮಿಲಿಯನ್ ವೀಕ್ಷಣೆ ಪಡೆದು ಕೆಜಿಎಫ್2 ದಾಖಲೆಯನ್ನ ಆದಿಪುರುಷ್ ಸಿನಿಮಾ ಉಡೀಸ್ ಮಾಡಲಿದೆ ಎಂದು ಹೇಳುತ್ತಿದ್ದಾರೆ. ಕೇವಲ ವೀಕ್ಷಣೆ ಮಾತ್ರ ಅಲ್ಲದೆ ಲೈಕ್ ಪಡೆದುಕೊಳ್ಳೋದ್ರಲ್ಲಿಯೂ ಕೂಡ ಆದಿಪುರುಷ್ ಸಿನಿಮಾದ ಟೀಸರ್ ಭಾರತೀಯ ಚಿತ್ರರಂಗದಲ್ಲಿ ಯಾವ ಚಿತ್ರ ಕೂಡ ಮಾಡದ ದಾಖಲೆ ಮಾಡಿದೆಯಂತೆ‌.

ಹಿಂದಿ ಟೀಸರ್ ನಲ್ಲಿ 75 ಮಿಲಿಯನ್ ವೀವ್ಸ್ ಪಡೆದಿದ್ದು, ಈ ಮಿಲಯಿನ್ಸ್ ಕ್ಕಿಂತಲೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆಯಂತೆ. ಆದಿಪುರುಷ್ ಟೀಸರ್ ಕೇವಲ 15 ಗಂಟೆಯಲ್ಲಿ ಐವತ್ತು ಮಿಲಿಯನ್ ವೀವ್ಸ್ ಪಡೆಯುವ ಮೂಲಕ ಕೆಜಿಎಫ್2 ದಾಖಲೆಯನ್ನ ಪ್ರಭಾಸ್ ಅವರ ಆದಿಪುರುಷ್ ಟೀಸರ್ ಸೈಡ್ ಲೈನ್ ಮಾಡಿದೆ. ಒಟ್ಟಾರೆಯಾಗಿ ಅದಿಪುರುಷ್ ಟೀಸರ್ ಟೀಕೆ ಟ್ರೋಲ್ ಗಳ ನಡುವೆಯೂ ಕೂಡ ದಾಖಲೆಯ ಮಟ್ಟದಲ್ಲಿ ವೀಕ್ಷಣೆ ಪಡೆದಿದೆ. ಇನ್ನು ಆದಿಪುರುಷ್ ಪೌರಾಣಿಕ ಸಿನಿಮಾ ಎಲ್ಲವೂ ಅಂದುಕೊಂಡಂತೆ ಆದ್ರೆ ಮುಂದಿನ ವರ್ಷ ಸಂಕ್ರಾಂತಿ ಹಬ್ಬದ ಸಮಯ ಜನವರಿ 12ಕ್ಕೆ ಪಂಚ ಭಾಷೆಗಳಲ್ಲಿ ವರ್ಲ್ಢ್ ವೈಡ್ ಆದಿಪುರುಷ್ ಸಿನಿಮಾ ಥಿಯೇಟರ್ ಗಳಲ್ಲಿ ಆರ್ಭಟಿಸಲಿದ್ದಾನೆ ಎಂದು ಚಿತ್ರತಂಡ ತಿಳಿಸಿದೆ.

Leave a Reply

%d bloggers like this: