ಒಂದು ಸಲ ಚಾರ್ಜ್ ಮಾಡಿದ್ರೆ ಬರೋಬ್ಬರಿ 521 ಕಿಲೋಮೀಟರ್ ಮೈಲೇಜ್, ಬೆಲೆ ಕೂಡಾ ಕಡಿಮೆ

ಇತ್ತೀಚೆಗೆ ಭಾರತ ದೇಶದಲ್ಲಿ ಹೊಸದೊಂದು ಅಲೆ ಶುರುವಾಗಿದೆ ಅಂದರೆ ತಪ್ಪಾಗಲಾರದು. ಆ ಅಲೆ ಬೇರೇನು ಅಲ್ಲ. ಅದೇ ಎಲೆಕ್ಟ್ರಿಕ್ ವಾಹನಗಳ ಭರ್ಜರಿ ವ್ಯಾಪಾರ ವಹಿವಾಟು. ಇದೊಂದು ರೀತಿಯಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸದೊಂದು ಕ್ರಾಂತಿ ಅಂತೇಳಿದ್ರೆ ಅತಿಶಯೋಕ್ತಿ ಅಲ್ಲ. ಕೇಂದ್ರ ಸರ್ಕಾರ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡಬೇಕು. ವಾಯು ಮಾಲಿನ್ಯ ತಡೆಗಟ್ಟಬೇಕು ಎಂಬ ಸದುದ್ದೇಶದಿಂದ ಈ ಎಲೆಕ್ಟ್ರಿಕ್ ವಾಹನಗಳನ್ನ ಖರೀದಿ ಮಾಡಿದ್ರೆ ಸಹಾಯಧನ ನೀಡುವುದಕ್ಕೆ ಮುಂದಾಯಿತು.

ಅದೇ ರೀತಿಯಾಗಿ ಭಾರತೀಯ ಆಟೋ ಮೊಬೈಲ್ ಕ್ಷೇತ್ರದಲ್ಲಿ ದಿನ ಕಳೆದಂತೆ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಕೂಡ ಹೆಚ್ಚಾಯಿತು. ವಾಹನ ಸವಾರರು ಇಂಧನ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು ನೀಡಲು ಆರಂಭಿಸಿದ್ದಾರೆ. ಇಂದು ಎಲೆಕ್ಟ್ರಿಕ್ ವಾಹನಗಳು ಎಲ್ಲಾ ಕಡೆ ಅಪಾರ ಜನಪ್ರಿಯತೆ ಪಡೆದು ಎಲೆಕ್ಟ್ರಿಕ್ ಸ್ಟೂಟರ್ ಮತ್ತು ಕಾರುಗಳನ್ನ ಬೇಡಿಕೆ ಪೂರೈಕೆಗಳನುಸಾರ ವಾರ್ಷಿಕವಾಗಿ ಕೋಟ್ಯಾಂತರ ಆದಾಯ ಗಳಿಸುತ್ತಿವೆ.

ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಗಗಕ್ಕೇರುತ್ತಿರುವ ಕಾರಣ ಗ್ರಾಹಕರು ಕೂಡ ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡಿದ್ದಾರೆ. ಅದ್ರಂತೆ ಇಂದು ನಮ್ಮ ಭಾರತ ದೇಶಕ್ಕೆ ಸ್ವದೇಶಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಕಂಪನಿಗಳ ಜೊತೆಗೆ ವಿದೇಶಿ ಕಂಪನಿಗಳು ಕೂಡ ಲಗ್ಗೆ ಇಟ್ಟಿವೆ. ಹೊರ ದೇಶದ ಚೀನಾ ದೇಶ ತಮ್ಮ ಕಂಪನಿಯ ವಿವಿಧ ಎಲೆಕ್ಟ್ರಿಕ್ ವಾಹನಗಳ ಮಾರಾಟ ಮಾಡುವುದಕ್ಕೆ ಭಾರತ ದೇಶ ಸೂಕ್ತವಾದ ಮಾರುಕಟ್ಟೆಯನ್ನ ಹೊಂದಿದೆ ಅಂತ ಹೊಸ ಹೊಸ ವಿಧದ ಎಲೆಕ್ಟ್ರಿಕ್ ಕಾರುಗಳನ್ನ ಪರಿಚಯಿಸಿದೆ.

ಅವುಗಳಲ್ಲಿ ಕಳೆದ ವರ್ಷ ಪರಿಚಯಿಸಿದ ಬಿವೈಡಿ ಆಟ್ಟೋ3 ಎಲೆಕ್ಟ್ರಿಕ್ ಕಾರು ಭಾರಿ ಬೇಡಿಕೆಯನ್ನ ಪಡೆದುಕೊಂಡಿದೆ. ಈ ಬಿವೈ ಡಿ ಆಟ್ಟೋ3 ಎಲೆಕ್ಟ್ರಿಕ್ ಕಾರು ಭಾರಿ ಬೇಡಿಕೆ ಸೃಷ್ಟಿಸಿಕೊಳ್ಳಲು ಪ್ರಮುಖ ಕಾರಣ ಅಂದರೆ ಈ ಕಾರು 60 kwh ಬಿವೈಡಿ ಬ್ಲೇಡ್ ಬ್ಯಾಟರಿಯನ್ನ ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ ಪ್ರಮಾಣಿಕರಿಸಿದ ಪ್ರಕಾರ 521 ಕಿಮೀ ರೇಂಜ್ ಅನ್ನ ನೀಡುತ್ತದೆ. ಎಸ್ಯೂವಿ 201 ಬಿಎಚ್ಪಿ ಪವರ್ ಅಂಡ್ 310 ಎನ್ಎಮ್ ಟಾರ್ಕ್ ಅನ್ನ ಉತ್ಪಾದನೆ ಮಾಡುತ್ತದೆ. ಈ ಎಲೆಕ್ಟ್ರಿಕ್ ಕಾರು ಕೇವಲ 7.3 ಸೆಕೆಂಡ್ ನಲ್ಲಿ 0ಯಿಂದ 100 ಕಿಮೀ ವೇಗವನ್ನ ಪಡೆದುಕೊಳ್ಳುತ್ತದೆ.

ಇದರ ಜೊತೆಗೆ ಅಡ್ವಾನ್ಸ್ಡ್ ಫೀಚರ್ಸ್ ಗಳನ್ನ ನೋಡೋದಾದ್ರೆ ಬಿವೈಡಿ ಆಟ್ಟೋ3 ಎಲೆಕ್ಟ್ರಿಕ್ ಎಸ್ಯೂವಿಯ ಬೌಲ್ಡರ್ ಗ್ರೇ, ಪಾರ್ಕರ್ ರೆಡ್ , ಸ್ಕೀ ವೈಟ್ ಅಂಡ್ ಸರ್ಫ್ ಬ್ಲೂ ಬಣ್ಣಗಳಲ್ಲಿ ಈ ಕಾರುಗಳು ಲಭ್ಯ ಇರುತ್ತದೆ. ಹೀಗಾಗಿ ಚೀನಾ ಮೂಲದ ಈ ಬಿವೈಡಿ ಎಲೆಕ್ಟ್ರಿಕ್ ಕಾರು ಕೊಳ್ಳಲು ಕಾರು ಪ್ರಿಯರು ಮುಗಿ ಬೀಳುತ್ತಿದ್ದಾರೆ. ಈ ಕಾರಿನ ಬೆಲೆ ಭಾರತದಲ್ಲಿ ಎಕ್ಸ್ ಶೋರೂಂ ಪ್ರಕಾರ 33.99 ಲಕ್ಷಗಳನ್ನ ಹೊಂದಿದೆ. ಈ ವರ್ಷದ ಆರಂಭ ಅಂದರೆ ಜನವರಿ ತಿಂಗಳಿನಲ್ಲಿ ಎರಡು ಸಾವಿರ ಅಡ್ವಾನ್ಸ್ ಬುಕ್ಕಿಂಗ್ ಪಡೆದುಕೊಂಡಿದ್ದು, 340 ಯುನಿಟ್ ಗಳನ್ನ ಎಸ್ಯೂವಿ ಆಟ್ಟೋ ಎಲೆಕ್ಟ್ರಿಕ್ ಕಾರುಗಳನ್ನ ಗ್ರಾಹಕರ ಬೇಡಿಕೆಗನುಗುಣವಾಗಿ ವಿತರಿಸಿದೆಯಂತೆ.

Leave a Reply

%d bloggers like this: