ಒಂದು ಸಲ ಚಾರ್ಜ್ ಮಾಡಿದರೆ ಈ ಕಾರು 857 ಕಿಲೋಮೀಟರ್ ಕ್ರಮಿಸುತ್ತದೆ, ಆದರೆ ಬೆಲೆ ಮಾತ್ರ ಬಹಳ ದುಬಾರಿ

ಈ ಕಾರ್ ವಿಶೇಷತೆಗಳನ್ನ ತಿಳಿದು ಕಾರು ಪ್ರಿಯರು ಖರೀದಿ ಮಾಡಲು ಮುಗಿ ಬೀಳುತ್ತಿದ್ದಾರೆ. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಗಳಿಗೆ ಭಾರಿ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಇದಕ್ಕೆ ಕಾರಣ ಏನು ಅನ್ನೋದನ್ನ ನೋಡೋದಾದ್ರೆ ಒಂದು ವಾಯು ಮಾಲಿನ್ಯ ತಡೆಗಟ್ಟಿ ಪರಿಸರ ಸಂರಕ್ಷಣೆ ಮಾಡುವ ಉದ್ದೇಶ. ಇನ್ನೊಂದು ಅಂದರೆ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಗಗನಕ್ಕೇರುತ್ತಿರೋ ಕಾರಣ ಇಂಧನ ಸಹಿತ ವಾಹನಗಳನ್ನ ನಿರ್ವಹಣೆ ಮಾಡುವುದಕ್ಕೆ ಅಧಿಕ ವೆಚ್ಚವಾಗುತ್ತಿದೆ. ಹಾಗಾಗಿ ಕಾರು ಪ್ರಿಯರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಹಾಗಾಗಿ ಗ್ರಾಹಕರ ಅಭಿರುಚಿಯಂತೆ ಕಾರು, ಸ್ಕೂಟರ್ ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿವೆ.

ಅದರಂತೆ ಇದೀಗ ಪ್ರಸಿದ್ದ ಕಾರು ತಯಾರಕ ಸಂಸ್ಥೆ ಆಗಿರೋ ಮರ್ಸಿಡಿಸ್ ಬೆಂಝ್ ಕಾರು ತಯಾರಕ ಸಂಸ್ಥೆ ಕೂಡ ಬೆಂಝ್ ಇಕ್ಯೂಎಸ್ 580 ಎಂಬ ಹೊಸ ಎಲೆಕ್ಟ್ರಿಕ್ ಕಾರನ್ನ ಭಾರತದಲ್ಲಿ ಲಾಂಚ್ ಮಾಡಿದೆ. ಈ ಕಾರು ಆಕರ್ಷಕ ವಿನ್ಯಾಸವನ್ನೊಂದಿದ್ದು, ಆಧುನಿಕ ಫೀಚರ್ಸ್ ಗಳನ್ನ ಹೊಂದಿದೆ. ಈ ಇಕ್ಯೂಎಸ್ ಎಲೆಕ್ಟ್ರಿಕ್ ಕಾರು ಲಿಫ್ಟ್ ಬ್ಯಾಕ್ ಸ್ಟೈಲ್ ನ ಸೆಡಾನ್ ಆಗಿದೆ. ಈ ಕಾರಿನಲ್ಲಿ ಮುಂಭಾಗದಲ್ಲಿ ಸ್ಪೋರ್ಟ್ಸ್ ಕೋನೀಯ ಹೆಡ್ ಲೈಟ್ ಗಳನ್ನ ಅಳವಡಿಕೆ ಮಾಡಲಾಗಿದೆ. ಹಾಗೇ ಈ ಕಾರ್ ಡೋರ್ ಗಳು ಪಿರೆಲ್ಲಿ ರಬ್ಬರ್ ನೊಂದಿಗೆ ಏರೋಡೈನಾಮಿಕ್ 20 ಇಂಚಿನ ಅಲಾಯ್ ವ್ಹೀಲ್ ಗಳನ್ನ ಹೊಂದಿದೆ. ಕಾರಿನಲ್ಲಿ ಒಳ ವಿನ್ಯಾಸದ ಬಗ್ಗೆ ತಿಳಿಯೋದಾದ್ರೆ 56 ಇಂಚಿನ ಹೈಪರ್ ಸ್ಕ್ರೀನ್ ಡಿಸ್ ಪ್ಲೇಯನ್ನೊಂದಿದೆ. 12.3 ಇಂಚಿನ ಡಿಸ್ಲೇ ಅಂಡ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನ ಹೊಂದಿದೆ. ಈ ಇನ್ಫೋಟೈನ್ ಮೆಂಟ್ ಸಿಸ್ಟಮ್ ಗೆ ಆಂಡ್ರಾಯ್ಡ್ ಅಥವಾ ಆಪಲ್ ಕಾರ ಪ್ಲೇ ಗಳ ಮೂಲಕ ಫೋನ್ ಕನೆಕ್ಟ್ ಮಾಡ್ಬೋದಾಗಿದೆ. ಈ ಕಾರು ಒಂದು ಸಲ ಚಾರ್ಜ್ ಮಾಡಿದರೆ 857 ಕಿಲೋಮೀಟರ್ ಕ್ರಮಿಸುತ್ತದೆ.

ಇನ್ನು ಸೀಟುಗಳ ವಿಚಾರವಾಗಿ ಇವುಗಳ ಹೆಚ್ಚು ಆಕರ್ಷಕವಾಗಿದ್ದು, ಹಿಂಬದಿ ಮೂವರು ಆರಾಮಾದಾಯಕವಾಗಿ ಕುಳಿತುಕೊಳ್ಳಬಹುದಾಗಿದೆ. ಸುರಕ್ಷತೆಯ ನಿಟ್ಟಿನಲ್ಲಿ ಈ ಇಕ್ಯೂಎಸ್ ಎಲೆಕ್ಟ್ರಿಕ್ ಕಾರಿನಲ್ಲಿ ಒಂಭತ್ತು ಏರ್ ಬ್ಯಾಗ್ ಗಳಿವೆ. ಪವರ್8 ಕೋರ್ ಪ್ರೊಸೆಸರ್ ಅಂಡ್ 24 ಜಿಬಿ ರ್ಯಾಮ್ ಹೊಂದಿದೆ. ಇನ್ನು ಈ ಕಾರಿನ ಬ್ಯಾಟರಿ ಸಾಮರ್ಥ್ಯವನ್ನ ನೋಡೋದಾದ್ರೆ 516 ಬಿ.ಎಚ್.ಪಿ ಪವರ್ ಅಂಡ್ 855 ಎನ್ಎಮ್ ಟಾರ್ಕ್ ಅನ್ನ ಉತ್ಪಾದನೆ ಮಾಡಲಿದ್ದು, 107.8 kwh ಬ್ಯಾಟರಿ ಪ್ಯಾಕ್ ಅನ್ನ ಹೊಂದಿದೆ. ಅರ್ಧಗಂಟೆಯಲ್ಲಿ ಶೇಕಡ ಎಂಭತ್ತರಷ್ಟು ಚಾರ್ಜಿಂಗ್ ತೆಗೆದುಕೊಳ್ಳಲಿದೆಯಂತೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರಿನ ಬೆಲೆ ಒಂದೂವರೆ ಕೋಟಿ ಇಂದ ಎರಡೂವರೆ ಕೋಟಿವರೆಗೆ ಇದೆ ಎಂದು ಹೇಳಲಾಗ್ತಿದೆ. ಒಟ್ಟಾರೆಯಾಗಿ ಹೇಳೋದಾದ್ರೆ ಐಷಾರಾಮಿ ಎಲೆಕ್ಟ್ರಿಕ್ ಕಾರ್ ಖರೀದಿ ಮಾಡಬಯಸುವವರು ಮರ್ಸಿಡಿಸ್ ಬೆಂಝ್ ಇಕ್ಯೂಎಸ್ 580 ಕಾರ್ ಕೊಳ್ಳಬಹುದು ಎಂದು ಕಾರ್ ಗಳ ಎಕ್ಸ್ ಪರ್ಟ್ಸ್ ಅಭಿಪ್ರಾಯವಾಗಿದೆ.

Leave a Reply

%d bloggers like this: