ಒಂದು ಕಾರ್ಯಕ್ರಮವನ್ನು ನಡಿಸಿಕೊಡಲು ಅನುಶ್ರೀ ಪಡೆಯುವ ಸಂಬಾವನೆ ಎಷ್ಟು ಗೊತ್ತಾ? ನೋಡಿ ಒಮ್ಮೆ

ಕನ್ನಡ ಕಿರುತೆರೆಯ ಸುಪ್ರಸಿದ್ದ ಈ ನಿರೂಪಕಿ ಪಡೆಯುವ ಸಂಭಾವನೆ ಎಷ್ಟು ಗೊತ್ತಾ…! ಕನ್ನಡ ಕಿರುತೆರೆ ಕೆಲವು ವರ್ಷಗಳಿಂದೀಚೆಗೆ ಭಾರಿ ಬದಲಾವಣೆ ಕಂಡಿವೆ. ಅದೂ ಧಾರಾವಾಹಿ, ರಿಯಾಲಿಟಿ ಶೋ, ಇನ್ನಿತರ ಯಶಸ್ವಿ ಕಾರ್ಯಕ್ರಮಗಳಿರಬಹುದು ಪ್ರತಿಯೊಂದರಲ್ಲಿಯೂ ಕೂಡ ಅದ್ದೂರಿತನವನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಯಾವುದೇ ಧಾರಾವಾಹಿ, ರಿಯಾಲಿಟಿ ಶೋ ಅಥವಾ ಸಿನಿಮಾ ಇವೆಂಟ್ ಗಳಲ್ಲಿ ನಿರೂಪಕರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ಯಾವುದೇ ಕಾರ್ಯಕ್ರಮದ ಸಂಪೂರ್ಣ ವಿವರವನ್ನು ಅರಿತು ಆ ಕಾರ್ಯಕ್ರಮದ ಉದ್ದೇಶ, ಹಿನ್ನೆಲೆ ಕಾರಣಗಳನ್ನು ತಿಳಿದುಕೊಂಡು ಬಂದಿರುವ ಬರಬಹುದಾದ ಎಲ್ಲಾ ಅತಿಥಿಗಳನ್ನ ಸ್ವಾಗತಿಸಿ ಅವರಿಗೆ ಗೌರವ ಸಲ್ಲಿಸುವ ಅಂತ್ಯದ ವರೆಗೂ ಇಡೀ ಕಾರ್ಯಕ್ರಮದ ಸೂತ್ರಧಾರನಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅದಕ್ಕೆ ಅದರದೇ ಆದಂತಹ ಚಾಕಚಕ್ಯತೆ, ಚಾಣಾಕ್ಷ್ಯತೆ, ಕೌಶಲ್ಯ ಅತ್ಯಗತ್ಯವಾಗಿರುತ್ತದೆ. ಅಂತಹ ಕೌಶಲ್ಯ ತನ್ನ ವಿಶಿಷ್ಟ ನಿರೂಪಣೆಯ ಮೂಲಕ ಇಂದು ಕನ್ನಡದ ಬಹು ಬೇಡಿಕೆಯ ಜನಪ್ರಿಯ ನಿರೂಪಕಿ ಅಂದರೆ ಅದು ಒನ್ ಅಂಡ್ ಓನ್ಲೀ ಆಂಕರ್ ಕಮ್ ನಟಿ ಅನುಶ್ರೀ ಎಂದರೆ ಅತಿಶಯೋಕ್ತಿಯಲ್ಲ.

ಇಂದಿನ ದಿನಮಾನಗಳಲ್ಲಿ ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳಿಗಿಂತ ಹೆಚ್ಚಾಗಿ ರಿಯಾಲಿಟಿ ಶೋ ಗಳೇ ಹೆಚ್ಚು ಸದ್ದು ಮಾಡುತ್ತಿವೆ. ಯಾವುದೇ ರಿಯಾಲಿಟಿ ಶೋಗಳ ಯಶಸ್ವಿಯಾಗಿ ಸಂಪೂರ್ಣವಾಗಬೇಕಾದರೆ ಅಲ್ಲಿ ನಿರೂಪಣೆಯು ಪ್ರಮುಖವಾಗಿರುತ್ತದೆ. ಏಕೆಂದರೆ ಇಡೀ ಕಾರ್ಯಕ್ರಮವನ್ನು ಸಮರ್ಪಕವಾಗಿ ಮುನ್ನೆಡೆಸುವ ಜವಬ್ದಾರಿ ಅವರದ್ದಾಗಿರುತ್ತದೆ. ತಮ್ಮ ಆಕರ್ಷಕ ನಗು, ಕನ್ನಡ ಭಾಷೆಯ ಮೇಲಿರುವ ಹಿಡಿತ, ತಮ್ಮ ವಿಶಿಷ್ಟ ನಿರೂಪಣೆಯ ಮೂಲಕ ಅನುಶ್ರೀ ಅವರು ನಾಡಿನಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಇಂದು ಬಹುತೇಕ ರಿಯಾಲಿಟಿ ಶೋ, ಸಿನಿಮಾ ಇವೆಂಟ್ ಗಳಲ್ಲಿ ಹೆಚ್ಚಾಗಿ ತಮ್ಮ ನಿರೂಪಣೆಯ ಮೂಲಕ ಹೆಚ್ಚಾಗಿ ಜನಪ್ರಿಯ ನಿರೂಪಕಿಯಾಗಿ ಮಿಂಚುತ್ತಿರುವುದು ಅಂದರೆ ಅದು ಅನುಶ್ರೀ. ಮಂಗಳೂರು ಮೂಲದ ಈ ಚೆಲುವೆ ಪ್ರಸ್ತುತ ಬಹು ಬೇಡಿಕೆಯ ಜನಪ್ರಿಯ ನಿರೂಪಕಿಯಾಗಿದ್ದಾರೆ. ಮಂಗಳೂರು ಮೂಲದ ಅನುಶ್ರೀ ಅವರು ತಮ್ಮ ತಂದೆಯ ಅಗಲಿಕೆಯಿಂದಾಗಿ ತುಂಬಾ ಚಿಕ್ಕ ವಯಸ್ಸಿಗೇನೇ ಮನೆಯ ಜವಬ್ದಾರಿಯನ್ನ ತೆಗೆದುಕೊಳ್ಳುವ ಅನಿವಾರ್ಯತೆ ಬರುತ್ತದೆ.

ಅದರಂತೆ ತಮ್ಮ ವಿಧ್ಯಾಭ್ಯಾಸವನ್ನು ಮೊಟಕುಗೊಳಿಸಿ ಸ್ಥಳೀಯ ವಾಹಿನಿಯೊಂದರಲ್ಲಿ ನಿರೂಪಕಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ದಿನ ಕಳೆದಂತೆ ತನ್ನ ನಿರೂಪಣೆಯ ಮೂಲಕ ಹೆಸರು ಮಾಡಿದ ಅನುಶ್ರೀ ಬೆಂಗಳೂರಿಗೆ ಬರುತ್ತಾರೆ. ಇಲ್ಲಿ ಒಂದಷ್ಟು ಶ್ರಮ ಪಟ್ಟು ಕೆಲವು ವಾಹಿನಿಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಾರೆ. ಇಲ್ಲಿಯೂ ಕೂಡ ತಮ್ಮ ಅಮೋಘ ನಿರೂಪಣೆಯ ಮೂಲಕ ಕನ್ನಡ ಕಿರುತೆರೆ ಲೋಕದ ಯಶಸ್ವಿ ನಿರೂಪಕಿಯಾಗಿ ಗುರುತಿಸಿಕೊಂಡು ಇಂದು ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲಿ ಅನುಶ್ರೀ ಅವರನ್ನ ಕಾಣಬಹುದಾಗಿದೆ. ಕೇವಲ ನಿರೂಪಕಿ ಮಾತ್ರ ಅಲ್ಲದೆ ಒಂದಷ್ಟು ಸಿನಿಮಾಗಳಲ್ಲಿಯೂ ಕೂಡ ನಟಿಸಿ ಸೈ ಎನಿಸಿಕೊಂಡಿರುವ ಅನುಶ್ರೀ ಅವರು ಮೂಲಗಳ ಪ್ರಕಾರ ಒಂದು ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಬರೋಬ್ಬರಿ ನಾಲ್ಕು ಲಕ್ಷ ರೂ.ಗಳ ಸಂಭಾವನೆ ಪಡೆಯಲಿದ್ದಾರಂತೆ.

Leave a Reply

%d bloggers like this: