ಒಂದು ಕಾಲದಲ್ಲಿ ಅಂಕಲ್ ಗಳ ನಿದ್ದೆಗೆಡಿಸಿದ್ದ ಮಾದಕ ನಟಿ ‘ಮಾಧವಿ’ ನಿಜಕ್ಕೂ ಮದುವೆಯಾಗಿರುವುದು ಯಾರನ್ನು ಗೊತ್ತಾ? ನೋಡಿ ಒಮ್ಮೆ

80-90 ರ ದಶಕದಲ್ಲಿ ತನ್ನ ಮಾದಕ ನೋಟದಿಂದ ಪಡ್ಡೆ ಹುಡುಗರಿಗೆ ಹುಚ್ಚೆಬ್ಬೆಸಿದ್ದ ಈ ನಟಿ ಇದೀಗ ಮದುವೆ ಆಗಿ ಮೂರು ಮಕ್ಕಳ ತಾಯಿಯಾಗಿದ್ದರು ಕೂಡ ಅದೇ ಚಾರ್ಮ್ ಅನ್ನು ಉಳಿಸಿಕೊಂಡು ಮತ್ತೆ ಬಣ್ಣದ ಲೋಕಕ್ಕೆ ಮರಳಬೇಕು ಎಂದು ತಮ್ಮ ಅಭಿಮಾನಿಗಳಿಂದ ಕೋರಿಕೆ ಪಡೆಯುತ್ತಿದ್ದಾರೆ. ಹಾಗಾದರೆ ಯಾರು ಆ ಖ್ಯಾತ ನಟಿ. ಇದೀಗ ಏನು ಮಾಡುತ್ತಿದ್ದಾರೆ. ಎಲ್ಲಿದ್ದಾರೆ ಎಂಬ ವಿವರವನ್ನ ತಿಳಿಯುವುದಾದರೆ. ಈ ನಟಿ ಬೇರಾರು ಅಲ್ಲ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿ ದಿಗ್ಗಜ ನಟರಾದಂತಹ ಕನ್ನಡದಲ್ಲಿ ರಸಿಕರ ರಾಜ, ನಟ ಸಾರ್ವಭೌಮ ಡಾ.ರಾಜ್ ಕುಮಾರ್, ಸಾಹಸಸಿಂಹ ಡಾ.ವಿಷ್ಣು ವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ , ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಮಾಲಿವುಡ್ ಸ್ಟಾರ್ ನಟರಾದ ಮಮ್ಮುಟಿ, ಮೋಹನ್ ಲಾಲ್, ತಮಿಳಿನಲ್ಲಿ ರಜಿನಿಕಾಂತ್ ಹೀಗೆ ಅಂದಿನ ದಿನಮಾನದಲ್ಲಿ ಸೂಪರ್ ಸ್ಟಾರ್ ನಟರಾಗಿ ಮಿಂಚಿದ್ದ ಎಲ್ಲಾ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಮಾಧವಿ ತನ್ನ ಮಾಧಕ ನೋಟದಿಂದಾನೂ ಕೂಡ ಭಾರಿ ಹೆಸರು ಮಾಡಿದವರು.

ನಟಿ ಮಾಧವಿ ಅವರಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅವರದ್ಧೇಯಾದ ಅಭಿಮಾನಿ ವರ್ಗವೇ ಸೃಷ್ಟಿಯಾಗಿತ್ತು. ಅಷ್ಟರ ಮಟ್ಟಿಗೆ ತನ್ನ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನ ತನ್ನತ್ತ ಸೆಳೆದುಕೊಂಡಿದ್ದರು. ಇನ್ನು ನಟಿ ಮಾಧವಿ ಅವರು ಎಲ್ಲಾ ರೀತಿಯ ಪಾತ್ರಗಳಿಗೂ ಕೂಡ ತುಂಬಾ ಅಚ್ಚುಕಟ್ಟಾಗಿ ಹೊಂದಿಕೊಳ್ಳುತ್ತಿದ್ದರು. ಅದು ಸಾಂಸಾರಿಕ, ಸಾಮಾಜಿಕ, ಇನ್ನಿತರ ಯಾವುದೇ ಪಾತ್ರಗಳು ಸಿಕ್ಕರು ಕೂಡ ಅದಕ್ಕೆ ಜೀವತುಂಬಿ ನಟಿಸುತ್ತಿದ್ದರು. ಅದರಲ್ಲಿಯೂ ಅವರು ಹೆಚ್ಚು ಸುದ್ದಿ ಮಾಡಿದ್ದು ಅಂದರೆ ಮಲೆಯಾಳಂ ಸಿನಿಮಾಗಳಲ್ಲಿ ತಮ್ಮ ಮಾದಕ ನಟನೆಯ ಮೂಲಕ. ಅಲ್ಲಿ ಅಷ್ಟೇ ಮಾತ್ರ ಅಲ್ಲದೆ ದಕ್ಷಿಣ ಭಾರತದಾದ್ಯಂತ ಪಡ್ಡೆ ಹುಡುಗರಿಗೆ ಹುಚ್ಚೆಬ್ಬಿಸಿದ್ದರು.

ಆದರೆ ಬಣ್ಣದ ಲೋಕದಲ್ಲಿ ಬೇಡಿಕೆಯ ನಟಿಯಾಗಿದ್ದು, ಉತ್ತುಂಗದಲ್ಲಿದ್ದ ಸಂಧರ್ಭದಲ್ಲಿಯೇ ಮದುವೆ ನಿರ್ಧಾರ ಮಾಡಿದರು. ಹೌದು ಮಾಧವಿ ಅವರು 1996 ರಲ್ಲಿ ರಾಲ್ಫ್ ಜಯದೀಪ್ ಶರ್ಮಾ ಎಂಬುವರೊಟ್ಟಿಗೆ ವೈವಾಹಿಕ ಜೀವನಕ್ಕೆ ಹೆಜ್ಜೆ ಇಡುತ್ತಾರೆ. ಇದಾದ ಬಳಿಕ ಸಿನಿಮಾಲೋಕದಿಂದ ಅಂತರ ಕಾಯ್ದುಕೊಂಡ ಅವರು ತಮ್ಮ ಪತಿಯ ಉದ್ಯಮವನ್ನ ನೋಡಿಕೊಳ್ಳುವುದರತ್ತ ಗಮನ ವಹಿಸುತ್ತಾರೆ. ಬಣ್ಣದ ಲೋಕದಲ್ಲಿ ಸ್ಟಾರ್ ನಟಿಯಾಗಿ ಮಿಂಚಿ ಇದೀಗ ಸುಂದರವಾದ ಸಾಂಸಾರಿಕ ಬದುಕನ್ನ ಕಟ್ಟಿಕೊಂಡಿದ್ದಾರೆ. ಈ ದಂಪತಿಗಳಿಗೆ ಟಿಫಾನಿ ಶರ್ಮಾ, ಪ್ರಿಸಿಲ್ಲಾ ಶರ್ಮಾ, ಎವ್ಲಿನ್ ಶರ್ಮಾ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ.