ಒಂದು ಕಾಲದ ಬಾರಿ ಬೇಡಿಕೆಯಲ್ಲಿದ್ದ ನಟಿ ಈಗ ರಸ್ತೆ ಪಕ್ಕ ದೋಸೆ ಮಾರುತ್ತ ಜೀವನ ಸಾಗಿಸುತ್ತಿದ್ದಾರೆ, ಯಾರು ಗೊತ್ತಾ ಆ ನಟಿ, ನೋಡಿ ಒಮ್ಮೆ

ವಿಧಿ ಕೈಕೊಟ್ಟರು, ಸಿನಿಮಾದ ಜನ ಕೈ ಬಿಟ್ಟರು ಎದೆಗುಂದದೆ ಹೇಡಿಯಾಗಿ ಸಾಯದೆ ಬದುಕು ಕಟ್ಟಿಕೊಂಡರು ಹಾಗು ಮಕ್ಕಳನ್ನು ಬೆಳೆಸಿದರು ಈ ನಟಿ.ಮಲೆಯಾಳಂನ ನಟಿ ಕವಿತಾ ಲಕ್ಷ್ಮಿ, ಅವರ ಜೀವನಗಾಥೆ ಹಲವರಿಗೆ ಸ್ಪೂರ್ತಿ. ಬಹಳಷ್ಟು ಕಲಾವಿದರು ಹಣಕಾಸಿನ ತೊಂದರೆಯಿಂದ ಬೀದಿಗೆ ಬೀಳುವುದೋ ಅಥವಾ ಇನ್ನೇನೋ ಕೆಲಸಗಳನ್ನು ಮಾಡುತ್ತಾ, ಕೆಲವರು ಬಾಳ ಬಂಡಿ ದೂಡಲಾಗದೆ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಆದರೆ ಈ ನಟಿ ಮಾತ್ರ ಆಗಲ್ಲ. ಸಾಲ ತೀರಿಸಲು ಬೇರೊಂದು ಉಪಕಸುಬನ್ನು ಮಾಡುತ್ತಿದ್ದಾರೆ. ಹೌದು ಮೂಲತಃ ಕೇರಳದವರಾದ ಈ ನಟಿ ಮಲೆಯಾಳಂನ ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಸಕ್ರಿಯರಾಗಿದ್ದು, ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಕಂಡುಕೊಂಡಿದ್ದರು. ಮಲಯಾಳಂ ನ ಸೂಪರ್ ಸ್ಟಾರ್ ಮುಮ್ಮಟ್ಟಿ ಅವರ ಜೊತೆಗೆ ಕೂಡ ನಟಿಸಿದ್ದ ಈ ನಟಿ ಮಲಯಾಳಂ ನಲ್ಲಿ ಬೇಡಿಕೆಯಲ್ಲಿದ್ದರು.

ಮಲಯಾಳಂನ ಖ್ಯಾತ ನಟಿ ಕವಿತಾ ಲಕ್ಷ್ಮಿ ಮಮ್ಮುಟಿ ಮೋಹನ್ ಲಾಲ್ ರಂತಹ ಮೇರು ನಂತರ ಜೊತೆ ನಟಿಸಿದ್ದಾರೆ ಮಲಯಾಳಂನ ಸೀರಿಯಲ್ ಗಳಲ್ಲೂ ಕೂಡ ನಟಿಸಿದ್ದಾರೆ ಹದಿನೈದು ವರ್ಷಗಳ ಹಿಂದೆಯೇ ತನ್ನ ಪತಿಗೆ ವಿಚ್ಛೇದನ ನೀಡಿದ ಕವಿತಾ ಲಕ್ಷ್ಮಿ ತಮ್ಮ ಇಬ್ಬರು ಮಕ್ಕಳನ್ನ ತಾವೇ ಸಾಕುವ ಜವಾಬ್ದಾರಿಯನ್ನ ವಹಿಸಿಕೊಂಡಿದ್ದಾರೆ. ಈ ನಟಿಯ ಹೆಸರು ಕವಿತಾ ಲಕ್ಷ್ಮಿ, ಕಳೆದ ೫ ವರುಷಗಳ ಹಿಂದೆ ಮಲಯಾಳಂ ನಲ್ಲಿ ಈ ನಟಿ ಬಾರಿ ಬೇಡಿಕೆಯಲ್ಲಿ ಇದ್ದು, ಸಿನಿಮಾಗಳಲ್ಲಿ ಅವಕಾಶಗಳು ಹೆಚ್ಚಿದ್ದ ಕಾರಣ ಧೈರ್ಯವಾಗಿ ತನ್ನ ಮಗನನ್ನು ವಿದ್ಯಾಭ್ಯಾಸಕ್ಕೆಂದು ಇಂಗ್ಲೆಂಡಿಗೆ ಕಳುಹಿಸುತ್ತಾರೆ. ಆದರೆ ದಿನಗಳುರುಳಿದಂತೆ ಅವಕಾಶಗಳು ಕಡಿಮೆಯಾಗುತ್ತ ಬಂದಿದ್ದು, ಕೊನೆಗೆ ಅವಕಾಶಗಳೇ ಇಲ್ಲದಂತಾಗುತ್ತದೆ. ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದ ಇವರು ಇತ್ತ ಮಗನಿಗೆ ವಿದ್ಯಾಭ್ಯಾಸಕ್ಕಾಗಿ ಪ್ರತಿ ತಿಂಗಳು ಹಣವನ್ನು ಕಳಿಸಬೇಕಿತ್ತು.

ಆದರೆ ಈಕೆಯ ಕೈಯಲ್ಲಿ ಬಿಡಿಗಾಸು ಕೂಡ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯಲ್ಲಿ ಕೆಲವು ಜನರು ಬೇರೆದಾರಿಯಿಲ್ಲದೆ ಕೆಟ್ಟ ದಾರಿ ಹಿಡಿಯುವುದುಂಟು. ಆದರೆ ಈ ನಟಿ ಮಾಡಿರುವುದು ನಿಜಕ್ಕೂ ಎಲ್ಲರೂ ಮೆಚ್ಚುವಂತಹದ್ದು. ಇನ್ನು ನಟಿ ಕವಿತಾ ಲಕ್ಷ್ಮಿ ಅವರ ವಯಕ್ತಿಕ ಜೀವನ ನೋಡುವುದಾದರೆ ಆಕೆ ಸಿನಿಮಾದಲ್ಲಿ ಸಕ್ರಿಯರಾಗಿದ್ದ ಸಮಯದಲ್ಲೇ ತನ್ನ ಪತಿಯಿಂದ ದೂರವಾಗುತ್ತಾರೆ. ಇನ್ನು ಇವರಿಗೆ ಒರ್ವ ಮಗಳು ಕೂಡ ಇದ್ದು, ತನಗೆ ಒದಗಿದ ಆರ್ಥಿಕ ಸಂಕಷ್ಟದಿಂದ ಹೊರಬರಲು ಒಂದು ಆಲೋಚನೆಯನ್ನು ಮಾಡುತ್ತಾರೆ. ಜೀವನ ಸಂಕಷ್ಟದಲ್ಲಿದ್ದ ಕಾರಣ ದುಡಿಯೋಕೆ ಯಾವ ಕೆಲಸವಾದರೇನು ಎಂದು ಯೋಚಿಸಿ ಹೈವೆಯ ಪಕ್ಕದಲ್ಲಿ ಒಂದು ಚಿಕ್ಕ ದೋಸೆ ಅಂಗಡಿಯನ್ನು ಆರಂಭಿಸಿ ಮಧ್ಯರಾತ್ರಿಯವರೆಗೂ ದೋಸೆಯನ್ನೂ ಮಾರಲು ಮುಂದಾಗುತ್ತಾರೆ.

ಹೌದು ಬೆಳಗಿನ ಸಮಯದಲ್ಲಿ ಎರಡು ಮಾಲಯಾಳಂ ಕಿರುತೆರೆಯ ಎರಡು ದಾರವಾಹಿಗಳಲ್ಲಿ ನಟಿಸುವ ಈ ನಟಿ ರಾತ್ರಿ ವೇಳೆಯಲ್ಲಿ ತನ್ನ ಕೈಯಾರೆ ದೋಸೆಯನ್ನು ಮಾಡುವ ಕ್ಯಾಂಟಿನ್ ತೆರೆಯುತ್ತಾರೆ. ಇವರ ಈ ಕೆಲಸಕ್ಕೆ ಮಗಳು ಸಹ ಅವರಿಗೆ ಸಹಾಯ ಮಾಡುತ್ತಿದ್ದು ಬಂದ ಹಣದಲ್ಲಿ ಪ್ರತಿತಿಂಗಳು ಮಗನ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಿದ್ದಾರೆ.
ಈ ಕುರಿತು ಮಾಧ್ಯಮದ ಸಂದರ್ಶನದಲ್ಲಿ ಮಾತನಾಡಿರುವ ಕವಿತಾ ಲಕ್ಷ್ಮಿ ಅವರು, ಮನೆಯಲ್ಲಿ ಹೇಗೆ ತನ್ನ ಮಕ್ಕಳಿಗೆ ಅಡುಗೆಯನ್ನು ಮಾಡುತ್ತೀನೋ ಹಾಗೆಯೇ ತಮ್ಮ ಕ್ಯಾಂಟೀನ್ ನಲ್ಲಿ ಕೂಡಾ ಅಡುಗೆಯನ್ನು ಮಾಡುತ್ತೀನೆ ಹಾಗೂ ಈ ಕೆಲಸ ನನಗೆ ತುಂಬಾ ಸಂತೋಷ ನೀಡಿದೆ ಎಂದು ಕವಿತಾ ಲಕ್ಷ್ಮಿ ಅವರು ಹೇಳಿದ್ದಾರೆ.

ಈಗಾಗಲೇ ಎರಡು ವರ್ಷಗಳಿಂದ ಈ ಕೆಲಸವನ್ನು ಆರಂಭಿಸಿದ್ದು ಮಗನಿಗೆ ಹಣವನ್ನು ಸಹ ಕಳಿಸುತ್ತಿದ್ದಾರೆ. ಮಗನ ವಿದ್ಯಾಭ್ಯಾಸ ಕೊನೆಯ ಹಂತದಲ್ಲಿದ್ದು, ತಾನೊಬ್ಬ ನಟಿ ಎಂಬುದನ್ನು ಪಕ್ಕಕ್ಕಿಟ್ಟು ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಮಗನನ್ನು ಓದಿಸುತ್ತಿರುವ ಕವಿತಾ ಲಕ್ಷ್ಮಿಯವರ ಕೆಲಸಕ್ಕೆ ಸಾಮಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Leave a Reply

%d bloggers like this: