ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ಖ್ಯಾತ ನಟಿ ಈಗ ಸಾವಿರಾರು ಕೋಟಿಗೆ ಒಡತಿ

ಭಾರತೀಯ ಚಿತ್ರರಂಗದಲ್ಲಿ 70 ರಿಂದ 90ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚಿ ಭಾರತೀಯ ಚಿತ್ರರಂಗದ ಎಲ್ಲಾ ಟಾಪ್ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಈ ನಟಿ ಇಂದಿಗೂ ಕೂಡ ತಮ್ಮ ರೂಪ ಲಾವಣ್ಯದ ಜೊತೆಗೆ ತಮ್ಮ ಐಷಾರಾಮಿ ಬದುಕಿನ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗೆಲ್ಲಾ ಎರಡು ಮೂರು ಸಿನಿಮಾ ಮಾಡಿ ಸೈಡಿಗ್ ಹೋಗೋ ಕಾಲ. ಆದ್ರೇ ಈ ನಟಿ ಮಾತ್ರ ಇದಕ್ಕೆ ತದ್ವಿರುದ್ದ ಅಂತಾನೇ ಹೇಳ‌ಬಹುದು. ಈ ನಟಿ ಬೇರಾರು ಅಲ್ಲ ಮಾಧವಿ. ಇವರ ಐಷಾರಾಮಿ ಬದುಕಿಗೆ ಇವರ ಪತಿಯೇ ಕಾರಣ. ಹಾಗಿದ್ರೇ ನಟಿ ಮಾಧವಿ ಅವರ ಪತಿ ಯಾರು, ಅವರ ಹಿನ್ನೆಲೆ ಏನು ಅನ್ನೋದನ್ನ ತಿಳಿಯೋಣ.

ನಟಿ ಮಾಧವಿ ಅವರು ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿ ದಿಗ್ಗಜ ನಟರಾದಂತಹ ನಟ ಸಾರ್ವಭೌಮ ಡಾ.ರಾಜ್ ಕುಮಾರ್, ಸಾಹಸಸಿಂಹ ಡಾ.ವಿಷ್ಣು ವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ,ಶಿವಾಜಿ ಗಣೇಶನ್, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಮಾಲಿವುಡ್ ಸ್ಟಾರ್ ನಟರಾದ ಮಮ್ಮುಟಿ, ಮೋಹನ್ ಲಾಲ್, ತಮಿಳಿನಲ್ಲಿ ರಜಿನಿಕಾಂತ್ ಹೀಗೆ ಸೂಪರ್ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿರುವರು. ಮಾಧವಿ ಅವರು ಎಲ್ಲಾ ರೀತಿಯ ಪಾತ್ರಗಳಿಗೂ ಕೂಡ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು.

ಅದು ಸಾಂಸಾರಿಕ, ಸಾಮಾಜಿಕ, ಇನ್ನಿತರ ಯಾವುದೇ ಪಾತ್ರಗಳು ಸಿಕ್ಕರು ಕೂಡ ಅದಕ್ಕೆ ಜೀವತುಂಬಿ ನಟಿಸುತ್ತಿದ್ದರು. ಅದರಲ್ಲಿಯೂ ಅವರು ಹೆಚ್ಚು ಸುದ್ದಿ ಮಾಡಿದ್ದು ಅಂದರೆ ಮಲೆಯಾಳಂ ಸಿನಿಮಾಗಳಲ್ಲಿ ತಮ್ಮ ಮಾದಕ ನಟನೆಯ ಮೂಲಕ. ಹಾಗಾಗಿ ಮಾಧವಿ ಅವರಿಗೆ ಪಡ್ಡೆ ಹುಡುಗರ ಅಭಿಮಾನಿ ಬಳಗ ಬಹು ದೊಡ್ಡದಾಗಿಯೇ ಇತ್ತು. ದಕ್ಷಿಣ ಭಾರತೀಯ ಚಿತ್ರರಂಗದ ಬೇಡಿಕೆಯ ನಟಿಯಾಗಿ ಉತ್ತುಂಗದಲ್ಲಿದ್ದಾಗಲೇ ಮಾಧವಿ ಅವರು ಮದುವೆಯ ನಿರ್ಧಾರ ಮಾಡಿದರು. 1996 ರಲ್ಲಿ ರಾಲ್ಫ್ ಜಯದೀಪ್ ಶರ್ಮಾ ಎಂಬುವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಾರೆ.

ಇದಾದ ಬಳಿಕ ಸಿನಿಮಾಲೋಕದಿಂದ ಅಂತರ ಕಾಯ್ದುಕೊಂಡ ಅವರು ತಮ್ಮ ಪತಿಯ ಉದ್ಯಮವನ್ನ ನೋಡಿಕೊಳ್ಳುವುದರತ್ತ ಗಮನ ವಹಿಸುತ್ತಾರೆ. ಬಣ್ಣದ ಲೋಕದಲ್ಲಿ ಸ್ಟಾರ್ ನಟಿಯಾಗಿ ಮಿಂಚಿ ಇದೀಗ ಸುಂದರವಾದ ಸಾಂಸಾರಿಕ ಬದುಕನ್ನ ಕಟ್ಟಿಕೊಂಡಿದ್ದಾರೆ. ಈ ದಂಪತಿಗಳಿಗೆ ಟಿಫಾನಿ ಶರ್ಮಾ, ಪ್ರಿಸಿಲ್ಲಾ ಶರ್ಮಾ, ಎವ್ಲಿನ್ ಶರ್ಮಾ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ. ಮಾಧವಿ ಅವರ ಪತಿ ರಾಲ್ಫ್ ಶರ್ಮಾ ಅವರು ಸಾವಿರಾರು ಕೋಟಿಯ ಒಡೆಯರಾಗಿದ್ದು ಜರ್ಮನ್ ಮೂಲದವಾರಿಗಿದ್ದಾರೆ. ಮೆಡಿಕಲ್, ರೆಸ್ಟೋರೆಂಟ್ ವ್ಯವಹಾರಗಳನ್ನ ಇಲ್ಲಿ ಆರಂಭ ಮಾಡಿದ ನಂತರ ಭಾರತದಲ್ಲಿ ನೆಲೆಯೂರಿದ್ದಾರೆ. ನಟಿ ಮಾಧವಿ ಅವರು ಇಂದಿಗೂ ಕೂಡ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ ಅಂದರೆ ಅದಕ್ಕೆ ಅವರ ಪತಿ ರಾಲ್ಫ್ ಶರ್ಮಾ ಅವರೇ ಮುಖ್ಯ ಕಾರಣ ಅಂತ ಹೇಳ್ಬೋದಾಗಿದೆ.

Leave a Reply

%d bloggers like this: