ಒಂದು ಕಾಲದಲ್ಲಿ ಕನ್ನಡ ಚಿತ್ರಗಳ ಬಗ್ಗೆ ಅಸಡ್ಡೆ ತೋರುತ್ತಿದ್ದವರು ಇಂದು ಇದೇ ಕನ್ನಡ ಚಿತ್ರಗಳ ಬಗ್ಗೆ ಹೊಗಳಿಕೆ

ಕರಾವಳಿಯ ಮತ್ತೊಬ್ಬ ಸ್ಟಾರ್ ನಟಿ ಕಾಂತಾರ ಸಿನಿಮಾ ನೋಡಿ ಮನ ಸೋತಿದ್ದಾರೆ. ಈಗಾಗಲೇ ಕನ್ನಡದ ಕಾಂತಾರ ಸಿನಿಮಾ ಪಂಚ ಭಾಷೆಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗಿದೆ. ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ಪಡೆರು ಬರೋಬ್ಬರಿ ಇನ್ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ ಧೂಳೆಬ್ಬಿಸಿದೆ. ಕಾಂತಾರ ಸಿನಿಮಾವನ್ನ ಕೇವಲ ಸಿನಿ ಪ್ರೇಕ್ಷಕರು ಮಾತ್ರ ಅಲ್ಲದೆ ಭಾರತೀಯ ಚಿತ್ರರಂಗದ ಸುಪ್ರಸಿದ್ದ ನಟmನಟಿಯರು ಕೂಡ ಮುಗಿಬಿದ್ದು ನೋಡುತ್ತಿದ್ದಾರೆ. ಈಗಾಗಲೇ ಕಾಂತಾರ ಸಿನಿಮಾವನ್ನ ತಮಿಳಿನ ಖ್ಯಾತ ನಟ ಧನುಷ್, ತೆಲುಗಿನ ಸ್ಟಾರ್ ನಟರಾದ ಪ್ರಭಾಸ್, ರಾಣಾ ದಗ್ಗುಬಾಟಿ, ಮಲೆಯಾಳಂ ಸೂಪರ್ ಸ್ಟಾರ್ ನಟ ಪೃಥ್ವಿರಾಜ್ ಸೇರಿದಂತೆ ಬಾಲಿವುಡ್ ನಟಿಯರಾದ ಶಿಲ್ಪಾ ಶೆಟ್ಟಿ ಕೂಡ ಕಾಂತಾರ ಚಿತ್ರ ನೋಡಿ.

ಈ ಚಿತ್ರ ನಮ್ಮನ್ನ ಬೇರೋಂದು ಲೋಕಕ್ಕೆ ಕರೆದೊಯ್ಯುತ್ತದೆ. ನಾನು ಹುಟ್ಟಿ ಬೆಳೆದ ಕರವಾಳಿ ಭಾಗದ ಸಂಸ್ಕೃತಿ ಆಚರಣೆಯನ್ನ ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ ಎಂದು ಕಾಂತಾರ ಸಿನಿಮಾದ ಬಗ್ಗೆ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರ ನಟನೆ ಬಗ್ಗೆಯೂ ಕೂಡ ಅಪಾರ ಮೆಚ್ಚುಗೆ ನೀಡಿದ್ದರು. ಅದೇ ರೀತಿಯಾಗಿ ತೆಲುಗಿನ ಖ್ಯಾತ ನಟಿ ಅನುಷ್ಕಾ ಶೆಟ್ಟಿ, ಬಾಲಿವುಡ್ ಕಂಗನಾ ರಣಾವತ್ ಕೂಡ ಕಾಂತಾರ ಸಿನಿಮಾದ ಬಗ್ಗೆ ಭಾರಿ ಪ್ರಶಂಸೆ ನೀಡಿದ್ದರು. ಇದೀಗ ತೆಲುಗಿನ ಸುಪ್ರಸಿದ್ದ ನಟಿ ನಮ್ಮ ಕರಾವಳಿ ಬೆಡಗಿ ನಟಿ ಪೂಜಾ ಹೆಗ್ಡೆ ಕೂಡಾ ಕಾಂತಾರ ಸಿನಿಮಾ ನೋಡಿ ಅದ್ಭುತ ಪ್ರತಿಕ್ರಿಯೆ ನೀಡಿದ್ದಾರೆ. ಪೂಜಾ ಹೆಗ್ಡೆ ಅವರು ಕಾಂತಾರ ಸಿನಿಮಾ ನೋಡಿ ನಿಮ್ಮ ಹೃದಯದಿಂದ ಕಥೆ ಹೇಳಿದ್ದೀರಿ, ಸಿನಿಮಾ ಅದ್ಬುತವಾಗಿದೆ.

ಅದರಲ್ಲಿಯೂ ಚಿತ್ರದ ಅಂತಿಮ 15 ನಿಮಿಷಗಳು ಒಂದು ವಿಶಿಷ್ಟ ಅನುಭವ ನೀಡಿತು. ನಾನು ಕಾಂತಾರ ಸಿನಿಮಾ ನೋಡಿ ದಿಗ್ಬ್ರಮೆ, ವಿಸ್ಮಯಗೊಂಡಿದ್ದೇನೆ. ನಾನು ಚಿಕ್ಕ ವಯಸ್ಸಿನಲ್ಲಿ ಈ ಭೂತಾರಾಧನೆ, ಕೋಲ, ದೈವಾರಾಧನೆಯನ್ನ ನೋಡಿದ್ದೆ. ಈ ಕಾಂತಾರ ಸಿನಿಮಾ ನನ್ನ ಬಾಲ್ಯದ ದಿನಗಳನ್ನ ನೆನಪಿಸಿತು. ನನಗೆ ಕಾಂತಾರ ಸಿನಿಮಾ ತುಂಬಾ ಮೆಚ್ಚುಗೆಯಾಗಿದೆ. ಪ್ರತಿಯೊಬ್ಬರು ಕೂಡ ಈ ಚಿತ್ರವನ್ನ ನೋಡಿ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೂಜಾ ಹೆಗ್ಡೆ ಹೊಂಬಾಳೆ ಫಿಲಂಸ್ ಅನ್ನ ಹ್ಯಾಷ್ ಟ್ಯಾಗ್ ಮಾಡಿದ್ದಾರೆ. ಇದೀಗ ನಟಿ ಪೂಜಾ ಹೆಗ್ಡೆ ಅವರ ಈ ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಒಂದು ಕಾಲದಲ್ಲಿ ಕನ್ನಡ ಚಿತ್ರಗಳ ಬಗ್ಗೆ ಅಸಡ್ಡೆ ತೋರಿತ್ತಿದ್ದ ಬಹುತೇಕ ನಟಿಯರು ಇಂದು ಇದೇ ಕನ್ನಡ ಚಿತ್ರರಂಗವನ್ನು ಹೊಗಳುತ್ತಿರಿವುದು ಕನ್ನಡ ಚಿತ್ರರಂಗದ ಬೆಳವಣಿಗೆಯನ್ನು ತೋರಿಸುತ್ತದೆ.

Leave a Reply

%d bloggers like this: