ಒಂದು ದಿನದ ಮುಂಚೆಯೇ ಈ ಥಿಯೇಟರ್ ಅಲ್ಲಿ ರಿಶಭ್ ಶೆಟ್ಟಿ ಅವರ ಹೊಸ ಚಿತ್ರ ವೀಕ್ಷಿಸುತ್ತಿದ್ದಾರೆ ನಟಿ ರಮ್ಯಾ ಅವರು

ರಿಷಭ್ ಶೆಟ್ಟಿ ಕಾಂತಾರ ಸಿನಿಮಾ ನೋಡಲು ಕಾತುರ ವ್ಯಕ್ತಪಡಿಸಿದ ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ರಮ್ಯಾ. ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲದೆ ಸದ್ಯಕ್ಕೆ ಎಲ್ಲೆಡೆ ಸಖತ್ ಸೌಂಡ್ ಮಾಡುತ್ತಿರೋ ಸಿನಿಮಾ ಅಂದರೆ ಅದು ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ನಟನೆ ಇರುವ ಕಾಂತಾರ ಸಿನಿಮಾ. ಈ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ಎಲ್ಲೆಡೆ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ಕಾಂತಾರ ಸಿನಿಮಾದಲ್ಲಿ ರಿಷಭ್ ಅವರನ್ನ ಹೊಸ ರೂಪದಲ್ಲಿ ಕಾಣಬಹುದು ಅನ್ನೋದನ್ನ ಟ್ರೇಲರ್ ಹೇಳುತ್ತಿದೆ. ಅದರ ಜೊತೆಗೆ ಕಾಂತಾರ ಸಿನಿಮಾ ರಿಷಭ್ ಅವರಿಗೆ ಒಂದು ಮಾಸ್ ಇಮೇಜ್ ಅನ್ನ ತಂದುಕೊಡಬಹುದು ಎಂದು ಹೇಳಲಾಗ್ತಿದೆ. ಇದೀಗ ಕಾಂತಾರ ಸಿನಿಮಾದ ಹೊಸ ಅಪ್ ಡೇಟ್ ಅಂದರೆ ಸೆಲೆಬ್ರಿಟಿ ಪ್ರೀಮಿಯರ್ ಶೋ ನಲ್ಲಿ ಕಾಂತಾರ ಸಿನಿಮಾ ನೋಡಲು ಬ್ಯೂಟಿ ಕ್ವೀನ್ ರಮ್ಯಾ ಅವರು ಕೂಡ ಬಹಳ ಉತ್ಸುಕರಾಗಿದ್ದಾರೆ.

ಹಾಗಾಗಿಯೇ ರಮ್ಯಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಾಂತಾರ ಸಿನಿಮಾವನ್ನ ನಾನು ಕಣ್ತುಂಬಿಕೊಳ್ಳಲು ನಾನು ಕಾತುರಳಾಗಿದ್ದೇನೆ. ಓರಾಯನ್ ಮಾಲ್ ನಲ್ಲಿ ಸಂಜೆ 6.30ಕ್ಕೆ ಸಿನಿಮಾ ನೋಡಲು ಬರುತ್ತಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಕಾಂತಾರ ಸಿನಿಮಾವನ್ನ ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದ್ದು, ಸೆಪ್ಟೆಂಬರ್ 30ರಂದು ಅಂದರೆ ಇದೇ ಶುಕ್ರವಾರ ಕಾಂತಾರ ಚಿತ್ರ ದೇಶಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಕಾಂತಾರ ಸಿನಿಮಾದ ಪ್ರೀಮಿಯರ್ ಶೋ ಅನ್ನ ಒಟ್ಟು ಐವತ್ತು ಕಡೆ ಪ್ರದರ್ಶನ ಮಾಡಲಾಗ್ತಿದೆ. ಕರ್ನಾಟಕದಲ್ಲಿ ಮಾತ್ರ ಹೊರ ರಾಜ್ಯದಲ್ಲಿಯೂ 25 ಪ್ರೀಮಿಯರ್ ಶೋ ಆಯೋಜನೆ ಮಾಡಲಾಗ್ತಿದೆ.

ಈಗಾಗಲೇ ಆನ್ಲೈನ್ ಅಡ್ವಾನ್ಸ್ ಬುಕ್ಕಿಂಗ್ ಕೂಡ ಆರಂಭವಾಗಿದೆ. ಕಾಂತಾರ ಸಿನಿಮಾದ ಟ್ರೇಲರ್ ನೋಡಿರೋ ಸಿನಿ ಪ್ರೇಕ್ಷಕರು ಚಿತ್ರ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಅದರಂತೆ ರಿಲೀಸ್ ಗೂ ಒಂದು ದಿನದ ಮುನ್ನವೇ ಕಾಂತಾರ ಚಿತ್ರ ಪ್ರೀಮಿಯರ್ ಶೋ ಆರಂಭ ಆಗ್ತಿರೋ ಹಿನ್ನೆಲೆಯಲ್ಲಿ ಸಿನಿಪ್ರಿಯರು ಕಾಂತಾರ ಚಿತ್ರ ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ಇತ್ತೀಚೆಗೆ ಗಾಳಿಪಟ2, 777 ಚಾರ್ಲಿ ಸಿನಿಮಾ ನಂತರ ಕಾಂತಾರ ಸಿನಿಮಾ ಕೂಡ ಪ್ರೀಮಿಯರ್ ಶೋ ಆಯೋಜನೆ ಮಾಡುವ ಮೂಲಕ ಎಲ್ಲೆಡೆ ಸಖತ್ ಸೌಂಡ್ ಮಾಡುತ್ತಿದೆ. ಕಾಂತಾರ ಸಿನಿಮಾದಲ್ಲಿ ರಿಷಭ್ ಶೆಟ್ಟಿಗೆ ಜೋಡಿಯಾಗಿ ಸಪ್ತಮಿಗೌಡ ನಟಿಸಿದ್ದು, ಪ್ರಮುಖ ಪಾತ್ರಗಳಲ್ಲಿ ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಬಹುದೊಡ್ಡ ತಾರಾಗಣವಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಈಗಾಗಲೇ ಅಪಾರ ಮೆಚ್ಚುಗೆ ಪಡೆದುಕೊಂಡಿದೆ.