ಒಂದು ದಿನ ರೈತರ ಜೊತೆ ಇದ್ದಿದ್ದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ? ನೋಡಿ ಒಮ್ಮೆ ಅಸಲಿ ಸತ್ಯ

ಕೃಷಿ ಇಲಾಖೆಗೆ ರಾಯಭಾರಿ ಆದ ಚಾಲೇಂಜಿಂಗ್ ಸ್ಟಾರ್ ದರ್ಶನ್. ರಾಯಭಾರಿ ಆಗಿದ್ದಕ್ಕೆ ದರ್ಶನ್ ಪಡೆದ ಸಂಭಾವನೆ ಎಷ್ಟು ಎಂದು ಅನೇಕರಿಗೆ ತಿಳಿದಿಲ್ಲ. ಸಾಮಾನ್ಯವಾಗಿ ಸರ್ಕಾರ ಅಥವಾ ಇನ್ಯಾವುದೇ ಸರ್ಕರಿಯೇತರ ಸಂಸ್ಥೆಗಳು ಆಯೋಜನೆ ಮಾಡುವ ಕಾರ್ಯಕ್ರಮ ಯೋಜನೆಗಳಿಗೆ ಜನಪ್ರಿಯತೆ ಹೊಂದಿರುವ ಸಿನಿಮಾ ನಟರು ಅಥವಾ ಕ್ರೀಡಾ ಕ್ಷೇತ್ರದ ಸಾಧಕರನ್ನು ರಾಯಭಾರಿ ಆಗಿ ನೇಮಿಸಿಕೊಳ್ಳುತ್ತಾರೆ. ಅಂತೆಯೇ ಸರ್ಕಾರ ಕೂಡ ಅನೇಕ ಜನಪರ ಕಲ್ಯಾಣ ಕಾರ್ಯಕ್ರಮಗಳು ಬಹು ಬೇಗ ಎಲ್ಲರಿಗೂ ಸುಲಭವಾಗಿ ಪರಿಚಯ ಮಾಡುವ ನಿಟ್ಟಿನಲ್ಲಿ ಸಿನಿಮಾ ತಾರೆಯರನ್ನ ಆಯಾಯ ಇಲಾಖೆಗಳಿಗೆ ನಟ-ನಟಿಯರನ್ನು ರಾಯಭಾರಿಗಳಾಗಿ ನೇಮಿಸಿಕೊಳ್ಳುತ್ತಾರೆ. ಅಂತೆಯೇ ಕೃಷಿ ಇಲಾಖೆಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಜನಪ್ರಿಯ ನಟ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರನ್ನು ರಾಯಭಾರಿ ಆಗಿ ನೇಮಕ ಮಾಡಿಕೊಂಡಿದ್ದಾರೆ.

ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಮನವಿಯ ಮೇರೆಗೆ ತನ್ನ ಆದ್ಯ ಕರ್ತವ್ಯ ಎಂಬಂತೆ ಚಾಲೇಂಜಿಂಗ್ ಸ್ಟಾರ್ ದರ್ಶನ್ ಕೃಷಿ ಇಲಾಖೆಗೆ ರಾಯಭಾರಿ ಆಗಲು ಮನಃ ಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ. ಸಾಮಾನ್ಯವಾಗಿ ರಾಯಭಾರಿ ಆದರೆ ಆಯಾ ಇಲಾಖೆ ಇಂತಿಷ್ಟು ಗೌರವಧನವನ್ನು ಕಲಾವಿದರಿಗೆ ನೀಡುತ್ತದೆ.ಅಂತೆಯೇ ನಟ ದರ್ಶನ್ ಅವರಿಗೆ ಕೃಷಿ ಇಲಾಖೆಯಿಂದ ಗೌರವ ಧನ ನೀಡಲು ಮುಂದಾದಾಗ ಅದನ್ನ ಅವರು ವಿನಯದಿಂದ ತಿರಸ್ಕರಿಸಿದ್ದಾರಂತೆ.ಅಂದರೆ ದರ್ಶನ್ ಅವರು ಕೃಷಿ ಇಲಾಖೆಯ ರಾಯಭಾರಿ ಆಗಲು ಯಾವುದೇ ರೀತಿಯ ಸಂಭಾವನೆಯನ್ನು ಪಡೆದಿಲ್ಲ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ತಿಳಿಸಿ ನಟ ದರ್ಶನ್ ಅವರ ಈ ಗುಣಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ನಟ ದರ್ಶನ್ ಅವರು ಕೂಡ ಸ್ವತಃ ಹೈನುಗಾರಿಕೆ ಮತ್ತು ತೋಟಗಾರಿಕೆ ಕೃಷಿಯಲ್ಲಿ ತೊಡಗಿಸಿಕೊಂಡು ಮೈಸೂರಿನ ಬಳಿ ಫಾರ್ಮ್ ಹೌಸ್ ಕೂಡ ನಡೆಸುತ್ತಿದ್ದಾರೆ.

ಇನ್ನು ನಟ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಇಷ್ಟ ಪಡುವಂತೆ ಮೂಕ ಪ್ರಾಣಿಗಳನ್ನು ಕೂಡ ಅಷ್ಟೇ ಇಷ್ಟ ಪಡುತ್ತಾರೆ.ಕೋವಿಡ್ ಸಂಕಷ್ಟದ ಸಂಧರ್ಭದಲ್ಲಿ ಇವರ ಒಂದು ಕರೆಗೆ ಇಡೀ ನಾಡಿನಾದ್ಯಂತ ಸೆಲೆಬ್ರಿಟಿಗಳನ್ನ ಸೇರಿದಂತೆ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ವನ್ಯಜೀವಿ ಮೃಗಾಲಯಗಳಲ್ಲಿ ಪ್ರಾಣಿಗಳನ್ನ ದತ್ತು ಪಡೆದು ಅವುಗಳ ನೆರವಿಗೆ ಧಾವಿಸಿದ್ದರು.ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂ.ಗಳು ದೇಣಿಗೆಯಾಗಿ ಹರಿದು ಬಂದಿತ್ತು.ಒಟ್ಟಾರೆಯಾಗಿ ನಟ ದರ್ಶನ್ ಅವರ ಮಾತು ಒರಟಾಗಿದ್ದರು ಕೂಡ ಅವರ ಮನದಲ್ಲಿ ಯಾವುದೇ ಕಲ್ಮಶ ಇಟ್ಟುಕೊಳ್ಳದೆ ತನ್ನ ನಂಬಿದವರ ಪಾಲಿಗೆ ಆಶಾಕಿರಣ ದಾರಿ ದೀಪವಾಗಿದ್ದಾರೆ.