ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಗೊಂಡ ಖ್ಯಾತ ನಟಿಯರು ಇವರು.. ನೋಡಿ ಒಮ್ಮೆ

ನಮ್ಮ ಭಾರತದಲ್ಲಿ ಹಲವು ಭಾಷೆ, ಸಂಸ್ಕೃತಿ ಆಚಾರ ವಿಚಾರ ಸಂಪ್ರದಾಯಗಳಿವೆ. ಇಲ್ಲಿ ಅನೇಕ ಜಾತಿ ಧರ್ಮಗಳಿವೆ‌ ಎಲ್ಲಾರು ಒಂದೇ ಭಾವ ಎಂಬ ಮನೋಭಾವ ಬೆಳೆಸಿಕೊಂಡು ಸೌಹಾರ್ಧತೆಯ ಬದುಕನ್ನ ನಡೆಸುತ್ತಾ ಬಂದಿದ್ದೇವೆ. ಹಾಗಾಗಿಯೇ ಭಾರತ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಎಂದು ಹೇಳುತ್ತೇವೆ. ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವಿವಿಧ ಬಗೆಯ ಆಚರಣೆಗಳಿವೆ.ಅದು ಯಾವ ಮಟ್ಟಿಗೆ ಅಂದರೆ ಅವರ ತೊಡುವ
ಉಡುಗೆ-ತೊಡುಗೆ, ಆಹಾರದ ನಂಬಿಕೆಗಳು ಎಲ್ಲವೂ ಕೂಡ ಸಂಪೂರ್ಣವಾಗಿ ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತದೆ. ಆದರೆ ಅದರ ಭಾವ ಮಾತ್ರ ಒಂದೇ ಆಗಿರುತ್ತದೆ. ಇನ್ನು ಭಾರತದಲ್ಲಿ ವಿವಿಧ ಧರ್ಮಗಳಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇರುವ ಈ ದೇಶದಲ್ಲಿ ತಮ್ಮ ಇಚ್ಚೆ ಅನುಸಾರ ಯಾವ ಧರ್ಮವನ್ನು ಬೇಕಾದರು ಅನುಸರಿಸಬಹುದು. ಅದು ಅವರವರ ವೈಯಕ್ತಿಕ ಸ್ವಾತಂತ್ರ್ಯ. ಆದರೆ ಯಾವುದೇ ಕಾರಣಕ್ಕೂ ಒಬ್ಬ ವ್ಯಕ್ತಿಯನ್ನು ಬಲವಂತವಾಗಿ ಒಂದು ಧರ್ಮ ದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಮಾಡಿಸುವುದು ಅಪರಾಧ ಅಂತಾನೇ ಹೇಳಲಾಗುತ್ತದೆ.

ಇದನ್ನ ಹೊರತು ಪಡಿಸಿ ತಮ್ಮ ಸ್ವಇಚ್ಛೆಯಯಿಂದ ಆ ವ್ಯಕ್ತಿ ತನ್ನ ಧರ್ಮದಿಂದ ಮತ್ತೊಂದು ಧರ್ಮದ ಸಿದ್ದಾಂತ ನಿಯಮ ಧಾರ್ಮಿಕ ಆಚಾರ ವಿಚಾರಗಳನ್ನು ಅನುಸರಿಸಬಹುದು. ಅಂತೆಯೇ ಭಾರತೀಯ ಚಿತ್ರರಂಗದ ಸುಪ್ರಸಿದ್ದ ಆನೇಕ ನಟ-ನಟಿಯರು ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಆಗಿದ್ದಾರೆ. ಇದು ಅವರು ಸ್ವಯಂ ಪ್ರೇರಿತರಾಗಿ ಆಗಿರೋದ್ದಾಗಿದೆ. ಹಾಗಾದರೆ ಯಾವ ನಟ-ನಟಿಯರು ತಮ್ಮ ಮೂಲ ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂದು ತಿಳಿಯೋಣ. ತಮಿಳಿನ ಲೇಡಿ ಸೂಪರ್ ಸ್ಟಾರ್ ನಟಿ ಎಂದೇ ಹೆಸರು ಮಾಡಿರುವ ನಟಿ ನಯನಾ ತಾರಾ ಅವರು ಕ್ರಿಶ್ಚಿಯನ್ ಧರ್ಮದವರಾಗಿರುತ್ತಾರೆ. ಅವರ ಮೂಲ ಹೆಸರು ದಯಾನ. ತದ ನಂತರ ಅವರು ಹಿಂದೂ ಧರ್ಮಕ್ಕೆ ಮತಾಂತರ ಆಗಿ ನಯನತಾರಾ ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತಾರೆ.

ನಟಿ ಖುಷ್ಬೂ ಮೂಲತಃ ಇಸ್ಲಾಂ ಧರ್ಮದವರಾಗಿದ್ದು ತದ ನಂತರ ಹಿಂದೂ ಧರ್ಮಕ್ಕೆ ಮತಾಂತರ ಆಗುತ್ತಾರೆ. ನಟಿ ಮೋನಿಕಾ ಅವರು ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿ ರಹಿಮ ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತಾರೆ. ಇನ್ನು ಭಾರತೀಯ ಚಿತ್ರರಂಗದ ಸುಪ್ರಸಿದ್ದ ನಟಿ ಆಗಿ ಮಿಂಚಿದ ನಗ್ಮಾ ಅವರು ಕ್ರಿಶ್ಚಿಯನ್ ಧರ್ಮ ಅನುಸರಿಸುತ್ತಿದ್ದಾರೆ. ಆದರೆ ಇವರ ತಂದೆ ಹಿಂದೂ ಧರ್ಮ ತಾಯಿ ಇಸ್ಲಾಂ ಧರ್ಮದವರಾಗಿದ್ದಾರೆ. ಇನ್ನು 80-90 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚಿದ ನಟಿ ಮಹಾಲಕ್ಷ್ಮಿ ಅವರು ಕ್ರಿಶ್ಚಿಯನ್ ಧರ್ಮ ಪಾಲನೆ ಮಾಡುತ್ತಿದ್ದಾರೆ. ಇನ್ನು ಬಾಲಿವುಡ್ ಸ್ಟಾರ್ ನಟಿ ಹೇಮಾಮಾಲಿನಿ ಅವರು ಹಿಂದೂ ಧರ್ಮದಲ್ಲಿದಲ್ಲಿದ್ದರು. ತದ ನಂತರ ಅವರ ಪತಿ ಧರ್ಮೇಂದ್ರ ಅವರನ್ನು ಒಳಗೊಂಡಂತೆ ಇಬ್ಬರು ಕೂಡ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ.

Leave a Reply

%d bloggers like this: