ಒಂದೇ ವಾರಕ್ಕೆ ಓಟಿಟಿಯಲ್ಲಿ ‘ಲೈಗರ್’ ಚಿತ್ರ ಬಿಡುಗಡೆ, ಚಿತ್ರಕ್ಕೆ ಓಟಿಟಿಯಿಂದ ಸಿಕ್ಕ ಹಣವೆಷ್ಟು ಗೊತ್ತೇ

ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಶನ್ ನಲ್ಲಿ ಮೂಡಿ ಬಂದ ಪ್ಯಾನ್ ಇಂಡಿಯಾ ಲೈಗರ್ ಸಿನಿಮಾ ಇದೇ ಆಗಸ್ಟ್ 25ರಂದು ದೇಶಾದ್ಯಂತ ಅದ್ದೂರಿಯಾಗಿ ರೀಲಿಸ್ ಆಗಿದೆ. ಟ್ರೇಲರ್ ಮೂಲಕ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಲೈಗರ್ ಚಿತ್ರ ಬಿಡುಗಡೆಯಾದ ಒಂದೇ ದಿನಕ್ಕೆ ಬರೋಬ್ಬರಿ ಮೂವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆದರೆ ಸಿನಿಮಾ ನೋಡಿದ ಸಿನಿ ಪ್ರಿಯರು ಲೈಗರ್ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ವಿಜಯ್ ದೇವರಕೊಂಡ ಅವರ ನಟನೆ ಮತ್ತು ಅವರು ತಮ್ಮ ಪಾತ್ರಕ್ಕೆ ಹಾಕಿದ ಶ್ರಮ ಎಲ್ಲವೂ ಕೂಡ ಗಣನೆಗೆ ತೆಗೆದುಕೊಂಡರೆ ವಿಜಯ್ ಅವರಿಗೆ ಮೆಚ್ಚುಗೆ ವ್ಯಕ್ತವಾಯಿತು. ಆದರೆ ಚಿತ್ರದ ಕಥೆ ಗಟ್ಟಿ ಇಲ್ಲ, ನಾಯಕಿಯಾಗಿರೋ ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ ನಟನೆ ಅಷ್ಟಾಗಿ ಚೆನ್ನಾಗಿಲ್ಲ ಜೊತೆಗೆ ಇದು ಪುರಿ ಜಗನ್ನಾಥ್ ಅವರ ಸಿನಿಮಾ ಸ್ಟೈಲ್ ಅಲ್ಲ ಎಂದು ಪ್ರೇಕ್ಷಕರು ಅನಿಸಿಕೆ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗಾಗಿ ಲೈಗರ್ ಸಿನಿಮಾ ವಿಜಯ್ ದೇವರಕೊಂಡ ಅವರಿಗೆ ಭಾರಿ ಹೊಡೆತ ನೀಡಿತು.

ಬರೋಬ್ಬರಿ ನೂರು ಕೋಟಿ ಬಜೆಟ್ ನಲ್ಲಿ ತಯಾರಾದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಆದರೆ ಚಿತ್ರದ ನಿರ್ಮಾಪಕರಿಗೆ ಯಾವುದೇ ರೀತಿ ನಷ್ಟವಾಗಿಲ್ಲ ಎಂದು ಹೇಳಲಾಗುತ್ತಿದೆ. ಯಾಕಂದ್ರೆ ಚಿತ್ರ ಬಿಡುಗಡೆಗೆ ಮುನ್ನ ಲೈಗರ್ ಚಿತ್ರ ಓಟಿಟಿ ಹಕ್ಕನ್ನ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸಂಸ್ಥೆಗೆ ಬರೋಬ್ಬರಿ 85 ಕೋಟಿ ಮೊತ್ತದವರೆಗೆ ಮಾರಾಟ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಜೊತೆಗೆ ಲೈಗರ್ ಚಿತ್ರದ ಸ್ಯಾಟಲೈಟ್ ಹಕ್ಕನ್ನ ತೆಲುಗು ಜನಪ್ರಿಯ ವಾಹಿನಿ ಸ್ಟಾರ್ ಮಾ ದೊಡ್ಡ ಮೊತ್ತಕ್ಕೇನೇ ಖರೀದಿ ಮಾಡಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಲೈಗರ್ ಸಿನಿಮಾ ಓಟಿಟಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಇದೇ ಸೆಪ್ಟೆಂಬರ್ 30ರಂದು ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ಮಾಜಿ ಬಾಕ್ಸರ್ ಮೈಕ್ ಟೈಸನ್, ರಮ್ಯಾ ಕೃಷ್ಣನ್ ಮುಖ್ಯ ಭೂಮಿಕೆಯ ಲೈಗರ್ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರು ಕೂಡ ಲಾಭದಲ್ಲಿದೆ ಎಂಬುದು ಹಲವರ ಅಚ್ಚರಿಗೆ ಕಾರಣವಾಗಿದೆ. ಇನ್ನು ಥಿಯೇಟರ್ ನಲ್ಲಿ ಲೈಗರ್ ಚಿತ್ರ ನೋಡದವರು ಮುಂದಿನ ತಿಂಗಳು ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ನೋಡಬಹುದಾಗಿದೆ.

Leave a Reply

%d bloggers like this: