ಒಂದೇ ರಾತ್ರಿಯಲ್ಲಿ ಪ್ರಪಂಚವೇ ತಿರುಗಿ ನೋಡುವಷ್ಟು ಫೇಮಸ್ ಆದ ಹಸು.. ನೋಡಲು ವಿದೇಶಗಳಿಂದ ಬರ್ತಿದ್ದಾರೆ.. ವಿಶೇಷವೇನು ಗೊತ್ತಾ

ಜಗತ್ತು ಒಂದು ವಿಸ್ಮಯ ಲೋಕ. ಇಲ್ಲಿ ನಾವು ಕಂಡಷ್ಟು ಕಾಣುವಷ್ಟು ಸಾಕಷ್ಟು ವಿಚಾರ ಸಂಗತಿಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ತಿಳಿದಷ್ಟು ನೋಡಿದಷ್ಟು ಅನೇಕ ವಿಸ್ಮಯ ವಿಚಾರಗಳು ನಿರಂತರವಾಗಿ ನಮ್ಮ ಸುತ್ತಮುತ್ತಲೂ ಗತಿಸುತ್ತಲೇ ಇರುತ್ತವೆ. ಆದರೆ ಇಂದಿನ ಒತ್ತಡದ ಜೀವನದಲ್ಲಿ ಜಗತ್ತಿನಲ್ಲಿ ನಡೆಯುವಂತಹ ಕುತೂಹಲಕಾರಿ ಅನೇಕ ವಿಚಾರಗಳು ನಮಗೆ ತಿಳಿದಿರುವುದಿಲ್ಲ. ಇದೀಗ ಅಂತಹದ್ದೇ ವಿಸ್ಮಯವೊಂದು ಕಂಡಿರುವುದು ಒಂದು ಕುಬ್ಜ ದೇಹವೊಂದಿರುವ ಹಸು. ಹೌದು ಬಾಂಗ್ಲಾ ದೇಶದ ಚಾರಿ ಎಂಬ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಹಸುವೊಂದು ಕರುವಿಗೆ ನೀಡಿರುತ್ತದೆ. ಈ ಹಸುವು ಎಲ್ಲ ಹಸುಗಳಂತೆ ಸಹಜವಾಗಿಯೇ ಇರುತ್ತದೆ. ಆದರೆ ಈ ಹಸು ಜನ್ಮ ನೀಡಿದ ಕರು ಮಾತ್ರ ತನ್ನ ದೇಹದ ಬೆಳವಣಿಗೆಯಲ್ಲಿ ಅಭಿವೃದ್ದಿ ಕಾಣುವುದಿಲ್ಲ.

ಇದು ಮಾಲೀಕರಿಗೆ ದಿನಕಳೆದಂತೆ ವರ್ಷದ ಬಳಿಕ ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಈ ಕರುವು ವರ್ಷಗಳು ಕಳೆದರು ಬೆಳೆಯುವುದೇ ಇಲ್ಲ. ತದ ನಂತರ ಈ ಹಸುವಿನ ಮಾಲೀಕರು ಪಶು ವೈದ್ಯರನ್ನ ಭೇಟಿ ಮಾಡಿ ಈ ಕುಬ್ಜ ದೇಹವೊಂದಿರುವ ಹಸುವನ್ನು ಪರೀಕ್ಷೆ ಮಾಡಿಸಿದ್ದಾರೆ. ವೈದ್ಯರು ಹಸು ಆರೋಗ್ಯಕರವಾಗಿದೆ ಎಂದು ತಿಳಿಸುತ್ತಾರೆ. ಇದಾದ ಬಳಿಕ ಮಾಲೀಕರು ಕೂಡ ನಿಶ್ಚಿಂತೆ ಇರುತ್ತಾರೆ. ಆದರೆ ಮುಂದಿನ ದಿನಗಳಲ್ಲಿಯೂ ಕೂಡ ಕುಬ್ಜವಾಗಿಯೇ ಉಳಿದು ಬಿಡುತ್ತದೆ. ಈ ಅತ್ಯಂತ ಕುಬ್ಜ ದೇಹವೊಂದಿರುವ ಹಸುವಿನ ವಿಚಾರ ತಿಳಿದ ಗ್ರಾಮಸ್ಥರು ಈ ಹಸುವನ್ನು ದೈವ ಸ್ವರೂಪ ಎಂದು ಪೂಜ್ಯ ಭಾವನೆಯಲ್ಲಿ ಕಾಣುತ್ತಿದ್ದಾರೆ.

ಈ ವಿಚಾರವು ಕಿವಿಯಿಂದ ಕಿವಿಗೆ ಬಾಯಿಂದ ಬಾಯಿಗೆ ಹರಡಿ ಸುತ್ತಮುತ್ತಲಿನ ಗ್ರಾಮಸ್ಥರು ಬಂದು ದರ್ಶನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ದೇಶ ವಿದೇಶಗಳಿಂದ ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಜನರು ಈ ಕುಬ್ಜ ದೇಹ ಒಂದಿರುವ ಕರುವನ್ನು ನೋಡಲು ಬಂದಿದ್ದಾರಂತೆ. ಈಗಾಗಲೇ ಜಗತ್ತಿನ ಅತ್ಯಂತ ಹಸು ಎಂದು ಗಿನ್ನಿಸ್ ರೆಕಾರ್ಡ್ ಮಾಡಿರುವ ಹಸುವಿಗಿಂತಲೂ ಇದು ಹತ್ತು ಸೆಂಟಿ ಮೀಟರ್ ಚಿಕ್ಕದಾಗಿದ್ದು, ಇದು ಐವತ್ತಾರು ಸೆಂಟಿ ಮೀಟರ್ ಎತ್ತರವೊಂದಿದ್ದು, ಕೇವಲ ಇಪ್ಪತ್ತಾರು ಕೆ.ಜಿಯಷ್ಟು ತೂಕವನ್ನೊಂದಿದೆ. ಈ ಹಸುವಿನ ಚಿತ್ರವು ಸೋಶಿಯಲ್ ಮೀಡಿಯಾದಲ್ಲಿ ಇದೀಗ ಭಾರಿ ವೈರಲ್ ಆಗಿದೆ.ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಜಗತ್ತಿನಾದ್ಯಂತ ಭಾರಿ ಸಂಖ್ಯೆಯಲ್ಲಿ ಶೇರ್ ಆಗಿದೆ.

Leave a Reply

%d bloggers like this: