ಒಂದೇ ಕುಟುಂಬದ ಅಣ್ಣ ತಮ್ಮಂದಿರನ್ನು ಪ್ರೀತಿಸಿದ ಇಬ್ಬರು ಬಾಲಿವುಡ್ ಪ್ರಸಿದ್ಧ ನಟಿಯರು

ಹಿಂದಿ ಕಿರುತೆರೆಯ ಜನಪ್ರಿಯ ಶೋ ಆಗಿರುವ ಕಾಫಿ ವಿತ್ ಕರಣ್ ಜೋಹಾರ್ ನಲ್ಲಿ ಬಾಲಿವುಡ್ ಖ್ಯಾತ ನಟನ ಮಗಳು ಮತ್ತು ಬಾಲಿವುಡ್ ನ ಸುಪ್ರಸಿದ್ದ ನಟಿಯ ಮಕ್ಕಳಿಬ್ಬರ ಗುಟ್ಟೊಂದು ಬಯಲಾಗಿದೆ. ಹೌದು ಕರಣ್ ಜೋಹಾರ್ ನಿರೂಪಣೆ ಮಾಡುವ ಈ ಕಾರ್ಯಕ್ರಮದಲ್ಲಿ ಈ ಬಾಲಿವುಡ್ ಸೆಲೆಬ್ರಿಟಿಗಳ ಕೆಲವು ಇಂಟ್ರೆಸ್ಟಿಂಗ್ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತವೆ. ಅದರಂತೆ ಇತ್ತೀಚೆಗೆ ಈ ಕಾಫಿ ವಿಥ್ ಕರಣ್ ಜೋಹಾರ್ ಕಾರ್ಯಕ್ರಮದಲ್ಲಿ ಹಿಂದಿ ಚಿತ್ರರಂಗದ ಸುಪ್ರಸಿದ್ದ ನಟಿಯಾಗಿರುವ ಶ್ರೀ ದೇವಿ ಮಗಳು ಜಾಹ್ನವಿ ಕಪೂರ್ ಮತ್ತು ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿಖಾನ್ ಮಗಳು ಸಾರಾ ಅಲಿ ಖಾನ್ ಇಬ್ಬರು ಕೂಡ ಭಾಗವಹಿಸಿದ್ದರು. ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ಮೊದಲಿನಂದಾನೂ ಪರಸ್ಪರ ಅತ್ಯಂತ ಆಪ್ತ ಗೆಳತಿಯರು.

ಸದ್ಯಕ್ಕೆ ಈ ಇಬ್ಬರು ಗೆಳತಿಯರು ಕೂಡ ಬಾಲಿವುಡ್ ನಲ್ಲಿ ನಟಿಯರಾಗಿ ಸಖತ್ ಶೈನ್ ಆಗುತ್ತಿದ್ದಾರೆ. ಹೀಗಾಗಿ ಕಾಫಿ ವಿಥ್ ಕರಣ್ ಜೋಹಾರ್ ಕಾರ್ಯಕ್ರಮದಲ್ಲಿ ಈ ಇಬ್ಬರನ್ನ ಕರೆಸಿ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹೊರ ತೆಗೆಯಲಾಗಿದೆ. ಕರಣ್ ಜೋಹಾರ್ ಅವರು ಹಾಗೇ ಮಾತನಾಡುತ್ತಾ ಇಬ್ಬರಿಗೂ ಒಂದು ಅಚ್ಚರಿ ಪ್ರಶ್ನೆ ಕೇಳಿದ್ದಾರೆ. ನೀವಿಬ್ರು ಒಂದೇ ಕುಟುಂಬದ ಅಣ್ಣ ತಮ್ಮಂದಿರನ್ನ ಪ್ರೀತಿಸುತ್ತಿದ್ರಿ ನಿಜ ಅಲ್ವಾ ಎಂದು ಕೇಳಿದ್ದಾರೆ. ಈ ಪ್ರಶ್ನೆ ಕೇಳಿದ ಕೂಡಲೇ ಜಾಹ್ನವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಇಬ್ಬರು ಬಿಟ್ಟ ಕಣ್ಣು ಬಿಟ್ಟಂತೇ ಈ ವಿಷಯ ನಿಮಗೆ ಹೇಗೆ ಗೊತ್ತು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆಗ ಕರಣ್ ಜೋಹಾರ್ ಅವರು ಅವರಿಬ್ಫರು ವಾಸ ಮಾಡುತ್ತಿದ್ದದ್ದು ನಮ್ಮ ಬಿಲ್ಡಿಂಗ್ ನಲ್ಲೇ ಎಂದು ಉತ್ತರ ನೀಡಿದ್ದಾರೆ. ಈ ಮಾತನ್ನ ಕೇಳಿ ಜಾಹ್ನವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಇಬ್ಬರು ಕೂಡ ಒಂದು ಕ್ಷಣ ಅಚ್ಚರಿಗೆ ಒಳಗಾಗಿದ್ರು. ಇನ್ನು ಸಾರಾ ಅಲಿ ಖಾನ್ ವೀರ್ ಪಹರಿಯಾ ಎಂಬ ಹುಡುಗನೊಟ್ಟಿಗೆ ಡೇಟಿಂಗ್ ನಡೆಸಿದ್ದರಂತೆ. ಅದೇ ರೀತಿ ಜಾಹ್ನವಿ ಕಪೂರ್ ಕೂಡ ಶಿಖರ್ ಪಹರಿಯಾ ಎಂಬ ಹುಡುಗನೊಟ್ಟಿಗೇ ಲವ್ ಅಲ್ಲಿ ಇದ್ದರಂತೆ. ಅಂದ್ಹಾಗೇ ಈ ವೀರ್ ಮತ್ತು ಶಿಖರ್ ಪಹರಿಯಾ ಇಬ್ಬರು ಮಹಾರಾಷ್ಟ್ರದ ಮಾಜಿ ಮುಖ್ಯ ಮಂತ್ರಿಗಳಾದ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಕ್ಕಳಾಗಿದ್ದಾರೆ. ಇದೇ ವಿಚಾರವನ್ನು ಕರಣ್ ಜೋಹಾರ್ ಅವರು ತಮ್ಮ ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದರು.