ಒಂದೇ ದಿನಕ್ಕೆ ಲಾಲ್ ಸಿಂಗ್ ಚಡ್ಡಾ ಚಿತ್ರದ ಸಾವಿರಾರು ಶೋಗಳು ರದ್ದು

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಆಗಿದ್ದ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ಕಲೆಕ್ಷನ್ ಕಂಡು ಶಾಕ್ ಆಗಿದೆ. ಹೌದು ಬಾಲಿವುಡ್ ಸಿನಿಮಾಗಳು ಇತ್ತೀಚೆಗೆ ಹೇಳಿಕೊಳ್ಳುವಂತಹ ಯಶಸ್ಸನ್ನು ಗಳಿಸುತ್ತಿಲ್ಲ. ರಿಲೀಸ್ ಆದ ಯಾವ ಸಿನಿಮಾಗಳು ಕೂಡ ಸಿನಿ ಪ್ರೇಕ್ಷಕರ ಮೋಡಿ ಮಾಡುತ್ತಿಲ್ಲ. ಸಿನಿಮಾದ ಕಲೆಕ್ಷನ್ ವಿಚಾರದಲ್ಲಿ ನಮ್ಮ ಸೌತ್ ಸಿನಿಮಾಗಳಷ್ಟು ಸೌಂಡ್ ಮಾಡುತ್ತಿಲ್ಲ. ಅದರಂತೆ ಇದೀಗ ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತ ಕರೆಸಿಕೊಳ್ಳುವ ನಟ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರ ಕೂಡ ಪ್ರೇಕ್ಷಕರನ್ನ ಮೋಡಿ ಮಾಡಲು ಸೋತಿದೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಇದೇ ಆಗಸ್ಟ್ 11ರಂದು ರಿಲೀಸ್ ಆಗಿದೆ. ಸಿನಿಮಾ ರಿಲೀಸ್ ಗೂ ಮೊದಲು ಭಾರಿ ನಿರೀಕ್ಷೆ ಹುಟ್ಟು ಹಾಕಿತ್ತು. ಆದರೆ ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದರ ಹಿನ್ನೆಲೆಯಲ್ಲಿ ಇದೀಗ ಲಾಲ್ ಸಿಂಗ್ ಚಡ್ಡಾ ಸಿನಿಮಾ ಥಿಯೇಟರ್ ಗಳಿಂದ ಎತ್ತಂಗಡಿ ಅಗುತ್ತಿದೆ. ಈಗಾಗಲೇ ಲಾಲ್ ಸಿಂಗ್ ಚಡ್ಡಾ ಚಿತ್ರದ ಬರೋಬ್ಬರಿ 1300 ಶೋಗಳು ಕ್ಯಾನ್ಸಲ್ ಆಗಿವೆ. ಇದು ನಟ ಅಮೀರ್ ಖಾನ್ ಅವರಿಗೆ ಬಾರಿ ಹೊಡೆತ ಎಂದು ಹೇಳಬಹುದು. 180ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 12 ಕೋಟಿ. ಹೀಗಾಗಿ ಚಿತ್ರತಂಡ ಕಂಗೆಟ್ಟಿದ್ದರು ಕೂಡ ವಾರಾಂತ್ಯದ ದಿನಗಳಲ್ಲಿ ಪಿಕಪ್ ಆಗಬಹುದು ಎಂಬ ಭರವಸೆಯನ್ನ ಇಟ್ಟುಕೊಂಡಿದೆ. ಅಮೀರ್ ಖಾನ್ ಸಿನಿಮಾಗಳು ಮೊದಲ ವಾರದಲ್ಲಿಯೇ ಬಂಡವಾಳ ಹಿಂತೆಗೆದು ಲಾಭವನ್ನು ಕೂಡ ತಂದು ಕೊಡುತ್ತಿದ್ದವು. ಒಂದು ವೇಳೆ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರು ಸಹ ಬಾಕ್ಸ್ ಆಫೀಸ್ ನಲ್ಲಿ ಗಳಿಕೆಗೇನೂ ಮೋಸ ಆಗುತ್ತಿರಲಿಲ್ಲ.

ಆದರೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಯಾಕೋ ಅಮೀರ್ ಖಾನ್ ಅವರಿಗೆ ಕೈ ಕೊಟ್ಟಿದೆ. ಈ ಚಿತ್ರಕ್ಕೆ ಅಮೀರ್ ಖಾನ್ ಕೂಡ ಬಂಡವಾಳ ಹೂಡಿಕೆ ಮಾಡಿದ್ದರಿಂದ ಕೊಂಚ ಬೇಸರವಾಗಿದ್ದಾರೆ ಎಂದು ತಿಳಿದು ಬಂದಿದೆ. ಅಮೀರ್ ಖಾನ್ ಬಾರತೀಯ ಚಿತ್ರರಂಗದ ಪ್ರಖ್ಯಾತ ನಟ ಅವರಿಗೆ ಭಾರತ ಮಾತ್ರ ಅಲ್ಲದೆ ಹೊರ ದೇಶಗಳಲ್ಲಿ ಕೂಡ ಅಪಾರ ಅಭಿಮಾನಿ ಬಳಗವಿದೆ. ಹಾಗಾಗಿಯೇ ಅಮೀರ್ ಖಾನ್ ಅವರ ಸಿನಿಮಾಗಳು ಭಾರಿ ಬಿಗ್ ಬಜೆಟ್ ಸಿನಿಮಾಗಳಾಗಿರುತ್ತವೆ. ಇನ್ನು ಈ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಅಮೀರ್ ಖಾನ್ ಅವರು ಸಿಖ್ ಮುಗ್ದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರಿಗೆ ಜೋಡಿಯಾಗಿ ಕರೀನಾ ಕಪೂರ್ ಬಣ್ಣ ಹಚ್ಚಿದ್ದು, ಅದ್ವೈತ್ ಚಂದನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

Leave a Reply

%d bloggers like this: