ಒಂದೇ ದಿನಕ್ಕೆ ಗಳಿಕೆಯಲ್ಲಿ 350% ಏರಿಕೆ, ಕಾಂತಾರ ಚಿತ್ರದ 3 ದಿನದ ಒಟ್ಟು ಗಳಿಕೆ ಎಷ್ಟು  

ಬಾಕ್ಸ್ ಆಫೀಸ್ ಧೂಳ್ ಮಾಡುತ್ತಿರುವ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಮೂರೇ ದಿನದಲ್ಲಿ ಕೋಟಿ ಕೋಟಿ ಬಾಚುತ್ತಿದೆ. ಕಾಂತಾರ ಈ ಟೈಟಲ್ ಕೇಳಿ ಗೊಂದಲ ಆದವರೇ ಹೆಚ್ಚು. ಕಾಂತಾರ ಅಂದ್ರೇನು. ರಿಷಭ್ ಶೆಟ್ಟಿ ಅವರ ಈ ಕಾಂತಾರ ಸಿನಿಮಾದ ಟ್ರೇಲರ್ ಮತ್ತು ಸಿಂಗಾರ ಸಿರಿಯೇ ಹಾಡನ್ನ ನೋಡಿದವರಿಗೆ ಇದು ಸಾಧಾರಣ ಲವ್ ಸ್ಟೋರಿ ಅಂತಾನೇ ಅನ್ಕೊಂಡಿದ್ರು. ಆದ್ರೆ ಯಾವಾಗ ಸೆಪ್ಟೆಂಬರ್ 29ರ ರಾತ್ರಿ ಪ್ರೀಮಿಯರ್ ಶೋ ಆರಂಭ ಆಯ್ತೋ, ಇಡೀ ಸಿನಿಮಾ ಸಿನಿ ಪ್ರೇಕ್ಷಕರಿಗೆ ಅಬ್ಬಾ ಅನಿಸುವಂತೆ ಅನುಭವ ನೀಡಿತು. ಕಾಂತಾರ ಸಿನಿಮಾ ನಮ್ಮ ದಕ್ಷಿಣ ಕನ್ನಡ ಮಣ್ಣಿನ ಸಂಸ್ಕೃತಿಯ ಕಥೆಯನ್ನ ಹೊಂದಿರೋ ಸಿನಿಮಾ. ಕಾಂತಾರ ಸಿನಿಮಾದಲ್ಲಿ ಕಾಡಿನಲ್ಲಿರೋ ಒಂದು ಸಮುದಾಯದ ಜನ ಅಲ್ಲಿನ ನೆಲದೊಟ್ಟಿಗೆ ಬೆಸೆದುಕೊಂಡಿರೋ ಭಾಂಧವ್ಯ ಮತ್ತು ಅರಣ್ಯ ಇಲಾಖೆಯ ನಡುವೆ ನಡೆಯುವ ಕಥೆ ಸಾಗುತ್ತಾ ಅಲ್ಲಿನ ದೈವರಾಧನೆ ಅಲ್ಲಿನ ಸಂಸ್ಕೃತಿಯತ್ತ ಹೊರಳಿದಾಗ ಇಡೀ ಸಿನಿಮಾದ ತೂಕವೇ ಮತ್ತೊಂದು ಮಜಲಿಗೆ ಹೊರಳುತ್ತದೆ.

ಕಾಂತಾರ ಸಿನಿಮಾದ ಮೊದಲರ್ಧ ಕಾಡಿನ ಜನರ ಸಂಸ್ಕೃತಿ, ಅವರ ಬದುಕು ಜನ ಜೀವನದಲ್ಲಿ ಹಾಸ್ಯದ ಮಿಶ್ರಣದಲ್ಲಿ ಸಾಗುತ್ತದೆ. ದ್ವಿತೀಯಾರ್ಧದಲ್ಲಿ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ಅಮೋಘ ನಟನೆಗೆ ಅವರು ದೈವ ಪಾತ್ರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರೋ ಪರಿ ನಿಜಕ್ಕೂ ಕೂಡ ಸಿನಿ ಪ್ರೇಕ್ಷಕರನ್ನ ಅಚ್ಚರಿ ಮತ್ತು ನಿಬ್ಬೆರಗಾಗಿಸುತ್ತದೆ. ಸಿನಿಮಾ. ನೋಡಿದ ಪ್ರತಿಯೊಬ್ಬರು ಕೂಡ ಒಂದೆಡೆ ಕಾಂತಾರ ಸಿನಿಮಾವನ್ನ ಮೆಚ್ಚುಗೆ ವ್ಯಕ್ತಪಡಸಿದ್ರೆ, ಇನ್ನೊಂದು ಕಡೆ ರಿಷಬ್ ಶೆಟ್ಟಿ ಅವರ ನಟನೆಗೆ ಫಿಧಾ ಆಗಿ ಜೈ ಹೋ ಹೇಳಿದ್ದಾರೆ. ಯಾವಾಗ ಸಿನಿಮಾ ಬಗ್ಗೆ ಎಲ್ಲೆಡೆ ಅಭೂತ ಪೂರ್ವ ಪ್ರತಿಕ್ರಿಯೆ ಕೇಳಿ ಬಂತೋ ಆಗ ಮಾರನೇ ದಿನ ಅಂದರೆ ಸೆಪ್ಟೆಂಬರ್30 ರಿಲೀಸ್ ಆದ ದಿನವೇ ಎಲ್ಲಾ ಕಡೆ ಚಿತ್ರಮಂದಿರ ಹೌಸ್ ಫುಲ್ ಆಗುತ್ತದೆ. ಸಿನಿಮಾ ನೋಡಿ ಹೊರ ಬಂದ ಪ್ರೇಕ್ಷಕರು ರಿಷಬ್ ಅವರ ಕಲ್ಪನೆ, ನಟನೆಗೆ ಫುಲ್ ಮಾರ್ಕ್ಸ್ ನೀಡ್ತಾರೆ.

ಅಲ್ಲಿನ ಪರಿಸರವನ್ನ ಸೊಗಸಾಗಿ ಸೆರೆದಿಡಿದಿರೋ ಅರವಿಂದ್ ಕಶ್ಯಪ್ ಅವರ ಕ್ಯಾಮೆರಾ ಕೈ ಚಳಕ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಪ್ರೇಕ್ಷಕರಿಗೆ ಮೋಡಿ ಮಾಡಿದೆ. ಸೆಪ್ಟೆಂಬರ್30 ಶುಕ್ರವಾರ ರಿಲೀಸ್ ಆದ ಕಾಂತಾರ ಸಿನಿಮಾ ಮೊದಲ ದಿನವೇ ಐದು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ವಾರಾಂತ್ಯದ ದಿನ ಅಂದರೆ ಶನಿವಾರ 7 ಕೋಟಿ ಮೀರಿದೆ ಎಂದು ಮಾಹಿತಿ ಹೊರ ಬಿದ್ದಿದೆ. ಅದೇ ರೀತಿಯಾಗಿ ಭಾನುವಾರ ಸೇರಿದಂತೆ ಒಟ್ಟು ಮೂರೇ ದಿನದಲ್ಲಿ ಕಾಂತಾರ ಸಿನಿಮಾ ಬರೋಬ್ಬರಿ 22.3 ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ರವಿವಾರ ಒಂದೇ ದಿನ ಹತ್ತು ಕೋಟಿಗೂ ಹೆಚ್ಚು ಗಳಿಸಿದ್ದು ಇದು ರಿಷಬ್ ಅವರ ಬದುಕಿನಲ್ಲೇ ದೊಡ್ಡ ಗಳಿಕೆಯಾಗಿದೆ. ಒಟ್ಟಾರೆಯಾಗಿ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ಅವರ ನಿರ್ಮಾಣ, ರಿಷಬ್ ಶೆಟ್ಟಿ ಅವರ ನಿರ್ದೇಶನ, ನಟನೆಯಲ್ಲಿ ಮೂಡಿ ಕಾಂತಾರ ಸಿನಿಮಾ ರಿಲೀಸ್ ಆದ ಎಲ್ಲಾ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಟಿ ಸಪ್ತಮಿಗೌಡ ಅವರ ನಟನೆ ಉತ್ತಮವಾಗಿದ್ದು, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರೋ ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ, ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

Leave a Reply

%d bloggers like this: