ಒಂದೇ ಚಿತ್ರಕ್ಕೆ ಹಲವಾರು ವರ್ಷ ಸಮಯ ತೆಗೆದುಕೊಳ್ಳುತ್ತಿದ್ದ ಕಿಚ್ಚ ಸುದೀಪ್ ಅವರಿಂದ ಈಗ ಹೊಸ ಪ್ಲ್ಯಾನ್ ತಯಾರು

ಸ್ಯಾಂಡಲ್ ವುಡ್ ಬಾದ್-ಶಾ ಕಿಚ್ಚ ಸುದೀಪ್ ಅವರು ನಿನ್ನೆ ತಾನೇ ಸೆಪ್ಟೆಂಬರ್ 2ರಂದು ತಮ್ಮ ಜನ್ಮದಿನವನ್ನ ಅಭಿಮಾನಿಗಳೊಟ್ಟಿಗೆ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ದೂರದ ಊರಿಗಳಿಂದ ಮತ್ತು ನಾಡಿನಾದ್ಯಂತ ಇರೋ ಕಿಚ್ಚನ ಅಪಾರ ಅಭಿಮಾನಿಗಳು ರಾತ್ರಿಯಿಂದಾನೇ ಸೇರಿ ತಮ್ಮ ನೆಚ್ಚಿನ ನಟನಿಗೆ ಜೈಕಾರ ಹಾಕಿ ಬರ್ಥ್ ಡೇ ವಿಶ್ ಮಾಡಿದ್ದಾರೆ. ಸುದೀಪ್ ಅವರು ಕೂಡ ಮಧ್ಯಾರಾತ್ರಿಯಿಂದಾನೇ ಬಂದಿರೋ ಅಭಿಮಾನಿಗಳನ್ನ ಭೇಟಿ ಮಾಡಿ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಇದೇ ವಿಕ್ರಾಂತ್ ರೋಣ ಸಿನಿಮಾದ ಯಶಸ್ಸಿನಲ್ಲಿರೋ ಸುದೀಪ್ ಅವರು ಈ ವರ್ಷ ಹೊಸದೊಂದು ನಿರ್ಣಯ ಮಾಡೋ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ವೊಂದನ್ನ ನೀಡಿದ್ದಾರೆ. ಹೌದು ಕಿಚ್ಚ ಸುದೀಪ್ ಅವರು ಇನ್ಮುಂದೆ ಆರು ತಿಂಗಳಿಗೊಮ್ಮೆ ಒಂದು ಸಿನಿಮಾ ರಿಲೀಸ್ ಆಗಬೇಕು ಆ ರೀತಿಯಾಗಿ ಯೋಜನೆ ಮಾಡಿಕೊಂಡಿದ್ದಾರಂತೆ.

ಈ ರೀತಿ ಹೇಳೋ ಮೂಲಕ ಸುದೀಪ್ ಅವರು ತಮಗೆ ಇರೋ ಸಾಲು ಸಾಲು ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕಿಚ್ಚ ಸುದೀಪ್ ಅವರು ನಿರ್ದೇಶಕರೂ ಆಗಿರೋದ್ರಿಂದ ನಟನೆಯ ಜೊತೆ ಜೊತೆಗೆ ತಾವೂ ಕೂಡ ನಿರ್ದೇಶನ ಮಾಡೋದಕ್ಕೆ ಇಳಿತಾರಾ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಅದೇ ರೀತಿಯಾಗಿ ನಟ ಕಿಚ್ಚ ಸುದೀಪ್ ಅವರು ತಮಗೆ ಹರಸಿ ಬರುವಂತಹ ಎಲ್ಲಾ ಉತ್ತಮ ಕಥೆಗಳನ್ನ ಆಯ್ಕೆ ಮಾಡಿಕೊಂಡು ಈ ವರ್ಷದಿಂದ ಬರೋ ಎಲ್ಲಾ ಸಿನಿಮಾಗಳನ್ನ ಆದಷ್ಟು ಬೇಗ ಮುಗಿಸಿ ಬೇಗ ಬೇಗ ಕೆಲಸ ಮಾಡುವ ನಿಯಮವನ್ನ ರೂಢಿಸಿಕೊಳ್ಳಲಿದ್ದಾರೆ. ಕಿಚ್ಚನ ಸಿನಿಮಾಗಳು ವರ್ಷಕ್ಕೆ ಎರಡು ಬಂದ್ರೆ ಕನ್ನಡ ಚಿತ್ರರಂಗದ ಸಿನಿ ಪ್ರೇಕ್ಷಕರಿಗೆ ಮಸ್ತ್ ಮಸ್ತ್ ಮನರಂಜನೆ ಸಿಗೋದ್ರಲ್ಲಿ ಅನುಮಾನವೇ ಇರೊಲ್ಲ ಅಂತ ಹೇಳ್ಬೋದು. ಇನ್ನು ತಮ್ಮ ಹುಟ್ಟು ಹಬ್ಬದಂದೇ ಕಿಚ್ಚ ಸುದೀಪ್ ಅವರು ಇನ್ಮುಂದೆ ವರ್ಷಕ್ಕೆ ಎರಡು ಸಿನಿಮಾ ಬಿಡುಗಡೆ ಆಗುವ ಥರ ಪ್ಲಾನ್ ಮಾಡುತ್ತೇನೆ ಎಂಬ ಹೇಳಿಕೆ ಅವರ ಅಭಿಮಾನಿಗಳಿಗೆ ಸಖತ್ ಖುಷಿ ತಂದಿದೆ.