ಒಂದೇ ಚಿತ್ರಕ್ಕೆ ಬರೋಬ್ಬರಿ 800 ಕೋಟಿ ಸಂಭಾವನೆ ಪಡೆದ ಸ್ಟಾರ್ ನಟ

ಜಗತ್ತಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಿಗೆ ಈ ಸೂಪರ್ ಸ್ಟಾರ್ ನಟ ಹುಬ್ಬೇರಿಸುವಂತೆ ಮಾಡಿದ್ದಾರೆ. ಹಾಲಿವುಡ್ ಈ ಸ್ಟಾರ್ ನಟ ಎಲ್ಲರ ಹುಬ್ಬೇರುವಂತೆ ಮಾಡಲು ಏನು ಕಾರಣ ಅಂತೀರಾ. ಕಾರಣ ಕೇಳಿದ್ರೇ ನೀವು ನಿಜಕ್ಕೂ ಶಾಕ್ ಆಗ್ತೀರಾ. ಯಾಕಂದ್ರೆ ಈ ನಟನ ಸಂಭಾವನೆ ಕೇಳಿ ಭಾರತೀಯ ಚಿತ್ರರಂಗದ ದಿಗ್ಗಜ ನಟರೇ ಶಾಕ್ ಆಗಿದ್ದಾರೆ. ಹಾಗಾದ್ರೇ ಆ ಹಾಲಿವುಡ್ ಸ್ಟಾರ್ ನಟ ಯಾರು‌. ಆ ನಟ ಪಡೆಯುವ ಸಂಭಾವನೆ ಎಷ್ಟು ಅಂತ ನಿಮಗೆ ಈಗ ಕುತೂಹಲ ಮೂಡಿರಬೇಕು. ಹೌದು ಸಿನಿಮಾ ಒಂದು ಬಣ್ಣದ ಜಗತ್ತು. ಈ ಸಿನಿಮಾಲೋಕ ಎಲ್ಲಾ ವರ್ಗದ ಜನರನ್ನ ಬಹುಬೇಗ ಆಕರ್ಷಣೆ ಮಾಡುತ್ತದೆ. ಈ ಸಿನಿಮಾ ಕ್ಷೇತ್ರದಲ್ಲಿ ದುಡಿಯುವ ಹಣವನ್ನು ನೀವೇನಾದ್ರು ಲೆಕ್ಕಾಚಾರ ಹಾಕಿದ್ರೆ ನಿಜಕ್ಕೂ ಒಮ್ಮೆ ಅಚ್ಚರಿ ಆಗುತ್ತದೆ.

ಹಾಗಂತ ಎಲ್ಲಾ ಭಾಷೆಯ ಸಿನಿಮಾ ಕ್ಷೇತ್ರ ನೂರು, ಸಾವಿರಾರು ಕೋಟಿ ಬಾಚುವುದಿಲ್ಲ. ನಮ್ಮ ಭಾರತೀಯ ಚಿತ್ರರಂಗ ಅಬ್ಬಬ್ಬಾ ಅಂದರು ಕೂಡ ಸಾವಿರ , ಒಂದುವರೆ ಸಾವಿರ ಕೋಟಿ ಗಡಿಯೊಳಗೆ ಆಟ ಆಡಿದ್ರೇ, ಈ ಹಾಲಿವುಡ್ ಸಿನಿಮಾಗಳು ಸಾವಿರ, ಲಕ್ಷ ಡಾಲರ್ ಗಳಲ್ಲಿ ಲೆಕ್ಕಾಚಾರ ಹಾಕುತ್ತವೆ. ನಮ್ಮ ಭಾರತೀಯ ಸಿನಿಮಾಗಳು ಒಟ್ಟಾರೆ ಗಳಿಕೆ ಮಾಡುವ ಹಣವನ್ನ ಹಾಲಿವುಡ್ ನಲ್ಲಿ ಒಬ್ಬ ಸ್ಟಾರ್ ನಟ ತನ್ನ ಸಂಭಾವನೆಯಾಗಿ ಪಡೆಯುತ್ತಾನೆ. ಹೌದು ಆ ಸ್ಟಾರ್ ನಟ ಹಾಲಿವುಡ್ ನಲ್ಲಿ ಭಾರಿ ಜನಪ್ರಿಯತೆ ಹೊಂದಿರುವ ನಟ. ಆ ಸ್ಟಾರ್ ನಟನ ಹೆಸರೇ ಟಾಮ್ ಕ್ರೂಸ್. ನಟ ಟಾಮ್ ಕ್ರೂಸ್ ಅಂದಾಕ್ಷಣ ಮಿಶನ್ ಇಂಪಾಸಿಬಲ್, ಮಿಶನ್ ಗನ್ ಅಂತಹ ಸೂಪರ್ ಹಿಟ್ ಸಿನಿಮಾಗಳು ಕಣ್ಮುಂದೆ ಬರುತ್ತವೆ.

ಜೀವ ದಗ್ಗ್ ಅನಿಸುವಂತಹ ಮೈ ರೋಮಾಂಚನಕಾರಿ ಸಾಹಸ ದೃಶ್ಯಗಳನ್ನ ಮಾಡುವ ಟಾಮ್ ಕ್ರೂಸ್ ಅವರನ್ನ ತೆರೆ ಮೇಲೆ ನೋಡುವುದೆ ಒಂದು ವೈಭವ ಎಂದು ಹೇಳಬಹುದು. ಅಷ್ಟರ ಮಟ್ಟಿಗೆ ಟಾಮ್ ಕ್ರೂಸ್ ಅವರ ಸಾಹಸ ಸಿನಿಮಾಗಳಲ್ಲಿ ಇರುತ್ತದೆ. ಇತ್ತೀಚೆಗೆ ವರ್ಲ್ಡ್ ವೈಡ್ ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡಿದ ಟಾಪ್ ಗನ್ ಮಾವೇರಿಕ್ ಎಂಬ ಸಿನಿಮಾವೊಂದಕ್ಕೆ ನಟ ಟಾಮ್ ಕ್ರೂಸ್ ಅವರು ಬಹಳ ದೊಡ್ಡ ಮೊತ್ತದ ಸಂಭಾವನೆಯನ್ನ ಪಡೆದಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸುತ್ತಿವೆ. ಹೌದು ಈ ಚಿತ್ರದಲ್ಲಿನ ನಟನೆಗಾಗಿ ಟಾಮ್ ಕ್ರೂಸ್ ಅವರು ಬರೋಬ್ಬರಿ ನೂರು ಮಿಲಿಯನ್ ಅಮೇರಿಕನ್ ಡಾಲರ್ ಅಂದರೆ ಅದನ್ನ ಭಾರತದ ರುಪಾಯಿ ಮೌಲ್ಯಕ್ಕೆ ಪರಿವರ್ತಿಸಿದರೆ ಸರಿ ಸುಮಾರು ಎಂಟುನೂರು ಕೋಟಿಯಷ್ಟಾಗುತ್ತದೆ.

ಟಾಮ್ ಕ್ರೂಸ್ ಅವರು ಬರೋಬ್ಬರಿ ಎಂಟುನೂರು ಕೋಟಿ ಸಂಭಾವನೆ ಪಡೆಯುವ ಮೂಲಕ ಹಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದಾರೆ. ನಮ್ಮ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವವರಲ್ಲಿ ಖಾನ್ ಗಳ ದಂಡೇ ಇದೆ. ಆದರೆ ಅವರು ಗರಿಷ್ಟ ಅಂದರು ಕೂಡ ನೂರು ಕೋಟಿವರೆಗೆ ಸಂಭಾವನೆ ಪಡೆಯುತ್ತಾರೆ. ಕಳೆದ ಬಾರಿ ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅವರು ನೂರಿಪ್ಪತ್ತೈದು ಕೋಟಿ ಸಂಭಾವನೆ ಪಡೆಯುವ ಮೂಲಕ ಭಾರಿ ಸುದ್ದಿಯಾಗಿದ್ದರು. ಆದರೆ ಇದೀಗ ಹಾಲಿವುಡ್ ಸ್ಟಾರ್ ನಟ ಟಾಮ್ ಕ್ರೂಸ್ ಎಂಟು ನೂರು ಕೋಟಿ ಸಂಭಾವನೆ ಪಡೆಯುವ ಮೂಲಕ ಭಾರತೀಯ ಚಿತ್ರರಂಗದ ದಿಗ್ಗಜ ನಟರೇ ನಿಬ್ಬೆರಗಾಗುವಂತೆ ಮಾಡಿದ್ದಾರೆ.

Leave a Reply

%d bloggers like this: