ಒಂದೇ ಚಿತ್ರಕ್ಕೆ 10 ಕೋಟಿ ಸಂಭಾವನೆ ಪಡೆದು ದಕ್ಷಿಣ ಭಾರತದ ಎಲ್ಲಾ ನಟಿಯರನ್ನು ಹಿಂದಿಕ್ಕಿದ ಸ್ಟಾರ್ ನಟಿ

ದಕ್ಷಿಣ ಭಾರತೀಯ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಟಿ ನಯನಾತಾರಾ ತಮ್ಮ 75ನೇ ಸಿನಿಮಾಗೆ ಸಹಿ ಮಾಡಿದ್ದಾರೆ. ಈ ಸಿನಿಮಾದ ಮುಖಾಂತರ ನಟಿ ನಯನಾತಾರಾ ಅವರು ತಮ್ಮ ಸಂಭಾವನೆಯನ್ನು ಕೂಡ ಹೆಚ್ಚು ಮಾಡಿಕೊಂಡಿದ್ದಾರಂತೆ. ನಟಿ ನಯನಾತಾರಾ ಅವರು ಇತ್ತೀಚೆಗೆ ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುವ ಮೂಲಕ ಭಾರಿ ಸುದ್ದಿಯಾಗಿದ್ದರು. ಇದೀಗ ತಮ್ಮ ಸಂಭಾವನೆಯನ್ನ ಏರಿಕೆ ಮಾಡಿಕೊಳ್ಳುವ ಮೂಲಕ ಸುದ್ಥಿಯಾಗಿದ್ದಾರೆ. ನಯನಾತಾರಾ ಅವರು ಅದೆಷ್ಟು ಸಂಭಾವನೆ ಪಡೆಯಲಿದ್ದಾರೆ ಅನ್ನೋದನ್ನ ತಿಳಿದುಕೊಳ್ಳುವ ಮೊದಲು ಅವರು ನಡೆದುಬಂದ ಹಾದಿಯನ್ನ ನೋಡುವುದಾದರೆ. ನಟಿ ನಯನಾತಾರಾ ಅವರು 2003ರಲ್ಲಿ ಮಲೆಯಾಳಂ ಭಾಷೆಯ ಮನಸಿನಕ್ಕರೆ ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.

ಅದಾದ ಬಳಿಕ ತಮಿಳು, ತೆಲುಗು ಚಿತ್ರಕ್ಕೆ ಎಂಟ್ರಿ ಕೊಟ್ಟ ನಯನಾತಾರಾ ಅವರಿಗೆ ನೆಲೆ ಸಿಕ್ಕಿದ್ದು ತಮಿಳು ಚಿತ್ರರಂಗದಲ್ಲಿ. ತಮಿಳು ಮತ್ತು ತೆಲುಗಿನ ಸೂಪರ್ ಸ್ಟಾರ್ ನಟರೊಂದಿಗೆ ನಟಿಸುವ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ನಯನಾತಾರ ಅವರು ಕನ್ನಡದಲ್ಲಿ ಉಪೇಂದ್ರ ಅವರೊಟ್ಟಿಗೆ ಸೂಪರ್ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಹೀಗೆ ತಮಿಳು,ತೆಲುಗು, ಮಲೆಯಾಳಂ ಕನ್ನಡ ಸೇರಿದಂತೆ ಇದೀಗ 75ನೇ ಸಿನಿಮಾವರೆಗೆ ನಡೆದು ಬಂದಿದ್ದಾರೆ. ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನ ನೀಡಿರುವ ನಯನಾತಾರಾ ಅವರಿಗೆ ದಕ್ಷಿಣ ಭಾರತದಲ್ಲಿ ಲೇಡಿ ಸೂಪರ್ ಸ್ಟಾರ್ ಅಂತಾನೇ ಕರೆಯುತ್ತಾರೆ.

ಇನ್ನು ಸದ್ಯಕ್ಕೆ ನಯನಾತಾರಾ ಅವರು ಅಟ್ಲೀ ಕುಮಾರ್ ಅವರ ಜವಾನ್ ಚಿತ್ರದಲ್ಲಿ ಶಾರುಖ್ ಖಾನ್ ಅವರಿಗೆ ಜೋಡಿಯಾಗಿದ್ದಾರೆ. ಇದೀಗ ತಮ್ಮ 75ನೇ ಹೊಸ ಚಿತ್ರಕ್ಕೆ ಸಹಿ ಮಾಡಿದ್ದು, ಈ ಚಿತ್ರಕ್ಕಾಗಿ ನಯನಾತಾರಾ ಅವರು ಬರೋಬ್ಬರಿ 10 ಕೋಟಿ ಸಂಭಾವನೆ ಪಡೆಯಲಿದ್ದಾರಂತೆ. ಇನ್ನು ಈ ಹಿಂದೆ ಆರೇಳು ಕೋಟಿ ಸಂಭಾವನೆ ಪಡೆಯುತ್ತಿದ್ದರಂತೆ. ಸದ್ಯಕ್ಕೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ರಶ್ಮಿಕಾ ಮಂದಣ್ಣ ಮತ್ತು ಪೂಜಾ ಹೆಗ್ಡೆ ಐದು ಕೋಟಿ ಸಂಭಾವನೆ ಪಡೆಯುವ ಮೂಲಕ ಭಾರಿ ಪೈಪೋಟಿ ನಡೆಸುತ್ತಿದ್ದಾರೆ. ಇದೀಗ ಲೇಡಿ ಸೂಪರ್ ಸ್ಟಾರ್ ನಯನಾತಾರಾ ಅವರು ಇವರಿಬ್ಬರನ್ನು ಹಿಂದಿಕ್ಕಿ ಬರೋಬ್ಬರಿ ಹತ್ತು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

Leave a Reply

%d bloggers like this: