ಒಂದೇ ಚಿತ್ರದಲ್ಲಿ ಬಾಲಿವುಡ್ ಚಿತ್ರರಂಗದ ಇಬ್ಬರು ಸ್ಟಾರ್ ನಟರು

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಆಗಿರುವ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾ ಇದೀಗ ಎಲ್ಲೆಡೆ ಭಾರಿ ನಿರೀಕ್ಷೆ ಹುಟ್ಟು ಹಾಕುತ್ತಿದೆ. ಇತ್ತೀಚೆಗೆ ತಾನೇ ಅಮೀರ್ ಖಾನ್ ಅವರ ಈ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಬಾಯ್ಕಟ್ ಮಾಡಬೇಕು ಎಂಬ ಅಭಿಯಾನ ಭಾರಿ ಸುದ್ದಿ ಮಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ತಕ್ಷಣ ಸ್ಪಂದಿಸಿದ ಅಮೀರ್ ಖಾನ್ ಬೇಸರ ವ್ಯಕ್ತಪಡಿಸಿ ದಯಮಾಡಿ ಆ ರೀತಿ ನನ್ನ ಸಿನಿಮಾವನ್ನು ಬಹಿಷ್ಕರಿಸಬೇಡಿ. ನಾನು ನನ್ನ ಭಾರತವನ್ನು ಪ್ರೀತಿಸುತ್ತೇನೆ. ನಾನು ಭಾರತೀಯನಲ್ಲವೇ. ನಾನೇಕೆ ನನ್ನ ದೇಶವನ್ನು ತೆಗಳುವ ಕೆಲಸ ಮಾಡುವೆ. ನಾನು ಏನಾದರು ನನ್ನ ಭಾರತ ದೇಶವನ್ನು ಪ್ರೀತಿಸುವುದಿಲ್ಲ ಎಂದು ಹೇಳುತ್ತಿದ್ದರೆ, ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ.

ನನ್ನ ಭಾರತ ದೇಶವನ್ನು ನಾನು ಪ್ರೀತಿಸುತ್ತೇನೆ. ನೀವು ನನ್ನ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಿ ಎಂದು ಹೇಳುವ ಮೂಲಕ ಬಾಯ್ಕಟ್ ವಿಚಾರಕ್ಕೆ ಅಂತ್ಯ ಹಾಡಿದ್ದರು. ಲಾಲ್ ಸಿಂಗ್ ಚಡ್ಡಾ ಸಿನಿಮಾ ಇದೇ ಆಗಸ್ಟ್ 11ರಂದು ಲಾಲ್ ವರ್ಲ್ಡ್ ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತದೆ. ಅದರಂತೆ ಈಗಾಗಲೇ ಚಿತ್ರತಂಡ ಎಲ್ಲೆಡೆ ಪ್ರಮೋಶನ ಕಾರ್ಯದಲ್ಲಿ ತೊಡಗಿಕೊಂಡಿದೆ. ಇನ್ನು ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಕಿಂಗ್ ಖಾನ್ ಶಾರುಖ್ ಖಾನ್ ಅವರು ಕೂಡ ನಟಿಸಿದ್ದಾರೆ ಅನ್ನುವ ಮಾತಿತ್ತು. ಆದರೆ ಆ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಎಲ್ಲಿಯೂ ಕೂಡ ಮಾಹಿತಿ ಬಿಟ್ಟು ಕೊಟ್ಟಿರಲಿಲ್ಲ. ಈ ವಿಚಾರವಾಗಿ ಅಮೀರ್ ಖಾನ್ ಅವರು ಕೆನಡಾ ದೇಶದ ಸಿನಿಮಾ ಪತ್ರಕರ್ತ ಅಲೆಕ್ಸಾಂಡ್ರಾ ಅವರೊಟ್ಟಿಗೆ ಮಾತನಾಡುತ್ತಾ ಶಾರುಖ್ ಖಾನ್ ಅವರು ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಶಾರುಖ್ ಖಾನ್ ಎಲ್ವಿಸ್ ಅಮೇರಿಕಾವನ್ನು ಪ್ರತಿನಿಧಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಒಂದು ಪಾತ್ರಕ್ಕೆ ಇಂಡಿಯನ್ ಸಿನಿಮಾ ರಂಗದ ಒಬ್ಬ ಐಕಾನ್ ಸ್ಟಾರ್ ನಟ ಬೇಕಾಗಿದ್ದರಿಂದ ನಾನು ಶಾರುಖ್ ಖಾನ್ ಅವರಿಗೆ ಮೊದಲಿಗೆ ಭೇಟಿಯಾಗಿ ಈ ಪಾತ್ರದಲ್ಲಿ ನೀವು ನಟಿಸಿದರೆ ಚೆನ್ನಾಗಿರುತ್ತದೆ ಎಂದು ಹೇಳಿದಾಗ ಅವರು ಸಂತೋಷದಿಂದ ಒಪ್ಪಿಕೊಂಡರು ಎಂದು ತಿಳಿಸಿದರು. ಇನ್ನು ಈ ಲಾಲ್ ಸಿಂಗ್ ಚಡ್ಡಾ ಸಿನಿಮಾ ಹಾಲಿವುಡ್ ಸ್ಟಾರ್ ನಟ ಟಾಮ್ ಹ್ಯಾಂಕ್ಸ್ ಅಭಿನಯಿಸಿದ ಇಂಗ್ಲೀಷ್ ಭಾಷೆಯ ಫಾರೆಸ್ಟ್ ಗಂಪ್ ಸಿನಿಮಾದ ರೀಮೇಕ್ ಆಗಿದೆ. ಇದೀಗ ಈ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಪ್ರಚಾರ ಜೋರಾಗಿದೆ. ಆದರೂ ಕೂಡ ಎಲ್ಲಿಯೂ ಸಹ ಶಾರುಖ್ ಖಾನ್ ಪಾತ್ರದ ಬಗ್ಗೆ ಹೆಚ್ಚು ಮಾತನಾಡಿಲ್ಲ.

ಶಾರುಖ್ ಖಾನ್ ಅಭಿಮಾನಿಗಳು ಜೀ಼ರೋ ಚಿತ್ರದ ನಂತರ ಅವರನ್ನ ಬೆಳ್ಳಿ ಪರದೆಯ ಮೇಲೆ ಕಣ್ತುಂಬಿಕೊಂಡಿಲ್ಲ. ಅಟ್ಲೀ ಕುಮಾರ್ ನಿರ್ದೇಶನ ಮಾಡುತ್ತಿರುವ ಜವಾನ್ ಸಿನಿಮಾ ಜೊತೆಗೆ ಪಠಾಣ್ ಅನ್ನೋ ಸಿನಿಮಾ ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಸಿನಿಮಾಗಳಾಗಿವೆ. ಈ ಚಿತ್ರಗಳು ತೆರೆಗೆ ಬರುವ ಮುನ್ನ ಶಾರುಖ್ ಖಾನ್ ಅವರನ್ನ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕಣ್ತುಂಬಿಕೊಳ್ಳಬಹುದು. ಇನ್ನು ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ವಯಾಕಾಮ್ 18 ಪ್ರೊಡಕ್ಷನ್ಸ್ ಅಡಿಯಲ್ಲಿ ಅಮೀರ್ ಖಾನ್ ಅವರು ಕೂಡ ಕೈ ಜೋಡಿಸಿ ಬರೋಬ್ಬರಿ 180 ಕೋಟಿ ವೆಚ್ಚದಲ್ಲಿ ಈ ಚಿತ್ರ ತಯಾರಾಗಿದ್ದು, ಈ ಚಿತ್ರ ನೋಡಲು ಭಾರತದಲ್ಲಿ ಈಗಾಗಲೇ ಸಿನಿ ಪ್ರೇಕ್ಷಕರು ಮುಗಿಬಿದ್ದು ಅಡ್ವಾನ್ಸ್ ಬುಕ್ಕಿಂಗ್ ಕೂಡ ಮಾಡಿದ್ದಾರೆ.

Leave a Reply

%d bloggers like this: