ಒಂದೇ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದಕ್ಷಿಣ ಭಾರತದ ಇಬ್ಬರು ಸ್ಟಾರ್ ನಟರು

ಕನ್ನಡದ ಯಶಸ್ವಿ ನಿರ್ಮಾಣ ಸಂಸ್ಥೆಯಾಗಿ ಹೊರ ಹೊಮ್ಮಿರುವ ಹೊಂಬಾಳೆ ಫಿಲಂಸ್ ಇದೀಗ ಮತ್ತೊಂದು ಸದಭಿರುಚಿಯ ಸಿನಿಮಾ ನೀಡಲು ಮುಂದಾಗಿದೆ. ಈ ಚಿತ್ರಕ್ಕೆ ನಾಯಕ ನಟರಾಗಿ ಮಲೆಯಾಳಂ ಸೂಪರ್ ಸ್ಟಾರ್ ನಟ ಫಹಾದ್ ಫಾಸಿಲ್ ಅವರು ಆಯ್ಕೆ ಆಗಿದ್ದಾರೆ. ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿರೋ ಈ ಸಿನಿಮಾದ ಸಾರಥ್ಯವನ್ನ ಲೂಸಿಯಾ ಮತ್ತು ಯೂಟರ್ನ್ ಎಂಬ ಪ್ರಯೋಗಾತ್ಮಕ ಸಿನಿಮಾ ನೀಡಿರೋ ನಿರ್ದೇಶಕ ಪವನ್ ಕುಮಾರ್ ವಹಿಸಿಕೊಂಡಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆ ಪುನೀತ್ ರಾಜ್ ಕುಮಾರ್ ಅವರ ನಿನ್ನಿಂದಲೇ ಸಿನಿಮಾ ನಿರ್ಮಾಣ ಮಾಡುವ ಮೂಲಕ ಚಂದನವನಕ್ಕೆ ಪ್ರವೇಶ ಮಾಡಿತು.

ತದ ನಂತರ ರಾಜಕುಮಾರ, ಕೆಜಿಎಫ್, ಕೆಜಿಎಫ್ ಚಾಪ್ಟರ್2, ಇದೀಗ ಕಾಂತಾರ ಅಂತಹ ಸೂಪರ್ ಡೂಪರ್ ಸಿನಿಮಾ ನಿರ್ಮಾಣ ಮಾಡಿದೆ. ಅಷ್ಟೇ ಅಲ್ಲದೆ ಇದೀಗ ಬಘೀರ ಮತ್ತು ತೆಲುಗಿನಲ್ಲಿ ಸಲಾರ್ ಎಂಬಂತಹ ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ನಡಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಕನ್ನಡ ಸಿನಿ ಪ್ರಿಯರಿಗೆ ಸದಭಿರುಚಿಯ ಸಿನಿಮಾಗಳನ್ನ ನೀಡುತ್ತಾ ಮನರಂಜಿಸುತ್ತಾ ಬರುತ್ತಿದೆ. ಇದೀಗ ಧೂಮಂ ಎಂಬಂತಹ ವಿಭಿನ್ನ ಶೀರ್ಷಿಕೆಯಡಿಯಲ್ಲಿ ಮತ್ತೊಂದು ಸಿನಿಮಾ ನೀಡಲು ಮುಂದಾಗಿದೆ. ಈ ಹೊಸ ಧೂಮಂ ಸಿನಿಮಾದ ಶೀರ್ಷಿಕೆ ಸಖತ್ ಅಟ್ರಾಕ್ಟಿವ್ ಆಗಿದ್ದು, ಪೋಸ್ಟರ್ ಕುತೂಹಲ ಮೂಡಿಸಿದೆ. ಈ ಧೂಮಂ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರಿಗೆ ಜೋಡಿಯಾಗಿ ನಟಿ ಅಪರ್ಣಾ ಬಾಲ ಮುರುಳಿ ಅವರು ನಟಿಸುತ್ತಿದ್ದಾರೆ.

ನಟಿ ಅಪರ್ಣಾ ಬಾಲಮುರುಳಿ ಅವರು ಸೂರರೈ ಪೋಟ್ರು ಸಿನಿಮಾದ ನಟನೆಗೆ ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಈ ಧೂಮಂ ಸಿನಿಮಾದ ಚಿತ್ರೀಕರಣ ಇದೇ ಅಕ್ಟೋಬರ್ 9ರಿಂದ ಭರ್ಜರಿಯಾಗಿ ಆರಂಭವಾಗಲಿದೆಯಂತೆ. ಇನ್ನು ಧೂಮಂ ಸಿನಿಮಾ ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ತಂಡ ಮಾಹಿತಿ ನೀಡಿದೆ. ಕನ್ನಡಕ್ಕೆ ಕೆಜಿಎಫ್ ಎಂಬ ಗೋಲ್ಡನ್ ಪ್ಯಾನ್ ಇಂಡಿಯಾ ನೀಡುವ ಮೂಲಕ ಕನ್ನಡ ಚಿತ್ರರಂಗದ ಪತಾಕೆಯನ್ನ ರಾಷ್ಟ್ರ ಮಾತ್ರ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿನುಗುವಂತೆ ಮಾಡಿದ ಹೊಂಬಾಳೆ ಫಿಲಂಸ್ ಸಂಸ್ಥೆ ಇದೀಗ ಧೂಮಂ ಸಿನಿಮಾ ಮಾಡುತ್ತಿರೋದು ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಚಿತ್ರ ಕನ್ನಡ ಭಾಷೆಯಲ್ಲೂ ಬಿಡುಗಡೆ ಆಗುತ್ತಿದ್ದು ಫಹಾದ್ ಫಾಸಿಲ್ ಹಾಗೂ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ಅವರು ಕನ್ನಡ ಚಿತ್ರರಂಗಕ್ಕೆ ಈ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದಾರೆ.