ಒಂದರ ಮೇಲೊಂದು ಅದ್ಬುತ ಕಥೆ ಆಯ್ಕೆ ಮಾಡುತ್ತಿರುವ ವಿಜಯ್ ರಾಘವೇಂದ್ರ ಅವರಿಂದ ಮತ್ತೊಂದು ವಿಭಿನ್ನ ಚಿತ್ರ

ಕನ್ನಡ ಚಿತ್ರರಂಗದಲ್ಲಿ ಅನೇಕ ಖ್ಯಾತ ನಟ ನಟಿಯರು ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದುವರೆಗೆ ಮಾಡದಂತಹ ಪಾತ್ರಗಳನ್ನ ಹೊರತುಪಡಿಸಿ, ಚಾಲೇಂಜಿಂಗ್ ಪಾತ್ರಗಳನ್ನ ಒಪ್ಪಿಕೊಂಡು ತಮ್ಮ ನಟನಾ ಸಾಮಾರ್ಥ್ಯವೇನು ಅನ್ನೋದನ್ನ ಸಾಬೀತು ಪಡಿಸಿಕೊಳ್ತಿದ್ದಾರೆ. ಅದರಂತೆ ಇದೀಗ ನಟ ವಿಜಯ್ ರಾಘವೇಂದ್ರ ಅವರು ಕೂಡ ಇತ್ತೀಚೆಗೆ ತಾವು ಆಯ್ಕೆ ಮಾಡಿಕೊಳ್ಳುವ ಕಥೆಯಲ್ಲಿ ಕೊಂಚ ವಿಭಿನ್ನತೆಯನ್ನ ಕಂಡುಕೊಳ್ಳುತ್ತಿದ್ದಾರೆ. ನಟ ವಿಜಯ್ ರಾಘವೇಂದ್ರ ಅವರು ಈಗಾಗಲೇ ಲವರ್ ಬಾಯ್ ಆಗಿ, ಫ್ಯಾಮಿಲಿ, ಕಾಮಿಡಿ ಅಂಡ್ ಆಕ್ಷನ್ ಮಾಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇತ್ತೀಚೆಗೆ ವಿಜಯ್ ರಾಘವೇಂದ್ರ ಅವರು ಸಸ್ಪೆನ್ಸ್ ಥ್ರಿಲ್ಲರ್ ಸೈಕಾಲಾಜಿಕಲ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ ಅಂತ ಹೇಳ್ಭೋದು.

ಯಾಕಂದ್ರೆ ವಿಜಯ್ ರಾಘವೇಂದ್ರ ಅವರು ಸೀತಾರಾಮ್ ಬಿನೋಯ್, ಕೇಸ್ ಆಫ್ ಕೊಂಡಾಣ ಅಂತಹ ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅಂತದ್ದೇ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಆ ಚಿತ್ರದ ಹೆಸರೇ ಮರೀಚಿ. ಈ ಮರೀಚಿ ಎಂಬ ಥ್ರಿಲ್ಲರ್ ಸಿನಿಮಾಗೆ ಸಿದ್ದ್ ರುವ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಸಿದ್ದ್ ರುವ್ ಅವರು ಕಪಟ ನಾಟಕ ಸೂತ್ರಧಾರಿ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು‌. ಇದೀಗ ಮರೀಚಿ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಮರೀಚಿ ಬ್ರಹ್ಮದೇವರ ಪುತ್ರ. ಅಂದರೆ ಒಳ್ಳೆಯದು ಮತ್ತು ಕೆಟ್ಟದಕ್ಕೆ ಗಾಡ್ ಫಾದರ್ ಅಂತ ಪರಿಗಣಿಸಲಾಗಿದೆಯಂತೆ.

ಈ ಮರೀಚಿ ಸಿನಿಮಾ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನ ಹೊಂದಿದೆಯಂತೆ‌. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರಿಗೆ ಜೋಡಿಯಾಗಿ ಮಿಲ್ಕ್ ಬ್ಯೂಟಿ ಸೋನು ಗೌಡ ಅವರು ನಟಿಸುತ್ತಿದ್ದಾರೆ. ಈ ಹಿಂದೆ ಸೋನುಗೌಡ ಮತ್ತು ವಿಜಯ್ ರಾಘವೇಂದ್ರ ಅವರು ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ನಟಿಸಿದ್ದರು‌. ಇನ್ನು ಪಾತ್ರವರ್ಗದಲ್ಲಿ ಸ್ಪಂದನಾ, ಆರ್ಯನ್, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಒಂದಷ್ಟು ಖ್ಯಾತ ಕಲಾವಿದರು ಇರಲಿದ್ದಾರಂತೆ. ಎಸ್.ಎಸ್ ರೆಕ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮರೀಚಿ ಸಿನಿಮಾ ತಯಾರಾಗುತ್ತಿದ್ದು, ಸಿದ್ದ್ ರುವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೂಡಾ ಸ್ಯಾಂಡಿ ರಾಗ ಸಂಯೋಜನೆ, ಮನೋಹರ್ ಜೋಶಿ ಛಾಯಾಗ್ರಹಣ ಇದೆ. ಈ ಮರೀಚಿ ಸಿನಿಮಾ ಚಿತ್ರೀಕರಣ ಮುಂದಿನ ತಿಂಗಳು ನವೆಂಬರ್ ತಿಂಗಳಿಂದ ಆರಂಭಗೊಳ್ಳಲಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

Leave a Reply

%d bloggers like this: