ಒಂದರ ಮೇಲೆ ಮತ್ತೊಂದು ಚಿತ್ರ, ಮತ್ತೊಬ್ಬ ಸ್ಟಾರ್ ನಟನ ಚಿತ್ರದಲ್ಲಿ ನಟಿಯಾಗಿ ರಶ್ಮಿಕಾ ಅವರು

ಬ್ಯಾಕ್ ಟು ಬ್ಯಾಕ್ ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬಿಝಿ಼ಯಾಗುತ್ತಿದ್ದಾರೆ. ಕನ್ನಡದ ನಟಿ ರಶ್ಮಿಕಾ ಮಂದಣ್ಣಗೆ ಪುಷ್ಪ ಸಿನಿಮಾದ ನಂತರ ಮತ್ತಷ್ಟು ಜನಪ್ರಿಯತೆ ಮತ್ತು ಬೇಡಿಕೆ ಹೆಚ್ಚಾಗಿದೆ. ಸೌತ್ ಸಿನಿಮಾರಂಗದಲ್ಲಿ ಸಖತ್ ಕ್ರೇಜ಼್ ಹೊಂದಿದ್ದ ರಶ್ಮಿಕಾಗೆ ಇದೀಗ ಬಾಲಿವುಡ್ ನಲ್ಲಿಯೂ ಕೂಡ ಕ್ರೇಜ಼್ ಹೆಚ್ಚಾಗುತ್ತಿದೆ. ಈಗಾಗಲೇ ರಶ್ಮಿಕಾ ಮಂದಣ್ಢ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಟ್ಟಿಗೆ ಗುಡ್ ಬೈ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಅದರ ಜೊತೆಗೆ ಸಿದ್ದಾರ್ಥ್ ಮೆಲ್ಹೋತ್ರಾ ಅವರೊಟ್ಟಿಗೆ ಮಿಶನ್ ಮಜ್ನು ಸಿನಿಮಾದಲ್ಲಿಯೂ ಕೂಡ ನಾಯಕಿಯಾಗಿ ನಟಿಸಿದ್ದಾರೆ. ಇದೇ ಅಕ್ಟೋಬರ್ 7ರಂದು ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸಿರೋ ಗುಡ್ ಬೈ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಗೆ ಸಿದ್ದವಾಗಿದೆ.

ಈ ಸಿನಿಮಾ ರಶ್ಮಿಕಾ ಮಂದಣ್ಣ ಅವರ ಮೊದಲ ಹಿಂದಿ ಸಿನಿಮಾ. ಬಾಲಿವುಡ್ ಮಂದಿಗೆ ರಶ್ಮಿಕಾ ಮಂದಣ್ಣ ಯಾವ ರೀತಿ ಮೋಡಿ ಮಾಡಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ. ಇದೆಲ್ಲದರ ನಡುವೆ ರಶ್ಮಿಕಾ ಮಂದಣ್ಣ ಬಾಲಿವುಡ್ ನ ಮತ್ತೊಬ್ಬ ಸ್ಟಾರ್ ಎನರ್ಜೆಟಿಕ್ ಹೀರೋ ಟೈಗರ್ ಶ್ರಾಫ್ ಅವರೊಟ್ಟಿಗೆ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಈ ಸಿನಿಮಾದ ಟೈಟಲ್ ಇನ್ನೂ ಕೂಡ ಫಿಕ್ಸ್ ಆಗಿಲ್ಲ. ಟೈಗರ್ ಶ್ರಾಫ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಈ ಹೊಸ ಸಿನಿಮಾಗೆ ಸಿದ್ದಾರ್ಥ್ ಆನಂದ್ ಬಂಡವಾಳ ಹೂಡಿಕೆ ಮಾಡುತ್ತಿದ್ದು, ರೋಹಿತ್ ಧವನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಇದೀಗ ಇಷ್ಟು ಮಾಹಿತಿ ಹೊರ ಬಿದ್ದಿದೆ. ಮುಂದಿನ ದಿನಗಳಲ್ಲಿ ಯಾವೆಲ್ಲಾ ರೀತಿಯ ಬದಲಾವಣೆ ಆಗಲಿದೆ ಅನ್ನೋದನ್ನ ತಿಳಿಯಬಹುದು.

ಇನ್ನು ಕನ್ನಡ ಸಿನಿಮಾರಂಗದಿಂದ ವೃತ್ತಿ ಜೀವನ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ ಇಂದು ಕನ್ನಡ ಮಾತ್ರ ಅಲ್ಲದೇ ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಬಾಲಿವುಡ್ ನಲ್ಲಿಯೂ ಕೂಡ ಮಿಂಚುತ್ತಿದ್ದಾರೆ. ಸಿನಿಮಾ, ಜಾಹೀರಾತು ಅಂತ ರಶ್ಮಿಕಾ ಮಂದಣ್ಣ ಸಖತ್ ಬಿಝಿ಼ ಆಗಿದ್ದಾರೆ. ಈಗಾಗಲೇ ಸೌತ್ ಸಿನಿ ಸೂಪರ್ ಸ್ಟಾರ್ ಗಳಾದ ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಧೃವ ಸರ್ಜಾ, ವಿಜಯ್ ದೇವರಕೊಂಡ, ಕಾರ್ತಿ, ಇತ್ತೀಚೆಗೆ ಅಲ್ಲು ಅರ್ಜುನ್ ಸೇರಿದಂತೆ ಇದೀಗ ಸಿದ್ದಾರ್ಥ್ ಮೆಲ್ಹೋತ್ರಾ, ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಟೈಗರ್ ಶ್ರಾಫ್ ಜೊತೆ ನಟಿಸುವ ಮೂಲಕ ರಶ್ಮಿಕಾ ಮಂದಣ್ಣ ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರೊಟ್ಟಿಗೆ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

Leave a Reply

%d bloggers like this: