ಒಂದಲ್ಲ ಎರಡಲ್ಲ, ಒಂದೇ ವೇದಿಕೆ ಮೇಲೆ ನಾಲ್ಕು ಪ್ರಶಸ್ತಿಗಳನ್ನು ಚಾಚಿಕೊಂಡ ಕನ್ನಡ ಚಿತ್ರ

ನಿನ್ನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ 67ನೇ ಫಿಲ್ಮ್ ಫೇರ್ ಪ್ರಶಸ್ತಿಯಲ್ಲಿ ಮಂಸೂರೆ ಅವರ ನಿರ್ದೇಶನದ ಸಿನಿಮಾಗೆ ಬರೋಬ್ಬರಿ ನಾಲ್ಕು ಪ್ರಶಸ್ತಿಗಳು ಲಭಿಸಿವೆ. ಈ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ಸಂತೋಷವಾಗಿದೆ. ಹೌದು ಆ ಸಿನಿಮಾ ಬೇರ್ಯಾವುದೂ ಅಲ್ಲ. ಲಾಕ್ ಡೌನ್ ಓಪನ್ ಆದ ಬಳಿಕ ರಿಲೀಸ್ ಆದ ಮೊದಲ ಸಿನಿಮಾ ಆಗಿದ್ದ ಆಕ್ಟ್ 1978 ಸಿನಿಮಾ ಕಟ್ಟು ನಿಟ್ಟಿನ ಕ್ರಮ ಇದ್ದ ಕಾರಣ ಥಿಯೇಟರ್ ಗಳಲ್ಲಿ ಎಲ್ಲಾ ಆಸನಗಳ ಭರ್ತಿಗೆ ಅವಕಾಶ ಇರಲಿಲ್ಲ. ಅಂತಹ ಸಂಧರ್ಭದಲ್ಲಿಯೇ ರಿಲೀಸ್ ಆದ ಈ ಆಕ್ಟ್ 1978 ಸಿನಿಮಾ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು. ಆಕ್ಟ್ 1978 ಸಿನಿಮಾ ಒಂದು ಸರ್ಕಾರಿ ಇಲಾಖೆಗಳಲ್ಲಿ ಯಾವ ರೀತಿಯಾಗಿ ಭ್ರಷ್ಟಚಾರ ನಡೆಯುತ್ತದೆ.

ಕೆಲವು ಅಧಿಕಾರಿಗಳು ಯಾವ ರೀತಿ ಜನ ಸಾಮಾನ್ಯರ ಮೇಲೆ ಮಾನಸಿಕವಾಗಿ ದೌರ್ಜನ್ಯ ನಡೆಸುತ್ತಾರೆ ಅನ್ನೋದನ್ನ ಬಹಳ ಅಚ್ಚುಕಟ್ಟಾಗಿ ನಿರ್ದೇಶಕ ಮಂಸೋರೆ ಅವರು ತೆರೆ ಮೇಲೆ ತಂದಿದ್ದರು. ಈ ಸಿನಿಮಾ ನೋಡಿದ ಪ್ರತಿಯೊಬ್ಬರು ಕೂಡ ಚಿತ್ರದ ಬಗ್ಗೆ ಕಲಾವಿದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಈ ಚಿತ್ರಕ್ಕೆ ಒಂದಷ್ಟು ಪ್ರಶಸ್ತಿ ಲಭಿಸುತ್ತದೆ ಎಂದು ಹೇಳಿದ್ರು. ಅದರಂತೆ ಇದೀಗ ಮಂಸೋರೆ ಅವರ ಆಕ್ಟ್ 1978 ಸಿನಿಮಾಗೆ ಒಟ್ಟು ನಾಲ್ಕು ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿದೆ. 2020-21 ಸಾಲಿನಲ್ಲಿ ರಿಲೀಸ್ ಆದಂತಹ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಯಿತು. ಅದರಲ್ಲಿ ಆಕ್ಟ್ 1978 ಸಿನಿಮಾ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟಿಯಾಗಿ ಯಜ್ಞಾಶೆಟ್ಟಿ, ಅತ್ಯುತ್ತಮ ಗೀತ ಸಾಹಿತಿಯಾಗಿ ಜಯಂತ್ ಕಾಯ್ಕಿಣಿ, ಅತ್ಯುತ್ತಮ ಪೋಷಕ ನಟರಾಗಿ ಬಿ.ಸುರೇಶ್ ಅವರು ಫಿಲ್ಮ್ ಫೇರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಅದೇ ರೀತಿಯಾಗಿ ಇತ್ತೀಚೆಗೆ ತೆರೆ ಕಂಡ ಗರುಡಗಮನ ಋಷಭವಾಹನ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶನ ಎಂದು ಬೆಸ್ಟ್ ಡೈರೆಕ್ಟರ್ ಆಗಿ ರಾಜ್.ಬಿ.ಶೆಟ್ಟಿ ಅವರಿಗೆ ಫಿಲ್ಮ್ ಫೇರ್ ಅವಾರ್ಡ್ ಲಭಿಸಿದೆ. ಇನ್ನು ಡಾಲಿ ಧನಂಜಯ್ ಅವರು ಮೊಟ್ಟ ಮೊದಲಿಗೆ ನಿರ್ಮಾಣ ಮಾಡಿದ ಬಡವ ರಾಸ್ಕಲ್ ಸಿನಿಮಾದಲ್ಲಿನ ನಟನೆಗೆ ಧನಂಜಯ್ ಅವರಿಗೆ ಬೆಸ್ಟ್ ಆಕ್ಟರ್ ಫಿಲ್ಮ್ ಫೇರ್ ಅವಾರ್ಡ್ ಸಿಕ್ಕಿದೆ. ಜೊತೆಗೆ ಪುನೀತ್ ರಾಜ್ ಕುಮಾರ್ ಅವರಿಗೆ ಕೂಡಾ ಮರಣೋತ್ತರವಾಗಿ ಬೆಸ್ಟ್ ಆಕ್ಟರ್ ಅವಾರ್ಡ್ ಘೋಷಣೆ ಮಾಡಲಾಯಿತು. ಒಟ್ಟಾರೆಯಾಗಿ ಸೈಮಾ ಅವಾರ್ಡ್ ನಂತರ ಫಿಲ್ಮ್ ಫೇರ್ ಅವಾರ್ಡ್ ಕೂಡ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಜರುಗಿದೆ. ದಕ್ಷಿಣ ಭಾರತದ ಸುಪ್ರಸಿದ್ದ ಅನೇಕ ನಟ ನಟಿಯರು, ನಿರ್ದೇಶಕರು, ತಂತ್ರಜ್ಞರು ಬೆಂಗಳೂರಿಗೆ ಆಗಮಿಸಿ ಫಿಲ್ಮ್ ಫೇರ್ ಅವಾರ್ಡ್ ಫಂಕ್ಷನ್ ನಲ್ಲಿ ಭಾಗವಹಿಸಿದರು.