ಒಂದಲ್ಲ ಎರಡಲ್ಲ ಬರೋಬ್ಬರಿ ಏಳು ಸಾವಿರ ಐಷಾರಾಮಿ ಕಾರ್ ಹೊಂದಿದ್ದಾನಂತೆ ಈ ರಾಜ…! ಈತನ ಆಸ್ತಿ ಮೌಲ್ಯ ನೋಡಿ ಪ್ರಪಂಚವೇ ಬೆಚ್ಚಿಬಿದ್ದಿದೆ

ಒಂದಲ್ಲ ಎರಡಲ್ಲ ಬರೋಬ್ಬರಿ ಏಳು ಸಾವಿರ ಐಷಾರಾಮಿ ಕಾರ್ ಹೊಂದಿದ್ದಾನಂತೆ ಈ ರಾಜ…! ಸಾಮಾನ್ಯವಾಗಿ ಜೀವನದಲ್ಲಿ ಒಂದು ಚಂದದ ಮನೆ ಕಟ್ಟಬೇಕು ಅಥವಾ ಒಂದು ಕಾರು ಖರೀದಿ ಮಾಡಬೇಕು ಎಂಬುದು ಬಹುತೇಕರ ಬಹುದೊಡ್ಡ ಕನಸಾಗಿರುತ್ತದೆ. ಅದಕ್ಕಾಗಿ ತಮ್ಮ ಇಡೀ ಜೀವಮಾನವೆಲ್ಲಾ ಮುಡಿಪಾಗಿಟ್ಟು ದುಡಿಯುತ್ತಾರೆ. ರಾಜ ಮಹಾರಾಜರು ಅಂದರೆ ಅವರದ್ದೇ ಆದಂತಹ ಒಂದು ಗತ್ತು ಗಮ್ಮತ್ತು ವೈಭೋಗದ ಬದುಕು ಇದ್ದೇ ಇದೆ. ಜೊತೆಗೆ ವಿಲಾಸಿ ಜೀವನ ಶೈಲಿ ಐಷಾರಾಮಿ ಕಾರುಗಳು ಆಳು ಕಾಳು ಇರುತ್ತಾರೆ. ಅದು ರಾಜರ ಆಳ್ವಿಕೆಯಲ್ಲಿದ್ದಾಗ ಇದನ್ನ ಕಾಣಬಹುದಾಗಿರುತ್ತದೆ. ಆದರೆ ಇದೀಗ ರಾಜರ ಆಳ್ವಿಕೆ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಚುನಾಯಿತರಾದ ಜನ ಪ್ರತಿನಿಧಿಗಳಿಗೆ ಅಧಿಕಾರ ನಡೆಸುತ್ತಿದ್ದಾರೆ. ಆದರೆ ಈ ಒಂದು ದೇಶದಲ್ಲಿ ಇಂದಿಗೂ ಕೂಡ ವಂಶಪಾರಂಪರ್ಯವಾಗಿ ರಾಜಾಳ್ವಿಕೆ ನಡೆಯುತ್ತಿದ್ದು ಈತನ ವೈಭೋಗದ ಜೀವನ ಶೈಲಿ ಕಂಡು ಇಡೀ ಜಗತ್ತೇ ಅಚ್ಚರಿಯಿಂದ ನೋಡುತ್ತಿದೆ.

ಜಗತ್ತಿನಲ್ಲಿ ಕಂಡು ಕೇಳರಿಯದಂತಹ ಈ ಶ್ರೀಮಂತ ವ್ಯಕ್ತಿ ಇವರಾಗಿದ್ದು ಇವರ ಕೂರುವ ಚಿನ್ನದ ಸಿಂಹಾಸನ, ಅವರ ಬಳಿ ಇರುವ ಐಷಾರಾಮಿ ಕಾರುಗಳನ್ನ ನೋಡಿ ಹೊರ ದೇಶದ ಶ್ರೀಮಂತ ಜನರು ದಂಗಾಗಿದ್ದಾರಂತೆ. ಹಾಗಾದರೆ ಯಾರು ಆ ಶ್ರೀಮಂತ ವ್ಯಕ್ತಿ ಅಂತೀರಾ. ಬ್ರೂನೈಯ ದ್ವೀಪದ ಪ್ರಧಾನಿ ಮಂತ್ರಿ ಆಗಿರುವ ಹಸ್ಸನಲ್ ಬೊಲ್ಕಿಯಾ ಬ್ರೂನೈ. ಇವರು ಜಗತ್ತಿನ ಅತ್ಯಂತ ದೊಡ್ಡ ರಾಜ ಎಂದೇ ಕರೆಯಲಾಗುತ್ತದೆ. ಯಾಕೆ ಇವರನ್ನ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಕರೆಯುತ್ತಾರೆ. ಇವರ ವೈಭೋಗದ ಬದುಕನ್ನ ಕಂಡು ಎಲ್ಲರು ನಿಬ್ಬೆರಗಾಗುವುದು ಯಾಕೆ ಅಂತಹ ಶ್ರೀಮಂತಿಕೆ ಏನು ಇವರ ಬಳಿ ಎಂದು ನೋಡುವುದಾದರೆ. ಈ ಹಸ್ಸನಲ್ ಬ್ರೋನೈ ಅವರ ಬಳಿ ಬರೋಬ್ಬರಿ ಏಳು ಸಾವಿರ ಐಷಾರಾಮಿ ಕಾರುಗಳಿವೆಯಂತೆ.

ಅವರ ಬಳಿ ಜಗತ್ತಿನ ಪ್ರತಿಷ್ಟಿತ ದುಬಾರಿ ಕಾರುಗಳಾದ 570.ಮರ್ಸಿಡಿಸ್ ಬೆಂಝ್, 600 ಕ್ಕೂ ಅಧಿಕ ರೋಲ್ಸ್ ರಾಯ್, 450 ಫೆರಾರಿ, 380 ಕ್ಕೂ ಹೆಚ್ಚು ಬೆಂಟ್ಲಿ ಹೀಗೆ ಅನೇಕ ಐಷಾರಾಮಿ ಕಾರುಗಳೇ ತುಂಬಿವೆಯಂತೆ. ಇವರು ಎಲ್ಲೇ ಹೊರಗಡೆ ಹೋಗಬೇಕಾದರೂ ದಿನವೊಂದಕ್ಕೆ ಎರಡೂ ಮೂರು ಕಾರುಗಳನ್ನು ಬದಲಾಯಿಸುತ್ತಾರಂತೆ. ಇವರ ಬಳಿ ಕೇವರ ಕಾರುಗಳೇ ಅಷ್ಟೇ ಅಲ್ಲ. ಬೋಯಿಂಗ್ 747-400, ಬೋಯಿಂಗ್ 767-200 ವಿಮಾನ ಮತ್ತು ಎ 340-200 ಐಷಾರಾಮಿ ಏರ್ ಬಸ್ ಅನ್ನು ಕೂಡ ಹೊಂದಿದ್ದಾರಂತೆ. ತಮ್ಮ ಸಿಂಹಾಸನ ವೇರಿದಾಗ ಇವರಿಗೆ ಕೇವಲ ಇಪ್ಪತ್ತೊಂದು ವರ್ಷ ವಯಸ್ಸು ಅಷ್ಟೇ. ಇವರ ಕೂರುವ ಸಿಂಹಾಸನ ಸಂಪೂರ್ಣವಾಗಿ ವಜ್ರ ವೈಢುರ್ಯಗಳಿಂದ ಮಾಡಲ್ಪಟ್ಟಿದ್ದಂತೆ. ಇವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 14,700 ಕೋಟಿ ರೂ. ಗೂ ಅತ್ಯಧಿಕವಾಗಿದೆಯಂತೆ.