ಒಂದಲ್ಲ ಎರಡಲ್ಲ ಬರೊಬ್ಬರಿ 100 ದೇಶಗಳಲ್ಲಿ ಬಿಡುಗಡೆ ಆಗುತ್ತಿದೆ ಭಾರತದ ಈ ಬಹು ನಿರೀಕ್ಷಿತ ಚಿತ್ರ

ಬಾಲಿವುಡ್ ಎವರ್ಗೀನ್ ಹ್ಯಾಂಡ್ಸಮ್ ಹಂಕ್ ಸೂಪರ್ ಸ್ಟಾರ್ ನಟ ಹೃತಿಕ್ ರೋಷನ್ ಮತ್ತು ಮತ್ತೊಬ್ಬ ಸ್ಟಾರ್ ನಟ ಸೈಫ್ ಅಲಿಖಾನ್ ಜುಗಲ್ ಬಂದಿಯ ಬಹು ನಿರೀಕ್ಷಿತ ಸಿನಿಮಾ ವಿಕ್ರಮ್ ವೇದಾ ಚಿತ್ರ ಈಗಾಗಲೇ ಪೋಸ್ಟರ್, ಟೀಸರ್, ಟ್ರೇಲರ್ ಮೂಲಕ ಸಾಕಷ್ಟು ಸದ್ದು ಮಾಡಿದೆ. ಇದೀಗ ಈ ಚಿತ್ರದ ಬಿಗ್ ಅಪ್ ಡೇಟ್ಸ್ ವೊಂದು ಸಿಕ್ಕಿದೆ. ಹೌದು ಹಿಂದಿಯಲ್ಲಿ ತೆರೆ ಕಾಣ್ತಿರೋ ಈ ವಿಕ್ರಮ್ ವೇದಾ ಸಿನಿಮಾ ತಮಿಳಿನ ಮೂಲ. ಈಗಾಗಲೇ ತಮಿಳಿನಲ್ಲಿ ವಿಜಯ್ ಸೇತುಪತಿ ಮತ್ತು ಮಾಧವನ್ ನಟಿಸಿ ಸೂಪರ್ ಹಿಟ್ ಆಗಿದ್ದ ಈ ವಿಕ್ರಮ್ ವೇದಾ ಸಿನಿಮಾವನ್ನ ಹಿಂದಿಯಲ್ಲಿ ರೀಮೆಕ್ ಮಾಡಲಾಗಿದೆ.

ಮೂಲ ತಮಿಳಿನಲ್ಲಿ ನಿರ್ದೇಶನ ಮಾಡಿದ್ದ ನಿರ್ದೇಶಕರಾದ ಪುಷ್ಕರ್ ಮತ್ತು ಗಾಯತ್ರಿ ಅವರೇ ಹಿಂದಿಯಲ್ಲಿಯೂ ಕೂಡ ನಿರ್ದೇಶನ ಮಾಡಿದ್ದಾರೆ. ವೇದ ಪಾತ್ರದಲ್ಲಿ ಹೃತಿಕ್ ಕಾಣಿಸಿಕೊಂಡಿದ್ದು, ವಿಕ್ರಮ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ಖಡಕ್ ಪೊಲೀಸ್ ಆಫೀಸರಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದಿಯ ವಿಕ್ರಮ್ ವೇದಾ ಸಿನಿಮಾಗೆ ಭೂಷಣ್ ಕುಮಾರ್ ಮತ್ತು ಎಸ್ ಶಶಿಕಾಂತ್ ಅವರು ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ ಸಿನಿಮಾ ಇದೇ ಸೆಪ್ಟೆಂಬರ್ 30ರಂದು ದೇಶ ಮಾತ್ರ ಅಲ್ಲದೆ ಹೊರ ದೇಶಗಳಲ್ಲಿಯೂ ಕೂಡ ಅದ್ದೂರಿಯಾಗಿ ರಿಲೀಸ್ ಅಗ್ತಿದೆ. ಅದೂ ಕೂಡ ಬರೋಬ್ಬರಿ ನೂರಕ್ಕೂ ಹೆಚ್ಚು ದೇಶಗಳಲ್ಲಿ ಈ ಕ್ರೈಮ್ ಥ್ರಿಲ್ಲರ್ ಆಕ್ಷನ್ ಕಥಾಹಂದರ ಹೊಂದಿರೋ ವಿಕ್ರಮ್ ವೇದಾ ಸಿನಿಮಾ ರಿಲೀಸ್ ಆಗ್ತಿರೋದು ಇತಿಹಾಸ.

ಯಾಕೆ ಇತಿಹಾಸ ಅಂದ್ರೆ ರೀಮೇಕ್ ಸಿನಿಮಾವೊಂದು ಈ ಪರಿಯಾಗಿ ನೂರಕ್ಕೂ ಅಧಿಕ ದೇಶಗಳಲ್ಲಿ ರಿಲೀಸ್ ಆಗ್ತಿರೋದು ಇದೇ ಪ್ರಥಮ. ಹೌದು ವಿಕ್ರಮ್ ವೇದಾ ಸಿನಿಮಾ ಉತ್ತರ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್, ರಷ್ಯಾ, ಪನಾಮ, ಪೆರು ದೇಶಗಳ ಜೊತೆಗೆ ಆಫ್ರಿಕಾ ಖಂಡದ ಇಪ್ಪತ್ತೈದು ಅಧಿಕ ದೇಶ, ಲ್ಯಾಟಿನ್ ಅಮೆರಿಕಾದ ಇಪ್ಪತ್ತೇಳು ದೇಶಗಳಲ್ಲಿಯೂ ತೆರೆ ಕಾಣಲು ಸಿದ್ದವಾಗುತ್ತಿದೆ. ಒಟ್ಟಾರೆಯಾಗಿ ತಮಿಳಿನಲ್ಲಿ ರಿಲೀಸ್ ವಿಕ್ರಮ್ ವೇದಾ ದಕ್ಷಿಣ ಭಾರತ ಸಿನಿರಂಗದಲ್ಲಿ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿತ್ತು. ಇದೀಗ ಬಾಲಿವುಡ್ ನಲ್ಲಿ ಹೃತಿಕ್ ರೋಷನ್, ಸೈಫ್ ಅಲಿಖಾನ್ ವಿಕ್ರಮ್ ವೇದಾರಾಗಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಅನ್ನೋದನ್ನ ಸೆಪ್ಟೆಂಬರ್ 30ರವರೆಗೆ ಕಾದು ನೋಡಬೇಕಾಗಿದೆ.