ಒಳ್ಳೆ ಹುಡುಗ ಪ್ರಥಮ್ ಮದುವೆ ಫಿಕ್ಸ್, ಆದ್ರೆ ಹುಡಗಿ ಯಾರು ಗೊತ್ತಾ

ತನ್ನ ಮಗನಿಗೆ ಒಳ್ಳೆ ಹುಡುಗಿ ಸಿಗಲಿ ಎಂದು ಹರಕೆ ಕಟ್ಟಿಕೊಂಡು ವ್ರತ-ಪುನಸ್ಕಾರ ಮಾಡುತ್ತಿದ್ದಾರೆ ಈ ಜನಪ್ರಿಯ ನಟನ ತಾಯಿ. ಹೌದು ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಕರ್ನಾಟಕದ ಮನೆ ಮಾತಾದ ನಿರ್ದೇಶಕ ಪ್ರಥಮ್ ತಮ್ಮ ವಿಭಿನ್ನ ವ್ಯಕ್ತಿತ್ವ ನಡವಳಿಕೆಯಿಂದ ಗಮನ ಸೆಳೆದಿದ್ದರು.ತನ್ನಲ್ಲಿರುವ ಜ್ಞಾನ, ಕನ್ನಡ ಭಾಷೆ ಬಗೆಗಿನ ಅಭಿಮಾನದ ಜೊತೆಗೆ ಒಂದಷ್ಟು ವಿಚಿತ್ರ ವರ್ತನೆಯಿಂದಾಗಿ ಬಿಗ್ ಬಾಸ್ ಕನ್ನಡ ಸೀಸನ್ 4 ರಲ್ಲಿ ಪ್ರಥಮ ವಿಜೇತರಾದರು.ಇವರಿಗೆ ಕಠಿಣ ಸ್ಪರ್ಧೆ ನೀಡಿದ್ದು ಕಿರಿಕ್ ಕೀರ್ತಿ. ಪ್ರಥಮ್ ಬಿಗ್ ಬಾಸ್ ಮನೆಗೆ ಹೆಜ್ಜೆ ಇಟ್ಟಿದ್ದು ನಿರ್ದೇಶಕ ಎಂಬ ಟೈಟಲ್ ಕಾರ್ಡ್ ನಿಂದಾಗಿ. ಅಕುಲ್ ಬಾಲಾಜಿ ನಟನೆಯಲ್ಲಿ ದೇವ್ರವ್ನೇ ಬುಡು ಗುರು ಚಿತ್ರ ನಿರ್ದೇಶನ ಮಾಡುತ್ತಿದ್ದರು ಪ್ರಥಮ್.ಈ ಚಿತ್ರದ ಕೆಲಸಗಳ ನಡುವೆಯೇ ಬಿಗ್ ಬಾಸ್ ಮನೆ ಒಳಹೊಕ್ಕರು.

ಆರಂಭದ ದಿನಗಳಲ್ಲಿ ಪ್ರಥಮ್ ವರ್ತನೆ ಕಂಡು ಅಲ್ಲಿರುವ ಸ್ಪರ್ಧಿಗಳಿಗೆ ಕಿರಿಕಿರಿ ಉಂಟು ಮಾಡುತಿತ್ತು.ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಪ್ರಥಮ್ ಅವರಿಗೆ ಹತ್ತು ಹಲವು ಸಿನಿಮಾಗಳಲ್ಲಿ ಅವಕಾಶ ಪಡೆದರು.ಸ್ವತಃ ತಾವೇ ಕರ್ನಾಟಕದ ಅಳಿಯ ಎಂಬ ಸಿನಿಮಾ ನಿರ್ದೇಶನದ ಜೊತೆಗೆ ನಟನೆ ಕೂಡ ಮಾಡುತ್ತಿದ್ದಾರೆ.ಈ ಸಿನಿಮಾದಲ್ಲಿ ಹಿರಿಯ ನಟ ರಾಘವೆಂದ್ರ ರಾಜ್ ಕುಮಾರ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಇದರ ನಡುವೆ ಪ್ರಥಮ್ ಬಹು ಮುಖ್ಯವಾಗಿ ಗಮನ ಸೆಳೆದಿದ್ದು ಕೋವಿಡ್ ಲಾಕ್ಡೌನ್ ಸಂಕಷ್ಟದ ಸಮಯದಲ್ಲಿ ಬಡ-ಬಗ್ಗರಿಗೆ ಅಗತ್ಯ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ನೀಡುವುದರ ಮೂಲಕ.

ಇಂತಹ ಮಾನವೀಯ ಗುಣಗಳನ್ನು ಹೊಂದಿರುವ ಪ್ರಥಮ್ ಗೇ ಮದುವೆ ಮಾಡಬೇಕೇಂಬ ಮಹಾದಾಸೆ ಅವರ ತಾಯಿಗೆ.ಆದರೆ ತನ್ನ ಮಗನಿಗೆ ಒಳ್ಳೆಯ ವಧು ಸಿಗಲಿ ಎಂಬ ಉದ್ದೇಶದಿಂದ ಪ್ರತಿ ವಾರ ದೇವಾಲಯಕ್ಕೆ ಭೇಟಿ ನೀಡಿ ವ್ರತ ಮಾಡುತ್ತಿದ್ದಾರೆ ಪ್ರಥಮ್ ತಾಯಿ.ಇದಕ್ಕೆ ಸ್ಪಂದಿಸಿದ ನಟ,ನಿರ್ದೇಶಕ ಪ್ರಥಮ್ ತನ್ನ ತಾಯಿಯ ಆಸೆಯಂತೆ ಮದುವೆ ಆಗಲು ರೆಡಿಯಾಗಿದ್ದಾರೆ.ಜೊತೆಗೆ ತನ್ನ ತಾಯಿಯ ಹರಕೆಗೆ ತಾವೂ ಕೂಡ ಸಹಾಯ ಮಾಡುತ್ತಿದ್ದಾರೆ.ಒಟ್ಟಾರೆಯಾಗಿ ದೇವ್ರಂತಾ ಮನುಷ್ಯ ಎಂಬ ಸಿನಿಮಾದಂತೆ ಪ್ರಥಮ್ ಕೂಡ ತನ್ನ ಮಾನವೀಯ ಗುಣ ಹಾಗೂ ಸಮಾಜದ ಕಳಕಳಿಯ ವ್ಯಕ್ತಿತ್ವವೊಂದಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಅಪಾರ ಮೆಚ್ಚುಗೆ ಪಡೆಯುತ್ತಿದ್ದಾರೆ.