ಒಂದೇ ವಾರದಲ್ಲಿ ಎರಡು ದುಬಾರಿ ಬೆಲೆಯ ಸ್ಪೋರ್ಟ್ಸ್ ಕಾರು ಖರೀದಿಸಿದ ದಕ್ಷಿಣ ಭಾರತದ ಸ್ಟಾರ್ ನಟ

ಮಲೆಯಾಳಂ ಸೂಪರ್ ಸ್ಟಾರ್ ನಟ ಕಮ್ ನಿರ್ದೇಶಕ ಮತ್ತೊಂದು ಕಾರ್ ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ನಮ್ಮ ದಕ್ಷಿಣ ಭಾರತದ ಸಿನಿಮಾ ನಟ-ನಟಿಯರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಲಕ್ಷುರಿ ಲೈಫ್ ಮೂಲಕವೇ ಭಾರಿ ಸುದ್ದಿಯಾಗುತ್ತಿದ್ದಾರೆ. ಸಾಮಾನ್ಯವಾಗಿ ಕೆಲವು ಸಿನಿಮಾ ಸೆಲೆಬ್ರಿಟಿಗಳಿಗೆ ಕಾರ್ ಕ್ರೇಜ಼್ ಅನ್ನೋದು ಇದ್ದೇ ಇರುತ್ತೆ. ಅವರಿಗೇನೋ ಮಾರುಕಟ್ಟೆಗೆ ಬರೋ ಹೊಸ ಹೊಸ ಕಾರುಗಳಲ್ಲಿ ಒಂದು ಬಾರಿ ಲಾಂಗ್ ಡ್ರೈವ್ ಹೋಗಬೇಕು. ಅದರಲ್ಲಿ ಸುತ್ತಾಡಬೇಕು. ಹೊಸ ಫೀಚರ್ಸ್ ಗಳಿದ್ದರೇ ಅವುಗಳನ್ನ ನಾವು ಅನುಭವಿಸಬೇಕು ಎಂಬ ಆಸೆಗಳು ಇರೋದು ಸರ್ವೇ ಸಾಮಾನ್ಯ.

ಆದರೆ ಇದೀಗ ಮಲೆಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ನಟ-ನಿರ್ದೇಶಕ, ವಿತರಕ ಹಾಗೂ ನಿರ್ಮಾಪಕರಾಗಿ ಯಶಸ್ವಿಯಾಗಿರೋ ಪೃಥ್ವಿರಾಜ್ ಅವರು ಈಗಾಗಲೇ ಹೊಸ ಹೊಸ ಕಾರ್ ಗಳನ್ನ ಖರೀದಿ ಮಾಡುವ ಮೂಲಕ ಸಾಕಷ್ಟು ಬಾರಿ ಸದ್ದು ಮಾಡಿದ್ದಾರೆ. ಈಗ ಮತ್ತೆ ಸೆಕೆಂಡ್ ಹ್ಯಾಂಡ್ ಕಾರ್ ವೊಂದನ್ನ ಖರೀದಿಸಿ ಸುದ್ದಿಯಾಗಿದ್ದಾರೆ. ಹೌದು ನಟ ಪೃಥ್ವಿರಾಜ್ ಅವರು ಕೆಲವು ದಿನಗಳ ಹಿಂದೆಯಷ್ಟೇ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಮಲೆಯಾಳಂ ಅವತರಣಿಕೆಯ ವಿತರಣೆ ಹಕ್ಕನ್ನ ಪಡೆದು ಸುದ್ದಿಯಾಗಿದ್ರು. ಇದೀಗ ಸೆಕೆಂಡ್ ಹ್ಯಾಂಡ್ ಮರ್ಸಿಡಿಸ್ ಎಎಂಜಿ 63 ಮಾಡೆಲ್ ಸ್ಪೋರ್ಟ್ಸ್ ಕಾರನ್ನ ಖರೀದಿ ಮಾಡಿದ್ದಾರೆ. ಈಗಾಗಲೇ ಪೃಥ್ವಿರಾಜ್ ಅವರ ಬಳಿ ಸಾಕಷ್ಟು ಕಾರ್ ಗಳಿವೆ.

ಅವುಗಳ ಜೊತೆಗೆ ಇದೀಗ ಈ ಮರ್ಸಿಡಿಸ್ ಕಾರ್ ಕೂಡ ಸೇರ್ಪಡೆಗೊಂಡಿದೆ. ಈ ಕಾರಿನ ಬೆಲೆ ಬರೋಬ್ಬರಿ ನಾಲ್ಕುವರೆ ಕೋಟಿ ಎಂದು ತಿಳಿದು ಬಂದಿದೆ. ಪೃಥ್ವಿರಾಜ್ ಬಳಿ ಮೂರು ಕೋಟಿಗೂ ಅಧಿಕ ಬೆಲೆಯ ಲ್ಯಾಂಬೋರ್ಗಿನಿ ಉರುಸ್ ಎಸ್ಯುವಿ ಕಾರು ಸಹ ಇದೆ. ಈಗ ಖರೀದಿ ಮಾಡಿರುವ ಸೆಕೆಂಡ್ ಹ್ಯಾಂಡ್ ಮರ್ಸಿಡಿಸ್ ಎಎಂಜಿ 63 ಎಸ್ಯುವಿ ಕಾರು ಇಡೀ ವರ್ಲ್ಡ್ ನಲ್ಲೇ ಅತ್ಯಂತ ದುಬಾರಿ ಐಷಾರಾಮಿ ಕಾರು ಎಂಬ ಹೆಸರಿಗೆ ಪಾತ್ರವಾಗಿದೆ. ಈ ಕಾರಿನ ಫೀಚರ್ಸ್ ತಿಳಿಯೋದಾದ್ರೆ ಇದರಲ್ಲಿ 4.0 ಲೀಟರ್ ವಿ8ಬಿ ಟರ್ಬೋ ಪೆಟ್ರೋಲ್ ಎಂಜಿನ್ ಇದ್ದು, 577 ಬಿಎಚ್ಪಿ ಪವರ್ ಹೊಂದಿದ್ದು, 850 ಎನ್ಎಮ್ ಟಾರ್ಕ್ ಅನ್ನ ಉತ್ಪಾದನೆ ಮಾಡುತ್ತದೆ. ಹೆಚ್ಚುವರಿಯಾಗಿ ಈ ಕಾರು ಬಾಕ್ಸೀ ಅಂಡ್ ಐಕಾನಿಕ್ ಡಿಸೈನ್ ಹೊಂದಿದ್ದು, ಐಷಾರಾಮಿ ಕಾರು ಪ್ರಿಯರನ್ನ ಬಹುಬೇಗ ತನ್ನತ್ತ ಸೆಳೆದುಕೊಳ್ಳುತ್ತದೆ.

Leave a Reply

%d bloggers like this: