ಒಬ್ಬ ಬಾಲಕಿಗಾಗಿ ಚಲಿಸುತ್ತಿದೆ ಟ್ರೈನ್! ಸರ್ಕಾರಕ್ಕೆ ಎಷ್ಟೇ ನಷ್ಟವಾದರೂ ಬಂದ್ ಮಾಡಲು ಆಗುತ್ತಿಲ್ಲ,ರೋಚಕ ಕಥೆ ಓದಿ ಒಮ್ಮೆ

993578_1109782685729217_3951805481377862073_n.jpg

ಒಬ್ಬಳೇ ಒಬ್ಬ ವಿಧ್ಯಾರ್ಥಿನಿಯ ವಿಧ್ಯಾಭ್ಯಾಸಕ್ಕಾಗಿ ಅಡಚಣೆ ಆಗಬಾರದು ಎಂದು ಸಂಪೂರ್ಣವಾಗಿ ಒಂದು ರೈಲನ್ನೇ ಸಂಚಾರ ‌ಮಾಡಿಸುತ್ತಿದೆ ಜಪಾನ್ ಸರ್ಕಾರ.ಇತ್ತೀಚೆಗೆ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ, ಶಾಲೆಯಲ್ಲಿ ಹಾಜರಾತಿ ಕಡಿಮೆ ಇದೆ ಎಂದು ಸರ್ಕಾರಗಳು ಇಡೀ ಶಾಲೆಯನ್ನೇ ಮುಚ್ಚಿಸುವುದಕ್ಕೆ ಆದೇಶ ಮಾಡುತ್ತವೆ.ಅಂತಹದರಲ್ಲಿ ಜಪಾನ್ ಸರ್ಕಾರ ಒಂದು ಹೆಣ್ಣು ಮಗಳೊಬ್ಬಳ ವಿಧ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂದು ಸಾರಿಗೆ ಸಂಪರ್ಕ ಇಲ್ಲದ ಗ್ರಾಮಕ್ಕೆ ರೈಲಿನ ವ್ಯವಸ್ದೆ ಮಾಡಿದೆ.ಜಪಾನ್ ಸರ್ಕಾರದ ಈ ಒಂದು ಉತ್ತಮ ಕಾರ್ಯಕ್ಕೆ ಜಗತ್ತಿನೆಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಶಿಕ್ಷಣ ಪಡೆಯುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು.ಶಿಕ್ಷಣವನ್ನು ಕಡ್ಡಾಯವಾಗಿ ಎಲ್ಲಾ ಮಕ್ಕಳು ಕೂಡ ಪಡೆಯಬೇಕು.ಶಿಕ್ಷಣದಿಂದ ಯಾರೂ ಕೂಡ ವಂಚಿತರಾಗಬಾರದು ಎಂಬುದು ಆಶಯವಾಗಿರುತ್ತದೆ.

ಅದರಂತೆ ಶಿಕ್ಷಣದ ಮಹತ್ವ ಎಂತಾದ್ದು ಎಂಬುದಕ್ಕೆ ಜಪಾನ್ ಸರ್ಕಾರದ ಈ ನಿರ್ಧಾರ ನಿಜಕ್ಕೂ ಕೂಡ ಇತರೆ ದೇಶಗಳಿಗೆ ಮಾದರಿಯಾಗಿದೆ ಎನ್ನಬಹುದು.ಜಪಾನಿನ ಹೊಕಾಯಿದೊದಾ ಕಮಿ ಶರತಾಕಿ ಎಂಬ ಗ್ರಾಮಕ್ಕೆ ಯಾವುದೇ ರೀತಿಯ ಸಾರಿಗೆ-ಸಂಪರ್ಕ ವ್ಯವಸ್ಥೆಗಳು ಇರುವುದಿಲ್ಲ.ರೈಲಿನ ವ್ಯವಸ್ಥೆ ಇದ್ದರು ಕೂಡ ಈ ಪ್ರದೇಶದಲ್ಲಿ ಹೆಚ್ಚು ಪ್ಯಾಸೆಂಜರ್ ಬರುವುದಿಲ್ಲ ಎಂಬ ಕಾರಣಕ್ಕೆ ಈ ಗ್ರಾಮದ ಮುಖಾಂತರ ಹೋಗುವ ರೈಲನ್ನು ಜಪಾನ್ ಸರ್ಕಾರ ಆರಂಭದಲ್ಲಿ ಸ್ಥಗಿತಗೊಳಿಸುತ್ತದೆ. ಆದರೆ ಇಲ್ಲಿನ ಗ್ರಾಮದಲ್ಲಿ ಯುವತಿ ಒಬ್ಬಳು ತನ್ನ ಶಾಲೆಗೆ ಹೋಗಲು ಪರ್ವತ,ನದಿಗಳು,ಬೆಟ್ಟ-ಗುಡ್ಡಗಳನ್ನ ದಾಟಿ ಕಾಲುದಾರಿಯಲ್ಲಿ ನಡೆದು ಹೋಗಬೇಕಾದ ಅನಿವಾರ್ಯ ಇದೆ ಎಂಬುದನ್ನು ಸಮೀಕ್ಷಾ ವರದಿ ಮುಖಾಂತರ ಸರ್ಕಾರ ತಿಳಿಯುತ್ತದೆ.

ಇಂತಹ ಮೂಲಭೂತ ಸೌಕರ್ಯ ವಂಚಿತವಾಗಿರುವ ಈ ಗ್ರಾಮಕ್ಕೆ ಯಾವುದೇ ಕಾರಣಕ್ಕೂ ರೈಲಿನ ಸಂಪರ್ಕವನ್ನು ನಿಲ್ಲಿಸಬಾರದು ಎಂದು ಜಪಾನ್ ಸರ್ಕಾರ ಈ ಹಳ್ಳಿಗೆ ರೈಲಿನ ಸಂಪರ್ಕವನ್ನು ಪುನರ್ ಆರಂಭಿಸುತ್ತದೆ.ಇಂದಿಗೂ ಕೂಡ ಈ ರೈಲಿನಲ್ಲಿ ಒಬ್ಬ ಹುಡುಗಿ ಮಾತ್ರ ಪ್ರಯಾಣ ಮಾಡುತ್ತಾಳೆ.ಬೆಳಿಗ್ಗೆ ಶಾಲಾ ಸಮಯಕ್ಕೆ ರೈಲು ಬರುತ್ತದೆ.ಮತ್ತೆ ಸಂಜೆ ಶಾಲೆಯಿಂದ ಮನೆಗೆ ಇದೇ ರೈಲಿನಲ್ಲಿ ಈ ಪ್ರೌಢಶಾಲಾ ವಿಧ್ಯಾರ್ಥಿನಿ ಬಂದಿಳಿಯುತ್ತಾಳೆ.

Leave a Reply

%d bloggers like this: